ಪವಿತ್ರಾ ಗೌಡ ದರ್ಶನ್‌ಗೆ ಏನಾಗಬೇಕು? ಸುಪ್ರೀಂ ಪ್ರಶ್ನೆಗೆ ಸಿಕ್ತು ಉತ್ತರ

ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಜೈಲಿನಿಂದ ಹೊರಬಂದರೂ ಸಂಕಷ್ಟಗಳು ದೂರವಾಗುತ್ತಿಲ್ಲ. ಹೈಕೋರ್ಟ್ ದರ್ಶನ್‌ಗೆ ನೀಡಿದ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಹೀಗಾಗಿ ಸುಪ್ರೀಂ ಅಂಗಳದಲ್ಲಿ ಇರುವ ಈ ವಿಚಾರ ಎಲ್ಲಿಗೆ ಬಂದು ನಿಲ್ಲಲಿದೆ ಎನ್ನುವ ಆತಂಕದಲ್ಲಿ ದಾಸ ದಿನದೂಡುವಂತಾಗಿದೆ. ಇದರೊಂದಿಗೆ ಪವಿತ್ರಾ ಗೌಡ ದರ್ಶನ್‌ಗೆ ಏನಾಗಬೇಕು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹೌದು ಕಳೆದ ದಿನ (ಏಪ್ರಿಲ್ 22) ಸುಪ್ರೀಂ ಕೋರ್ಟ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಎ2 ಆರೋಪಿ ದರ್ಶನ್‌ಗೆ ಏನಾಗಬೇಕು ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ. ಮಹದೇವರ್ ಅವರಿದ್ದ ದ್ವಿ ಸದಸ್ಯ ಪೀಠ ಈ ಪ್ರಶ್ನೆಯನ್ನು ಮಾಡಿದೆ.

supreme court asked about pavithra gowda darshan thoogudeepa relationship

ಈ ಪ್ರಶ್ನೆಗೆ ಉತ್ತರ ನೀಡಿದ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ, ದರ್ಶನ್‌ಗೆ ಪವಿತ್ರಾ ಗೌಡ ಮಿಸ್ಟ್ರೆಸ್ ಆಗಬೇಕು ಎಂದಿದ್ದಾರೆ. ಮಿಸ್ಟ್ರೆಸ್ ಅಂದರೆ ವಿವಾಹಿತ ಪುರುಷನ ಜೊತೆಗೆ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆ ಎಂದು ಕರೆಯಲಾಗುತ್ತದೆ. ಅಂದರೆ ಅನೈತಿಕ ಸಂಬಂಧ ಇಟ್ಟುಕೊಂಡವರು ಎಂದರ್ಥ.

ಹಿಂದೊಮ್ಮೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪವಿತ್ರಾ ಗೌಡರನ್ನ ದರ್ಶನ್ ಪತ್ನಿ ಎಂದು ಹೇಳಿದ್ದರು. ಆಗ ವಿಜಯಲಕ್ಷ್ಮೀ ಬಿ ದಯಾನಂದ್ ಅವರಿಗೆ ಪತ್ರ ಬರೆದು ದರ್ಶನ್‌ಗೆ ನಾನು ಮಾತ್ರ ಏಕೈಕ ಪತ್ನಿ. ನನ್ನನ್ನು ಹೊರತು ಬೇರೆ ಯಾರೂ ಕೂಡ ಪತ್ನಿ ಇಲ್ಲ ಎಂದು ಹೇಳಿದ್ದರು. ಆ ಬಳಿಕ ದರ್ಶನ್‌ಗೆ ಪವಿತ್ರಾ ಗೌಡ ಗೆಳತಿ ಆಗಬೇಕು ಎಂದು ಎಲ್ಲರು ಅಂದುಕೊಂಡಿದ್ದರು.

supreme court asked about pavithra gowda darshan thoogudeepa relationship

ಅಲ್ಲದೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ಪವಿತ್ರಾ ಗೌಡ ನಮ್ಮ ಪ್ರೀತಿಗೆ ಹತ್ತು ವರ್ಷ ಕಳೆದಿವೆ ಎಂದಿದ್ದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೆಂಡಮಂಡಲರಾಗಿ ಪ್ರತಿಕ್ರಿಯೆ ನೀಡಿದ್ದರು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಅವರಿಗೆ ಈ ವಿಚಾರದಲ್ಲಿ ಹಲವಾರು ಬಾರಿ ಜಗಳಗಳು ನಡೆದಿವೆ.

ಆದರೀಗ ಎಲ್ಲವೂ ಬದಲಾಗಿದೆ. ದರ್ಶನ್ ಜೈಲಿಗೆ ಹೋಗಿ ಬಂದ ಬಳಿಕ ಬದಲಾಗಿದ್ದಾರೆ. ಪವಿತ್ರಾ ಗೌಡ ಕಡೆಗೆ ಕಣ್ಣು ಹಾಯಿಸಿ ಕೂಡ ನೋಡುತ್ತಿಲ್ಲ. ಪತ್ನಿ ವಿಜಯಲಕ್ಷ್ಮೀ ಹಾಕಿದ ದಿಗ್ಬಂಧನದಿಂದ ದರ್ಶನ್ ಹೊರಬರುತ್ತಿಲ್ಲ. ಹೀಗಾಗಿ ಸುಬ್ಬ ಸುಬ್ಬಿ ದೂರ ದೂರವಾಗಿದ್ದಾರೆ.

