₹1,00,00,00,000 ಕೋಟಿ..! ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? 25 ದಿನ ಪೂರೈಸಿದ 'ಸು ಫ್ರಮ್ ಸೋ'
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ 'ಸು ಫ್ರಮ್ ಸೋ' ಭರ್ಜರಿ ಯಶಸ್ಸು ಕಂಡಿದೆ. ಜನಮೆಚ್ಚಿದ 'ಸು ಫ್ರಮ್ ಸೋ' ಸಿನಿಮಾ ಪ್ರತಿ ವೀಕೆಂಡ್ನಲ್ಲೂ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಜೆ.ಪಿ. ತುಮಿನಾಡು ಅವರು 'ಸು ಫ್ರಮ್ ಸೋ' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 'ಸು ಫ್ರಮ್ ಸೋ' ಚಿತ್ರದಿಂದ ನಿರ್ಮಾಪಕನಾಗಿ ರಾಜ್ ಬಿ. ಶೆಟ್ಟಿ, ನಿರ್ದೇಶಕನಾಗಿ ಜೆ.ಪಿ. ತುಮಿನಾಡು ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ.
ಕನ್ನಡ ಚಿತ್ರರಂಗಕ್ಕೆ ಕಷ್ಟದಲ್ಲಿದ್ದಾಗ ನಿರೀಕ್ಷೆಗಳೇ ಇಲ್ಲದೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಿನಿಮಾ 'ಸು ಫ್ರಮ್ ಸೋ'. ಬಿಗ್ ಸ್ಟಾರ್‌ಕಾಸ್ಟ್ ಇಲ್ಲ. ದೊಡ್ಡ ನಿರ್ದೇಶಕ, ತಂತ್ರಜ್ಞರು ಯಾರೂ ಇಲ್ಲದೆ ನಿರ್ಮಾಣ ಮಾಡಿದ ಸಿನಿಮಾ ಇದೀಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಸು ಫ್ರಮ್ ಸೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬರೀ ಸೋಲುಗಳನ್ನೇ ಕಂಡಿದ್ದು, ಒಂದು ಬಿಗ್ ಸಕ್ಸಸ್‌ಗಾಗಿ ಚಿತ್ರರಂಗ ಎದುರು ನೋಡುತ್ತಲೇ ಇತ್ತು. ಕೊನೆಗೂ ಅಂತಹದ್ದೊಂದು ಯಶಸ್ಸು ಸು ಫ್ರಮ್ ಸೋ ಸಿನಿಮಾದಿಂದ ಸಿಕ್ಕಿದೆ.

ಸ್ನೇಹಿತರ ಜೊತೆ ಕೂಡಿ ರಾಜ್ ಬಿ ಶೆಟ್ಟಿ 'ಸು ಫ್ರಮ್ ಸೋ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದರೂ, ಬಿಡುಗಡೆಗೂ ಮುನ್ನ ಹೇಳಿಕೊಂಡಿರಲಿಲ್ಲ. ಒಮ್ಮೆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪ್ರೇಕ್ಷಕರಿಂದ ಸಿಕ್ಕಿದ ರೆಸ್ಪಾನ್ಸ್ ನೋಡಿ ಚಿತ್ರತಂಡವೇ ದಂಗಾಗಿ ಹೋಗಿತ್ತು. ಸಿನಿಮಾ ಕಂಟೆಂಟ್ ಅನ್ನು ಇಟ್ಟುಕೊಂಡೇ ಥಿಯೇಟರ್‌ಗೆ ನುಗ್ಗಿದ್ದರು. ಈ ಸಿನಿಮಾದಲ್ಲಿ ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೂ ಕೂಡ 'ಸು ಫ್ರಮ್ ಸೋ' ಹವಾ ಕಡಿಮೆ ಆಗಿಲ್ಲ.
ಇನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ 'ಸು ಫ್ರಮ್ ಸೋ' ಬರೋಬ್ಬರಿ 25 ದಿನಗಳನ್ನು ಪೂರೈಸಿದೆ. ಕಳೆದ 25 ದಿನಗಳಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಮೊದಲ ಮೂರು ವಾರ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಅದರಲ್ಲೂ ವೀಕೆಂಡ್‌ನಲ್ಲಿ 'ಸು ಫ್ರಮ್ ಸೋ' ಕಲೆಕ್ಷನ್ ನೋಡಿ ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಹಾಗಿದ್ದರೆ, ಬರೋಬ್ಬರಿ 25ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಇಲ್ಲಿದೆ ನೋಡಿ.
ನಿನ್ನೆ (ಆಗಸ್ಟ್ 18) 'ಸು ಫ್ರಮ್ ಸೋ' ರಿಲೀಸ್ ಆಗಿ ಬರೋಬ್ಬರಿ 25 ದಿನಗಳನ್ನು ಪೂರೈಸಿದೆ. ಈ ಹಿಂದೆ 100 ದಿನಗಳ ಕಾಲ ಕನ್ನಡ ಸಿನಿಮಾಗಳು ಪೂರೈಸಿದ ಉದಾಹರಣೆಗಳಿವೆ. ಆದರೆ, ಇತ್ತೀಚೆಗೆ ಕನ್ನಡ ಸಿನಿಮಾಗಳು 25 ದಿನಗಳನ್ನು ಪೂರೈಸುವುದೇ ದೊಡ್ಡ ವಿಷಯವಾಗಿದೆ. ಆದರೆ, 25ನೇ ದಿನವೂ 'ಸು ಫ್ರಮ್ ಸೋ' ಕಲೆಕ್ಷನ್ ಉತ್ತಮವಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 25ನೇ ದಿನ ಮೂರು ಭಾಷೆಗಳಿಂದ ₹96 ಲಕ್ಷ ಕಲೆಕ್ಷನ್ ಮಾಡಿದೆ. ಅದರಲ್ಲಿ ಕನ್ನಡದಲ್ಲಿಯೇ ಹೆಚ್ಚು ಗಳಿಸಿದ್ದು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಡ್ರಾಪ್ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಾಜ್ ಬಿ. ಶೆಟ್ಟಿ ಮತ್ತು ಅವರ ತಂಡಕ್ಕೆ ಈ ಯಶಸ್ಸಿನಿಂದ ಸಖತ್ ಖುಷಿ ಆಗಿದೆ. ಕರ್ನಾಟಕದಾದ್ಯಂತ 'ಸು ಫ್ರಮ್ ಸೋ'ಗೆ 25 ದಿನಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿದೇಶದ ಹಲವು ಏರಿಯಾಗಳಲ್ಲಿ ಈ ಸಿನಿಮಾ ಸಖತ್ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ 25 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ 106.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
25 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.10 ಕೋಟಿ
22ನೇ ದಿನ ₹2.55 ಕೋಟಿ
23ನೇ ದಿನ ₹2.20 ಕೋಟಿ
24ನೇ ದಿನ ₹2.56 ಕೋಟಿ
25ನೇ ದಿನ ₹0.96 ಕೋಟಿ
ಒಟ್ಟು ₹78.82 ಕೋಟಿ
-
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications