‘ಸಂಬಂಜ ಅನ್ನೋದು ದೊಡ್ದು ಕನಾ’ ಅಂತಿದ್ದಾರೆ ಡಾಲಿ, ಯಾಕೆ ಗೊತ್ತಾ?
ಡಾಲಿ ಧನಂಜಯ್ ಪ್ರೊಡ್ಯೂಸರ್ ಡಾಲಿ ಆಗಿ ಮಿಂಚುತ್ತಿದ್ದಾರೆ. ಅದ್ರಲ್ಲೂ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಾಪಕನಾಗಿಯೂ ಡಾಲಿ ಕೊಡ್ತಿದ್ದಾರೆ. ಇದೀಗ ಧನಂಜಯ್‌ರ 'ಟಗರು ಪಲ್ಯ' ಸಿನಿಮಾ ಕೂಡ ಅದೇ ಸಾಲಿಗೆ ಸೇರುವ ನಿರೀಕ್ಷೆ ಇದ್ದು, ಈಗಾಗಲೇ ತನ್ನ ಟ್ರೇಲರ್ ಮೂಲಕ ನಿರೀಕ್ಷೆ ಭಾರ ಹೆಚ್ಚಿಸಿರುವ 'ಟಗರು ಪಲ್ಯ' ಟೀಂ ಸರ್ಪ್ರೈಸ್ ಕೊಟ್ಟಿದೆ. ಹಾಗಾದರೆ ಹಬ್ಬದ ದಿನ ಸಿಕ್ಕ ಸರ್ಪ್ರೈಸ್ ಏನು?
ಡಾಲಿ ಧನಂಜಯ್ ನಿರ್ಮಾಣದಲ್ಲಿ ತಯಾರಾಗಿರುವ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ 'ಟಗರು ಪಲ್ಯ' ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಶುಕ್ರವಾರದಂದು ರಾಜ್ಯಾದ್ಯಂತ ಟಗರು ಪಲ್ಯ ಅಬ್ಬರ ಶುರುವಾಗುವ ನಿರೀಕ್ಷೆ ಇದೆ. ಹೀಗಾಗಿ ಇಂದು, ಹಬ್ಬದ ವಿಶೇಷವಾಗಿ 'ಸಂಬಂಜ ಅನ್ನೋದು ದೊಡ್ದು ಕನಾ' ಎಂಬ ಹಾಡು ಡಾಲಿ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್ ಮೂಲಕ ಅದ್ಧೂರಿಯಾಗಿ ರಿಲೀಸ್ ಆಗಿದೆ. ಈ ಮೂಲಕ ಸಂಬಂಧ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೆಚ್ಚಿದ 'ಟಗರು ಪಲ್ಯ'!
ಮತ್ತೊಂದು ಕಡೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ 'ಟಗರು ಪಲ್ಯ' ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ನೋಡುವುದಾಗಿಯೂ ತಿಳಿಸಿದ್ದಾರೆ. ಅಕ್ಟೋಬರ್ 27ಕ್ಕೆ ಅಂದರೆ ಇದೇ ಶುಕ್ರವಾರ ಟಗರು ಪಲ್ಯ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಅಲ್ಲದೆ ಫ್ಯಾನ್ಸ್ ಪಾಲಿನ ಪ್ರೀತಿಯ ನಟ ಡಿ-ಬಾಸ್ ದರ್ಶನ್ ಅವ್ರು ಕೂಡ 'ಟಗರು ಪಲ್ಯ'ಗೆ ಸಾಥ್ ನೀಡಿದ್ದಾರೆ. ಹೀಗೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಡಾಲಿ ನಿರ್ಮಾಣದ ಮತ್ತೊಂದು ಸಿನಿಮಾ ಟಗರು ಪಲ್ಯ ಮುಂದೆ ಯಾವೆಲ್ಲಾ ದಾಖಲೆ ಕ್ರಿಯೇಟ್ ಮಾಡುತ್ತೆ? ಅಂತಾ ಈಗ ಅಭಿಮಾನಿಗಳು ಕಾಯುತ್ತಿದ್ದಾರೆ.
ಹೇಗಿದೆ 'ಟಗರು' ಸಿನಿಮಾ ಟೀಂ?
'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದ ಕನ್ನಡಿಗರ ಗಮನ ಸೆಳೆದಿತ್ತು. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಒಟ್ನಲ್ಲಿ, ಡಾಲಿ ಧನಂಜಯ್ ಮತ್ತೊಂದು ಸ್ಪೆಷಲ್ ಸಿನಿಮಾವನ್ನ ಕನ್ನಡಿಗರ ಎದುರಿಗೆ ಇಡಲು ಸಜ್ಜಾಗಿದ್ದಾರೆ. ಹೀಗಾಗಿ ಅಭಿಮಾನಿಗಳ ಕುತೂಹಲ ಕೂಡ ದುಪ್ಪಟ್ಟಾಗಿದೆ. ಹೀಗೆ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಸ್ಪೆಷಲ್ ಚಿತ್ರ ಕಣ್ತುಂಬಿಕೊಳ್ಳುವ ಚಾನ್ಸ್ ಸಿಕ್ಕಿದೆ ಅನ್ನೋದು ಇದೀಗ ಅಭಿಮಾನಿಗಳ ಮಾತು. ಈ ಮೂಲಕ ಚಿತ್ರ ತಂಡ ಸಿನಿಮಾ ರಿಲೀಸ್‌ಗೆ ಪ್ರಮೋಷನ್ ಕೂಡ ಶುರು ಮಾಡಿದೆ.












Click it and Unblock the Notifications