Bigg Boss: ಗಂಡಸರ ಜೊತೆ ಅಲ್ಲಿ ಮಲಗಬೇಕು: ₹1.65 ಕೋಟಿ ಕೊಟ್ರೂ ಬಿಗ್‌ಬಾಸ್‌ಗೆ ಹೋಗಲ್ಲ ಎಂದ ನಟಿ

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಒಂದು ಚಾನ್ಸ್‌ ಸಿಕ್ಕರೆ ಸಾಕು ಅನ್ನೋದು ಎಷ್ಟೋ ಮಂದಿಯ ಕನಸು. ಶೋನಲ್ಲಿ ಟ್ರೋಫಿ ಗೆಲ್ಲದಿದ್ರೂ ಪರವಾಗಿಲ್ಲ, ಸ್ಪರ್ಧಿಯಾಗಿ ಒಂದಷ್ಟು ದಿನ ಬಿಗ್‌ಬಾಸ್‌ ಮನೆಯಲ್ಲಿ ಮಿಂಚಲು ಅವಕಾಶ ಕೊಟ್ಟರೆ ಸಾಕು ಎಂದು ದೇವರಲ್ಲಿ ಕೇಳಿಕೊಳ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಂಡರೆ ನೇಮ್‌ ಫೇಮ್‌ ಎಲ್ಲ ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಖ್ಯಾತಿ ನಟಿಗೆ ಕೋಟಿ ಕೋಟಿ ಆಫರ್‌ ಮಾಡಿದರೂ ನಾನು ಬಿಗ್‌ಬಾಸ್‌ಗೆ ಹೋಗಲ್ಲ ಎಂದು ನೇರವಾಗಿ ತಿರಸ್ಕರಿಸಿದ್ದಾರೆ. ಇದಕ್ಕೆ ಶಾಕಿಂಗ್‌ ಕಾರಣ ನೀಡಿರುವ ನಟಿ, ಬಿಗ್‌ಬಾಸ್‌ ಮನೆಯಲ್ಲಿ ಗಂಡಸರೊಂದಿಗೆ ಆ ಕೆಲಸ ಮಾಡಬೇಕು. ಅದು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಬಿಗ್‌ಬಾಸ್‌ ಆಫರ್‌ ಬಂದ ಕೂಡಲೇ ಹಿಂದೆ ಮುಂದೆ ನೋಡದೆ ಜನ ಒಪ್ಪಿಕೊಳ್ತಾರೆ. ಆದರೆ ಕೋಟಿಗಟ್ಟಲೆ ಸಂಭಾವನೆ ಕೊಡ್ತೀವಿ ಬನ್ನಿ ಎಂದು ಬಿಗ್‌ಬಾಸ್‌ಗೆ ಕರೆದರೂ ನಟಿ ನೋ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲಿ ಒಬ್ಬ ಪುರುಷನೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗಬೇಕು. ರಿಯಾಲಿಟಿ ಶೋಗಾಗಿ ಪುರುಷನೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುವ ಮಹಿಳೆಯಂತೆ ನಾನು ಕಾಣುತ್ತೀನಾ? ಎಂದು ಗರಂ ಆಗಿ ಹೇಳಿದ್ದಾರೆ.

