Bigg Boss: ಸುದೀಪ್ ಕೊನೇ ಕ್ಷಣದಲ್ಲಿ ತಾಯಿಯ ಮುಖ ನೋಡ್ದಕ್ಕೆ; ನಾನೇ ಗಿಲ್ಟ್ ಎಂದ ಜಗದೀಶ್!
ಕನ್ನಡ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರು ನಟ ಕಿಚ್ಚ ಸುದೀಪ್ ಅವರ ತಾಯಿಯ ಸಾವಿನ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಸರ್ ಅವರ ತಾಯಿಯ ಸಾವಿನ ಬಗ್ಗೆ ನನಗೆ ಗಿಲ್ಟ್ ಕಾಡ್ತಿದೆ. ನನ್ನಿಂದಲೇ ಅವರಿಗೆ ನೋವಾಯ್ತಾ ಅಂತ ಅನಿಸ್ತಿದೆ ಅಂತ ಲಾಯರ್ ಜಗದೀಶ್ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿಯ ಸಾವಿನ ಬಗ್ಗೆ ಭಾನವಾತ್ಮಕವಾಗಿ ಮಾತನಾಡಿದ್ದಾರೆ.
ಲಾಯರ್ ಜಗದೀಶ್ ಅವರಿಗೆ ಅಪಾರ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಬಿಗ್‌ಬಾಸ್‌ನಿಂದ ಹೊರಗೆ ಬಂದ ಮೇಲೆ ಆ ಫ್ಯಾನ್ಸ್ ಫಾಲೋಯಿಂಗ್ ಸ್ವಲ್ಪ ಜಾಸ್ತಿನೇ ಆಗಿದೆ. ನಟ ಕಿಚ್ಚ ಸುದೀಪ್ ಅವರ ಬಗ್ಗೆ ಲಾಯರ್ ಜಗದೀಶ್ ಅವರು ವಿಶೇಷ ಅಭಿಮಾನ ಹೊಂದಿದ್ದಾರೆ. ಈಚೆಗೆ ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದು. ನಟ ಸುದೀಪ್ ಹಾಗೂ ಅವರ ಇಡೀ ಕುಟುಂಬವೇ ದುಃಖದಲ್ಲಿ ಇದೆ.

ಇದೀಗ ಸುದೀಪ್ ಅವರ ತಾಯಿ ಅವರ ಸಾವಿನ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದು. ನನಗೆ ಈ ವಿಚಾರದಲ್ಲಿ ಗಿಲ್ಟ್ ಕಾಡ್ತಿದೆ ಅಂತ ಹೇಳಿದ್ದಾರೆ. ಸುದೀಪ್ ಅವರ ತಾಯಿ ಸಾವು ವಿಚಾರ ನನ್ನನ್ನು ಕಾಡ್ತಿದೆ. ಈ ವಿಚಾರ ಕೇಳಿದಾಗಿನಿಂದ ಗಿಲ್ಟ್ ಫೀಲ್ ಆಗ್ತಿದೆ ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಕನ್ನಡ 11ನೇ ಸೀಸನ್‌ನಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಅವರ ನಡುವೆ ಜಗಳ ನಡೆದಿತ್ತು.
ಮುಂದುವರಿದು ಈ ಇಬ್ಬರು ಸ್ಪರ್ಧಿಗಳು ಬಿಗ್‌ಬಾಸ್‌ನಿಂದ ಹೊರ ನಡೆದಿದ್ದರು. ಬಿಗ್‌ಬಾಸ್‌ನಿಂದ ಹೊರ ಬರುವ ಮುನ್ನ ಲಾಯರ್ ಜಗದೀಶ್ ಅವರು ನಾನು ಮಾಡಿದ್ದು ತಪ್ಪಾಗಿದೆ. ನನಗೆ ಇನ್ನೊಂದು ಅವಕಾಶ ಕೊಟ್ರೆ ಆಟ ಆಡ್ತೀನಿ ಅಂತ ಹೇಳಿದ್ದರು. ಆದರೆ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಜಗದೀಶ್ ಅವರು ಗಿಲ್ಟ್ ಕಾಡ್ತಿದೆ ಅಂತ ಹೇಳಿರೋದು ಇದೇ ಕಾರಣಕ್ಕೆ.
