ನಟ ದರ್ಶನ್ ಬಗ್ಗೆ ಗೊತ್ತಿಲ್ಲದ ವಿಚಾರ ಬಯಲಿಗೆಳೆದ ಕುಚುಕು ಸೃಜನ್ ಲೋಕೇಶ್
Srujan Lokesh: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅಲ್ಲದೆ, ಅರ್ಧಕ್ಕೆ ನಿಂತುಹೋಗಿದ್ದ ಡೆವಿಲ್ ಸಿನಿಮಾ ಶೂಟಿಂಗ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆಯೇ ದರ್ಶನ್ ಬಗ್ಗೆ ಕುಚುಕು ಸೃಜನ್ ಲೋಕೇಶ್ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಬಯಲಿಗೆ ಎಳೆದಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದಾಗಿನಿಂದ ಅವರನ್ನು ಚಿತ್ರರಂಗದ ಹಲವರು ಭೇಟಿಯಾಗಿದ್ದಾರೆ. ಅಲ್ಲದೆ, ಅವರೊಂದಿಗಿನ ಬಾಂದವ್ಯವನ್ನು ಕೂಡ ಬಿಚ್ಚಿಟ್ಟಿದ್ದಾರೆ. ಇನ್ನೂ ಕೆಲವರು ಮಾತ್ರ ಅವರು ಜೈಲಿನಿಂದ ಹೊರಬರುವವರೆಗೂ ಅವರ ಜೊತೆ ನಿಂತು ಹೋರಾಟ ನಡೆಸಿದ್ದಾರೆ.

ಚಡ್ಡಿ ದೋಸ್ತ್‌ನಂತಿದ್ದ ತರುಣ್ ಸುಧೀರ್ ಅವರು ಸಹ ನಟ ದರ್ಶನ್ ಅವರನ್ನು ಜೈಲಿನಲ್ಲಿದ್ದಾಗಲೇ ಭೇಟಿ ಮಾಡಿ ಪುಕ್ತಕಗಳನ್ನು ನೀಡಿ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು. ಹೀಗೆ ಚಿತ್ರ ರಂಗದ ಹಲವು ನಟ-ನಟಿಯರು ಸಹ ದರ್ಶನ್ ಭೇಟಿಯಾಗಿ ಬಂದಿದ್ದರು. ಆದ್ರೆ, ಕುಚುಕು ಸೃಜನ್ ಲೋಕೇಶ್ ಮಾತ್ರ ಯಾಕೆ ಭೇಟಿಯಾಗಿಲ್ಲ ಯಾಕೆ ಎನ್ನುವ ಪ್ರಶ್ನೆಗಳು ಮೂಡಿದ್ದವು.
ಈ ಪ್ರಶ್ನೆಗೆ ಪರ್ಯಾಯ ಎಂಬಂತೆ ಇದೀಗ ಜೈಲಿನಿಂದ ಬಿಡುಗಡೆಯಾದ ಬಳಿಕ ಕುಚುಕು ನಟ ದರ್ಶನ್ ಬಗ್ಗೆ ಗೊತ್ತಿಲ್ಲದ ವಿಚಾರವೊಂದನ್ನು ಸೃಜನ್ ಲೋಕೇಶ್ ಅವರು ಹಂಚಿಕೊಂಡಿದ್ದಾರೆ.ಮೊದಲಿನಿಂದಲೂ ನಟ ದರ್ಶನ್ ಮತ್ತು ಸೃಜನ್ ಲೋಕೇಶ್ ಅವರು ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಆದ್ರೆ, ಇತ್ತೀಚೆಗೆ ಇವರಿಬ್ಬರ ನಡುವೆ ಅಷ್ಟಕಷ್ಟೇ. ಮನಸ್ತಾಪ ಉಂಟಾಗಿದ್ಯಾ ಎಂಬ ಪ್ರಶ್ನೆಗಳು ಮೂಡಿದ್ದವು.
ಈ ಪ್ರಶ್ನೆ ಮೂಡಿದ್ದೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದಾಗ ಕುಚುಕು ದರ್ಶನ್ ಬಗ್ಗೆ ಚಿತ್ರರಂಗದ ಬಹುತೇಕ ಕಲಾವಿದರು ಪ್ರತಿಕ್ರಿಯಿಸಿದ್ದರು. ಆದ್ರೆ ಸೃಜನ್ ಲೋಕೇಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿಬಿಟ್ಟಿದ್ದರು.
