Darshan Thoogudeepa: ದರ್ಶನ್ ನೆನೆದು ಭಾವುಕರಾದ ತರುಣ್ ಸುಧೀರ್

ಬೆಂಗಳೂರು, ಆಗಸ್ಟ್‌ 03: ತರುಣ್ ಸುಧೀರ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. ನಟಿ ಸೋನಲ್ ಮೊಂತೆರೋ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸದ್ಯ ಈ ಇಬ್ಬರು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದು, ಸದ್ಯದ್ಲೇ ತರುಣ್‌ ಸುಧೀರ್‌ ಹಾಗೂ ಸೋನಲ್‌ ಅವರು ಮದುವೆಯಾಗುತ್ತಿದ್ದಾರೆ.

ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಸುದ್ದಿ ಜೋರಾಗಿದೆ. ಇನ್ನು ಕೆಲವೇ ದಿನಗಳು ಮದುವೆಗೆ ಬಾಕಿ ಇವೆ. ಈ ನಡುವೆ ತರುಣ್ ಅವರು ಸುದ್ದಿಗೋಷ್ಠಿ ಮಾಡಿದ್ದು ಮದುವೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್‌ ಅವರನ್ನ ನೆನೆಪು ನಿರ್ದೇಶಕ ತರುಣ್‌ ಸುಧೀರ್‌ ಭಾವುಕರಾಗಿದ್ದಾರೆ. ದರ್ಶನ್ ಸರ್ ನೋಡಲು ಜೈಲಿಗೆ ಹೋದಾಗ ಅವರು ಮದುವೆ ಪ್ರಿಪರೇಷನ್ ಬಗ್ಗೆ ಮಾತನಾಡಿದ್ದರು.

Tarun Sudhir Is Emotional Remembering Darshan

ದರ್ಶನ್‌ ಅವರನ್ನು ಭೇಟಿ ಮಾಡಿದ್ದಾಗ ನಾನು ತುಂಬಾ ಎಮೋಷನಲ್ ಆಗಿದ್ದೆ. ಯಾವುದೇ ಕಾರಣಕ್ಕೂ ಡೇಟ್ ಮುಂದೆ ಹಾಕಬೇಡ ಎಂದು ಹೇಳಿದ್ದರು. ಅವರು ಡೇಟ್ ಮುಂದೂಡಬೇಡ ಎಂದು ಹೇಳದಿದ್ದರೇ ನಾನು ಡೇಟ್ ಮುಂದುಡುತ್ತಿದ್ದೆ. ಮದುವೆ ಕುರಿತು ದರ್ಶನ್‌ ಅವರ ಜೊತೆಗೆ ಮಾತನಾಡಿದ್ದೆ. ಅವರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ತರುಣ್‌ ಸುಧೀರ್‌ ಅವರು ಭಾವುಕರಾಗಿದ್ದಾರೆ.

ಇನ್ನೂ ಮಾತು ಮುಂದುವರೆಸಿದ ಈ ಜೋಡಿ ತಮ್ಮ ಲವ್​ಸ್ಟೋರಿ ಬಗ್ಗೆಯೂ ಸ್ವಲ್ಪ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ನನ್ನ ಸೋನಲ್ ಪರಿಚಯ ರಾಬರ್ಟ್ ಸಿನಿಮಾದ ಟೈಮ್ ನಲ್ಲಿ. ಆದರೆ ನನ್ನ ಸೋನಲ್ ಪ್ರೀತಿ ರಾಬರ್ಟ್ ಸಿನಿಮಾದಿಂದ ಶುರುವಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 2003ರಿಂದ ನನ್ನ ಮತ್ತು ಸೋನಲ್ ಬಾಂಡಿಂಗ್ ಶುರುವಾಗಿದ್ದು ಕಾಟೇರ ಶುರುವಾಗಿದ್ದಾಗ ಎಲ್ಲರೂ ನೀವು ಒಳ್ಳೆ ಫೇರ್ ಎಂದು ಹೇಳುತ್ತಿದ್ದರು.

ಸೋನಲ್ ಕಾಲ್ ಮಾಡಿ ನಮ್ಮಿಬ್ಬರ ನಡುವೆ ಡೇಟಿಂಗ್ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂಬ ವಿಷಯ ಕೂಡಾ ಹೇಳಿದ್ದರು ಎಂದು ತರುಣ್ ಸುಧೀರ್‌ ಅವರು ಹೇಳಿದ್ರು. ಫೆಬ್ರವರಿಯಲ್ಲಿ ನಾವು ಪರಸ್ಪರ ಮಾತಾನಾಡಲು ಶುರು ಮಾಡಿದೆವು. ಇಬ್ಬರು ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು. ಕಾಟೇರ ರಿಲೀಸ್ ಬಳಿಕ ಸೋನಲ್ ಮನೆಗೆ ಹೋಗಿ ನಾವು ಮಾತನಾಡಿದೆವು. ಧರ್ಮದ ಬಗ್ಗೆ ಯಾವುದೇ ಕಂಪ್ಲಿಕೇಷನ್ ಬಂದಿಲ್ಲ. ಧರ್ಮದ ವಿಚಾರದಲ್ಲಿ ಮನೆಯಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಇಬ್ಬರು ಪರಸ್ಪರ ಧರ್ಮವನ್ನು ಗೌರವಿಸುತ್ತೇವೆ. ಇಬ್ಬರ ಯೋಚನೆ ಒಂದೇ ಇದೆ ಎಂದು ಸೋನಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+