ಅಂದು ಬಿಗ್‌ಬಾಸ್‌ನಲ್ಲಿ ಜಗಳ ಆದ ಮೇಲೆ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದರು. ಅದೇ ವಾರಾಂತ್ಯವೇ ಕಿಚ್ಚ ಸುದೀಪ್ ಅವರ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ದಾಖಲಿಸಲಾಗ್ತಿದೆ ಅಂತ ಕರೆ ಬಂದಿತ್ತಂತೆ. ಆದರೆ, ಶೋ ಅರ್ಧದಲ್ಲಿ ಬಿಟ್ಟು ಹೋಗಲಾಗದ ಪರಿಸ್ಥಿತಿ ಇತ್ತಂತೆ. ಇದೇ ವಿಷಯದ ಬಗ್ಗೆ ಲಾಯರ್ ಜಗದೀಶ್ ನಾನೇ ಅವರು ಹೋಗಲಾದ ಪರಿಸ್ಥಿತಿಗೆ ಕಾರಣನಾಗಿ ಬಿಟ್ನಾ ಅಂತ ಗಿಲ್ಟ್ ಕಾಡ್ತಿದೆ ಅಂತ ಹೇಳಿದ್ದಾರೆ.
ಒಂದೊಂಮ್ಮೆ ನಾನು ಬಿಗ್‌ಬಾಸ್‌ನಲ್ಲಿ ಜಗಳ ಮಾಡಿಕೊಳ್ಳದೆ ಇದ್ದಿದ್ದರೆ, ಅವೊತ್ತು ಸುದೀಪ್ ಅವರು ರಜೆ ಮಾಡ್ತಿದ್ರು. ನನ್ನಿಂದ ಸುದೀಪ ಅವರು ಅವರ ತಾಯಿಯನ್ನು ಕೊನೆ ಕ್ಷಣದಲ್ಲಿ ನೋಡೋಕೆ ಆಗಲಿಲ್ವೇನೋ ಅಂತ ಗಿಲ್ಟ್ ಕಾಡ್ತಿದೆ. ಸುದೀಪ್ ಅವರಿ ಆ ರೀತಿ ಅನಿಸಿದ್ದರೆ, ನನ್ನನ್ನು ಕ್ಷಮಿಸಿ ಬಿಡಿ. ಅವರ ತಾಯಿಯ ಆತ್ಮಕ್ಕೂ ಶಾಂತಿ ಸಿಗಲಿ. ನಿಜವಾಗಲೂ ನಿಮ್ಮ ಮನಸ್ಸಿನಲ್ಲಿ ಆ ರೀತಿ ಭಾವನೆ ಇದ್ದರೆ, ದಯವಿಟ್ಟು ಕ್ಷಮಿಸಿ, ನಾನೇ ಕಾರಣನಾಗ್ಬಿಟ್ಟನಾ ಅನ್ನೋ ಗಿಲ್ಟ್ ನಂಗೆ ಇದೆ ಅಂತ ಹೇಳಿದ್ದಾರೆ.
ಕಿಚ್ಚ ಸುದೀಪ್ ಸರ್ ಅವರ ತಾಯಿ ನಿಧನದ ವಿಚಾರ ನನ್ನನ್ನು ಕಾಡ್ತಿದೆ. ಎಲ್ಲೋ ಒಂದುಕಡೆ ಕೊನೆ ಕ್ಷಣದಲ್ಲಿ ಮಗ ತಾಯಿಯ ಮುಖ ನೋಡದೆ ಇರೋದಕ್ಕೆ ನಾನೇ ಕಾರಣ ಆದ್ನಾ ಎನ್ನುವ ನೋವು ನನಗೆ ಇದೆ ಅಂತ ಅವರು ಹೇಳಿದ್ದಾರೆ.












Click it and Unblock the Notifications