ಇದೀಗ ದರ್ಶನ್ ಬಗ್ಗೆ ಸೃಜನ್ ಲೋಕೇಶ್ ಮಾತನಾಡಿದ್ದು, ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ನಟ ದರ್ಶನ್-ಸೃಜನ್ ಲೋಕೇಶ್ ನಡುವೆ ಎಲ್ಲವೂ ಸರಿ ಇಲ್ವಾ ಎಂಬ ಅನುಮಾನದ ಪ್ರಶ್ನೆಗಳು ಎದ್ದಿದ್ದವು. ಈ ಸಮಯದಲ್ಲೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಸೃಜನ್ ಲೋಕೇಶ್ ಮಾತನಾಡಿ ಯಾರಿಗೂ ಗೊತ್ತಿಲ್ಲದ ಮರೆಯಲಾಗದ ನೆನಪೊಂದನ್ನು ಹಂಚಿಕೊಂಡಿದ್ದಾರೆ.
ಇದೊಂದು ಘಟನೆ ಶಿರಡಿಯಲ್ಲಿ ಆಗಿದ್ದು. ಅದು ದಿನಕರ ಮದುವೆ ಸಮಯವಾಗಿತ್ತು. ಆಗ ನಾನು, ದರ್ಶನ್ ಸೇರಿದಂತೆ ಎಲ್ಲಾರೂ ವಿವಾಹಕ್ಕೆ ಹೋಗಿದ್ದೆವು. ಮಾರನೇ ದಿನ ದಿನಕರ್ ಮದುವೆ ಇತ್ತು. ಆಗ ನಡೀ ವಡಾ ಪಾವ್ ತಿನ್ನೋಣ ಎಂದು ದರ್ಶನ್ ಹೇಳಿದ್ದರು. ಸರಿ ಅಂತಾ ನಾವೆಲ್ಲರೂ ಹೋದೆವು. ಬೆಂಜ್ ಕಾರು, ಪಕ್ಕದಲ್ಲಿ ಮೋರಿ. ಅಲ್ಲೇ ನಿಂತುಕೊಂಡು ವಡಾ ಪಾವ್ ತಿನ್ನುತ್ತಾ ಇದ್ದೆವು. ಈ ವೇಳೆ ನಮ್ಮ ಕರ್ನಾಟಕದಿಂದ ನಾಲ್ಕು ಜನ ಹಾಗೆ ಹೋದರು. ಅಲ್ಲದೆ, ಅವರು ನಮ್ಮನ್ನ ನೋಡಿ ಅವರಿಗೆ ಅನುಮಾನ ಮೂಡಿದ್ದು, ನಮ್ಮ ಸುತ್ತಮುತ್ತ 5 ನಿಮಿಷ ಓಡಾಡಿದ್ದಾರೆ ಎಂದು ಹೇಳಿದರು.
ಮೋರಿ ಪಕ್ಕ ಕೂತು ವಡಾ ಪಾವ್ ತಿನ್ನುತ್ತಿದದಾರೆ ಎಂದರೆ ಚಾನ್ಸೇ ಇಲ್ಲ.. ಅದು ದರ್ಶನ್ ಆಗೋಕೆ ಸಾಧ್ಯನೇ ಇಲ್ಲ ಅಂತಾ ಅವರು ಭಾವಿಸಿದ್ದರು. ಕೊನೆಗೆ ಚಿಕ್ಕ ಮಗುವೊಂದು ಬಂದು ಅಪ್ಪ.. ಅಪ್ಪ ದರ್ಶನ್ ಅಂತಾ ಕೂಗಿತು. ಆಗ ಅವರು ಕನ್‌ಫ್ಯೂಶನ್‌ನಲ್ಲೇ ನನ್ನನ್ನ ನೋಡಿ ಅಪ್ಪಿಕೊಂಡು ನೀವಂದ್ರೆ ನಂಗೆ ಇಷ್ಟ ಸಾರ್ ಎಂದರು.
ಆಗ ಪಕ್ಕದಲ್ಲಿದ್ದ ದರ್ಶನ್ ಇರುವುದನ್ನು ತೋರಿಸಿದೆ. ದರ್ಶನ್ ಸರ್ ನೀವಂದ್ರೆ ಇಷ್ಟ ಸರ್ ಅಂತಾ ಆಮೇಲೆ ಅಪ್ಪಿಕೊಂಡರು. ಇವೆಲ್ಲಾ ಮರೆಯಲಾಗದ ಘಟನೆಗಳು ಅಂತಾ ಮಜಾ ಟಾಕೀಸ್‌ನಲ್ಲಿ ಸೃಜನ್ ಲೋಕೇಶ್ನೆ ನೆನೆದಿದ್ದಾರೆ. ಈ ಮೂಲಕ ದರ್ಶನ್ ದೊಡ್ಡ ಸ್ಟಾರ್ ಆಗಿದ್ದರೂ ಅವರಲ್ಲಿ ಎಷ್ಟು ಸರಳತೆ ಇದೆ ಅನ್ನೋದಕ್ಕೆ ಸೃಜನ್ ಲೋಕೇಶ್ ವಿವರಿಸಿದ ಈ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications