ವಿಜಯ ಯಾತ್ರೆಗೆ ಸಿದ್ಧರಾದ ಡಾಲಿ ಧನಂಜಯ್: ಯಾಕೆ ಗೊತ್ತಾ?
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು, ಒಂದೇ ಒಂದು ಬ್ರೇಕ್ ಸಿಗಲಿ ಅಂತಾ ಕಾಯುತ್ತಿದ್ದ ಡಾಲಿ ಧನಂಜಯ್‌ಗೆ ಸಾಲು ಸಾಲು ಸೋಲುಗಳೇ ಬೆನ್ನು ಹತ್ತಿದ್ದವು. ಆದರೆ ಈ ನಟನಿಗೆ ಕೈಹಿಡಿದ ಸಿನಿಮಾ ಅಂದ್ರೆ, ಅದು 'ಟಗರು'. ನಟ ಶಿವಣ್ಣ ಅಭಿನಯಿಸಿದ್ದ ಈ ಸಿನಿಮಾ ಕನ್ನಡಿಗರ ಮನಸ್ಸು ಮಾತ್ರವಲ್ಲ, ಇಡೀ ಭಾರತದ ಹೃದಯ ಗೆದ್ದಿತ್ತು. ಈ ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿ ಹೊಸ ಹಾದಿಗೆ ಹೆಜ್ಜೆ ಇಟ್ಟರು ನಟರಾಕ್ಷಸ ಡಾಲಿ ಧನಂಜಯ್.
ಇನ್ನು ಇಂತಿಪ್ಪ ಡಾಲಿಗೆ 'ಟಗರು' ಎಂಬ ಹೆಸರೇ ಪದೇ ಪದೆ ಲಕ್ ಕೊಡ್ತಿದ್ದು, ಈಗಲೂ 'ಟಗರು ಪಲ್ಯ' ಕೈಹಿಡಿದಿದೆ. ಕನ್ನಡಿಗರ ಸಿನಿಮಾಗಳು ಅಬ್ಬರಿಸುವಾಗ, ಅದರಲ್ಲೂ KGF ಮತ್ತು ಕಾಂತಾರಾ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿ ಹೆಸರನ್ನ ಬೇರೆ ಲೆವೆಲ್‌ಗೆ ತಲುಪಿಸಿ ಅಚ್ಚರಿ ಮೂಡಿಸಿವೆ. ಹೀಗಾಗಿ ಸಾಲು ಸಾಲು ಸಿನಿಮಾಗಳು ಬೇರೆ ಭಾಷೆಯ ಜನರನ್ನು ಸೆಳೆದು, ನಮ್ಮ ನೆಲದ ಇಂಡಸ್ಟ್ರಿಯನ್ನು ಬೆಳೆಸುತ್ತಿವೆ. ಇದೀಗ ಡಾಲಿ ಹಣ ಹಾಕಿರುವ 'ಟಗರು ಪಲ್ಯ' ಅಬ್ಬರಿಸಿ ಬೊಬ್ಬಿರಿದು ಸಖತ್ ಸಕ್ಸಸ್ ಕಂಡಿದೆ. ಹೀಗಾಗಿಯೇ ಡಾಲಿ ಧನಂಜಯ್ ವಿಜಯ ಯಾತ್ರೆ ಆರಂಭಿಸಲು ಮುಂದಾಗಿದ್ದಾರೆ.

'ಟಗರು ಪಲ್ಯ' ವಿಜಯಯಾತ್ರೆ ಶುರು!
ಅಂದಹಾಗೆ ನಾಳೆಯಿಂದ 'ಟಗರು ಪಲ್ಯ' ತಂಡ ವಿಜಯಯಾತ್ರೆ ಆರಂಭಿಸಲಿದ್ದು, ಹಳೇ ಮೈಸೂರು ಭಾಗದಲ್ಲಿ ಮೊದಲು ಅಬ್ಬರಿಸಲು ಸಜ್ಜಾಗುತ್ತಿದೆ. ಕೊಳ್ಳೇಗಾಲ, ಮಂಡ್ಯ ಸೇರಿ ಬೆಳಕವಾಡಿ, ಮಳವಳ್ಳಿ & ಮೈಸೂರು ಮಾರ್ಗವಾಗಿ ಮೊದಲಿಗೆ 'ಟಗರು ಪಲ್ಯ' ತಂಡದ ವಿಜಯಯಾತ್ರೆ ಸಾಗಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಡೀ ರಾಜ್ಯದ ಮನಸ್ಸು ಗೆದ್ದಿರುವ ಈ ಸಿನಿಮಾ ತಂಡದ ಕಲಾವಿದರು ಅಭಿಮಾನಿಗಳನ್ನ ನೇರವಾಗಿ ಭೇಟಿ ಆಗಿ ಅಭಿನಂದಿಸಲಿದ್ದಾರೆ.
ಹೆಚ್ಚಾದ 'ಟಗರು ಪಲ್ಯ' ಶೋ ಸಂಖ್ಯೆ
ಕರ್ಮಷಿಯಲ್ & ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ಮಧ್ಯೆ ಕಳೆದವಾರ ತೆರೆಗೆ ಬಂದಿದ್ದ ಹಳ್ಳಿ ಸೊಗಡಿನ ಟಗರು ಪಲ್ಯ ಚಿತ್ರವನ್ನ ಪ್ರೇಕ್ಷಕ ಎಂಜಾಯ್ ಮಾಡಿದ್ದಾನೆ. ಮೊನ್ನೆ ಮೊನ್ನೆ ಅಂದ್ರೆ ಅಕ್ಟೋಬರ್ 27ರ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದ 'ಟಗರು ಪಲ್ಯ' ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ ಟಗರು ಪಲ್ಯ ಟೀಂ.

ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರವಾಗಿರುವ ಟಗರು ಪಲ್ಯ ಸಿನಿಮಾಗೆ ಉಮೇಶ್ ಕೆ ಕೃಪಾ ಆಕ್ಷನ್ & ಕಟ್ ಹೇಳಿದ್ದಾರೆ. ಮೊದಲ ಹೆಜ್ಜೆಯಲ್ಲಿ ಬಂಪರ್ ಸಿಕ್ಕಂತಗಿದೆ. ಹಿರಿಯ ನಟಿ ತಾರಾ ಮತ್ತು ರಂಗಾಯಣ ರಘು ನಟನೆಗೆ ಪ್ರೇಕ್ಷಕ ಮತ್ತೆ ಫಿದಾ ಆಗಿದ್ದಾನೆ ಒಟ್ನಲ್ಲಿ ಕನ್ನಡಿಗರ ಸಿನಿಮಾಗಳು ಇದೇ ರೀತಿ ಸದ್ದು ಮಾಡಲಿ ಅಂತಾ ಫ್ಯಾನ್ಸ್ ಕೂಡ ಆಶಿಸುತ್ತಿದ್ದಾರೆ. ಮುಂದೆಯು ಇಂತಹದ್ದೇ ಸಾಲು ಸಾಲು ಕನ್ನಡದ ಹಿಟ್ ಸಿನಿಮಾಗಳು, ತೆರೆಗೆ ಬರಲು ಸಿದ್ಧತೆ ನಡೆಸಿವೆ.












Click it and Unblock the Notifications