Tanushree Dutta Rejects 1 65 Crore Bigg Boss Offer

ಬಾಲಿವುಡ್‌ನ ಖ್ಯಾತ ನಟಿ ತನುಶ್ರೀ ದತ್ತಾ ಅವರಿಗೆ ಬಿಗ್‌ಬಾಸ್‌ನಿಂದ ಆಫರ್‌ ಬಂದಾಗ ಈ ಕಾರಣ ನೀಡಿ ನಿರಾಕರಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ತನುಶ್ರೀ ದತ್ತಾ ಈ ವಿಚಾರ ಬಹಿರಂಗಪಡಿಸಿದ್ದಾರೆ. '11 ವರ್ಷಗಳಿಂದಲೂ ನನಗೆ ಬಿಗ್‌ಬಾಸ್ ಆಫರ್ ಬರುತ್ತಿದೆ. ಈ ಬಾರಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್‌ಬಾಸ್ 19ನೇ ಸೀಸನ್‌ನಿಂದಲೂ ಬಂದ ₹1.65 ಕೋಟಿ ಆಫರ್ ತಿರಸ್ಕರಿಸಿದೆ. ನಾನು ಅಂತಹ ಸ್ಥಳದಲ್ಲಿ ಉಳಿಯಲು ಸಾಧ್ಯವಿಲ್ಲ' ಎಂದಿದ್ದಾರೆ.

'ನಾನು ಅಷ್ಟೊಂದು ಚೀಪ್‌ ಅಲ್ಲ'

'ಅಲ್ಲಿ ಗಂಡಸರು, ಮಹಿಳೆಯರು ಒಂದೇ ಹಾಲ್‌ನಲ್ಲಿ ಮಲಗುತ್ತಾರೆ, ಜಗಳವಾಡುತ್ತಾರೆ. ನನ್ನಿಂದ ಅದೆಲ್ಲ ಸಾಧ್ಯವಿಲ್ಲ. ರಿಯಾಲಿಟಿ ಶೋಗಾಗಿ ಪುರುಷನೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುವ ಮಹಿಳೆ ನಾನಲ್ಲ. ನಾನು ಅಷ್ಟೊಂದು ಕೆಳಮಟ್ಟಕ್ಕೆ ಇಳಿದವಳಲ್ಲ. ನನ್ನ ಘನತೆ ನನಗೆ ಅಮೂಲ್ಯವಾದುದು. ನಾನು ಅದಕ್ಕಿಂತ ಹೆಚ್ಚಿನದನ್ನು ಇಲ್ಲಿಯೇ ಗಳಿಸಬಹುದು ಅನ್ನೋದು ಗೊತ್ತಿದೆ' ಎಂದು ತನುಶ್ರೀ ದತ್ತಾ ಬಿಗ್‌ಬಾಸ್‌ ಆಫರ್‌ ತಿರಸ್ಕರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

'ನಾನು ಆ ರೀತಿಯ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ನೀವು ನಿಜವಾಗಿಯೂ ಭಾವಿಸುತ್ತೀರಾ? ಎಂದು ಕೇಳಿದ್ದಾರೆ. ನಾನು ನನ್ನ ಸ್ವಂತ ಕುಟುಂಬದೊಂದಿಗೆ ಸಹ ಅಲ್ಲಿ ಇರುವುದಿಲ್ಲ. ನನಗೆ ಬಿಗ್‌ಬಾಸ್‌ನಲ್ಲಿ ಎಂದಿಗೂ ಆಸಕ್ತಿ ಇಲ್ಲ, ಮುಂದೆಯೂ ಇರಲ್ಲ. ಆ ಕಾರ್ಯಕ್ರಮಕ್ಕೆ ಹೋಗಲು ಅವರು ನನಗೆ ₹1.65 ಕೋಟಿ ಆಫರ್ ನೀಡಿದ್ದಾರೆ. ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಗೂ ಅದೇ ಮೊತ್ತದ ಸಂಭಾವನೆ ನೀಡಿದ್ದಾರೆ. ಬಿಗ್‌ಬಾಸ್‌ ಸ್ಟೈಲಿಸ್ಟ್ ಕೂಡ ನನಗೆ ಕರೆ ಮಾಡಿ ಮನವಿ ಮಾಡಿಕೊಂಡರು. ನನ್ನ ಆಹಾರಕ್ರಮವನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ರು. ಆದ್ರೆ ಚಂದ್ರನ ಒಂದು ತುಂಡನ್ನು ಕೊಟ್ಟರೂ ನಾನು ಅಲ್ಲಿಗೆ ಬರಲ್ಲ ಎಂದು ಹೇಳಿದೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+