Take a Poll

ಇತ್ತ ದರ್ಶನ್ ತಾನಾಯ್ತು ತನ್ನ ಶೂಟಿಂಗ್ ಚಿಕಿತ್ಸೆ ಆಯ್ತು ಅಂತ ಓಡಾಡಿಕೊಂಡಿದ್ದಾರೆ. ಪ್ರಸ್ತುತ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ದರ್ಶನ್ ಶೂಟಿಂಗ್‌ಗಾಗಿ ರಾಜಸ್ಥಾನಕ್ಕೆ ತೆರಳಿದ್ದರು. ಇದೀಗ ಬೆಂಗಳೂರಿನಲ್ಲಿ ಶೂಟಿಂಗ್ ಮುಂದುವರೆಸಿದ್ದಾರೆ. ಇದರ ನಡುವೆ 'ವಾಮನ' ಸಿನಿಮಾ ನೋಡಿ ದರ್ಶನ್ ಫೀಡ್‌ಬ್ಯಾಕ್ ಕೊಟ್ಟಿದ್ದರು. ಈ ಸಿನಿಮಾ ಕ್ಲಿಕ್ ಆಗುವುದಕ್ಕಿಂತ ಆ ಸಿನಿಮಾದ ಒಂದು ಹಾಡು ಮಾತ್ರ ಭಾರೀ ವೈರಲ್ ಆಗಿದೆ.

ಹೀಗೆ ಕಳೆದ ಬಾರಿ ಕೋರ್ಟ್ ವಿಚಾರಣೆಗೆ ದರ್ಶನ್ ಹಾಜರಾಗದೆ ಬೆನ್ನು ನೋವಿನ ಕಾರಣ ನೀಡಿ 'ವಾಮನ' ಸಿನಿಮಾ ನೋಡಲು ತೆರಳಿದ್ದರು. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಸಾಕಷ್ಟು ಜನ ಪ್ರಶ್ನೆ ಕೂಡ ಮಾಡಿದ್ದರು. ಇದೀಗ ದರ್ಶನ್‌ಗೆ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎನ್ನುವ ಭಯ ಶುರುವಾಗಿದೆ.

ಕಳೆದ ದಿನ (ಏಪ್ರಿಲ್ 22) ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ರಾಜಕಾರಣಿನಾ? ಎಂದು ಪೀಠ ಪ್ರಶ್ನೆ ಮಾಡಿತ್ತು. ಆಗ ವಕೀಲರು ಅವರು ಒಬ್ಬ ಪ್ರಸಿದ್ಧ ನಟ ಎಂದು ಹೇಳಿದ್ದರು. ಜೊತೆಗೆ ಎಲ್ಲರಿಗೂ ಕೂಡ ಜಾಮೀನು ಸಿಕ್ಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ದರ್ಶನ್ ಪರ ನ್ಯಾಯಧೀಶ ಮನು ಸಿಂಘ್ವಿ ಕೂಡ ವಾದ ಮಂಡಿಸಿ, ದರ್ಶನ್ ಕೊಲೆ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿ ವಿಡಿಯೋ ಇದೆ ಎನ್ನುತ್ತಾರೆ. ಆ ವಿಡಿಯೋ ಎಲ್ಲಿದೆ ನವ್ಯಾರೂ ಕೂಡ ನೋಡಿಲ್ಲ. ಮೂರು ಸೆಕೆಂಡ್ ವಿಡಿಯೋದಲ್ಲಿ ಏನಿರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ವಾದ ವಿವಾದ ಕೇಳಿದ ಬಳಿಕ ಪೀಠ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.

ಒಟ್ಟಿನಲ್ಲಿ ದರ್ಶನ್‌ಗೆ ಮಾತ್ರ ಒಂದಾದ ನಂತರ ಒಂದರಂತೆ ಸಂಕಷ್ಟುಗಳು ಎದುರಾಗುತ್ತಲೇ ಇದ್ದು ನೆಮ್ಮದಿ ಇಲ್ಲದಂತಾಗಿದೆ. ದರ್ಶನ್ ಆರೋಗ್ಯ ಸುಧಾರಿಸಲು ಹಾಗೂ ಎಲ್ಲಾ ಸಮಸ್ಯೆಗಳಿಂದ ದೂರವಾಗಲೆಂದು ಪತ್ನಿ ವಿಜಯಲಕ್ಷ್ಮೀ ಆಗಾಗ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಮಾಡಿಸುತ್ತಲೇ ಇರುತ್ತಾರೆ. ಆದರೂ ಕೂಡ ದರ್ಶನ್ ಅವರ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆಯಾದರೂ ಕಡಿಮೆಯಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+