ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್!
ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡಗೆ ಬಿಗ್ ರಿಲೀಫ್ ಸಿಕ್ಕಿದೆ. ಅಕ್ರಮವಾಗಿ ಮಗು ದತ್ತು ತೆಗೆದುಕೊಂಡ ಆರೋಪ ಸಂಬಂಧ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದರು. ಈಗ ಆ ಕೇಸ್ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರ ಬಂದಿದ್ದಾರೆ. ಹಾಗಿದ್ರೆ ಅಸಲಿಗೆ ಆಗಿದ್ದು ಏನು? ಬಿಗ್‌ಬಾಸ್ ಸೋನು ಶ್ರೀನಿವಾಸ್ ಗೌಡ ಕೇಸ್ ಸಂಬಂಧ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಮನಸ್ಸಿಗೆ ಬಂದಂತೆ ರೀಲ್ಸ್ ಮಾಡುತ್ತಲೇ ಫೇಮಸ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈಗ ದೇಶ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆಲ್ಲಾ ಕಾರಣ ಮಗು ದತ್ತು ತೆಗೆದುಕೊಂಡ ಕೇಸ್. ಸೋನು ಶ್ರೀನಿವಾಸ್ ಗೌಡಗೆ ದಿಢೀರ್ ಎಲ್ಲವೂ ಬಂದಿತ್ತು. ರೀಲ್ಸ್ ಮಾಡುತ್ತಲೇ, ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫಾಲೋವರ್ಸ್ ಸಂಪಾದನೆ ಮಾಡಿದ್ದ ರೀಲ್ಸ್ ರಾಣಿ ಕೈಗೆ ಹಣವೂ ಬರುತ್ತಿದ್ದಂತೆ ಕಾನೂನು ಮರೆತು ಹೋಗಿದ್ದರು ಅಂತಾ ಕಾಣುತ್ತೆ. ಅದ್ರಲ್ಲೂ ಮಗುವನ್ನ ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಸೋನು ಮಾಡಿಕೊಂಡ ಎಡವಟ್ಟು ಈಗ, ರೀಲ್ಸ್ ರಾಣಿಗೆ ಕೇಂದ್ರ ಕಾರಾಗೃಹ ಅಂದ್ರೆ ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳ ಜೈಲು ದರ್ಶನ ಮಾಡಿಸಿತ್ತು. ಕೊನೆಗೂ ಬೇಲ್ ಪಡೆದು ರಿಲೀಸ್ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ.

1 ಲಕ್ಷ ರೂಪಾಯಿ ಬಾಂಡ್!
ಅಂದಹಾಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿ ಹಲವು ದಿನಗಳೇ ಕಳೆದಿದ್ದವು. ಹೀಗಾಗಿ ಕಳೆದ 11 ದಿನ ಪರಪ್ಪನ ಅಗ್ರಹಾರ ಜೈಲಿನ ಊಟ ತಿಂದು ಮುದ್ದೆ ಮುರಿದಿದ್ದರು. ಇದೀಗ ಕೇಂದ್ರ ಕಾರಾಗೃಹದಿಂದ ರಿಲೀಸ್ ಆಗಿರುವ, ಸೋನು ಶ್ರೀನಿವಾಸ್ ಗೌಡ ಬಿಡುಗಡೆ ಆಗುತ್ತಿದ್ದಂತೆ ಜೈಲಿನಿಂದ ಸೀದಾ ತಮ್ಮ ಅಕ್ಕನ ಜೊತೆಗೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. 3 ದಿನಗಳ ಹಿಂದೆ ಸೋನುಗೆ ಕೋರ್ಟ್ ಜಾಮೀನು ನೀಡಿತ್ತು. ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ಬಾಂಡ್ ವಿಧಿಸಲಾಗಿತ್ತು. ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ ನಿನ್ನೆ ರಾತ್ರಿ 8:00 ಗಂಟೆ ಸುಮಾರಿಗೆ ಜೈಲಿಂದ ಸೋನು ರಿಲೀಸ್ ಆಗಿದ್ದಾರೆ.
ಪ್ರಕರಣ ಶುರುವಾಗಿದ್ದು ಹೇಗೆ?
ಸೋನು ಶ್ರೀನಿವಾಸ್ ಗೌಡ ಬರೀ ರೀಲ್ಸ್ ಮಾಡ್ಕೊಂಡು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ಏನೊ. ಆದರೆ ಈ ನಡುವೆ ತನ್ನದೆ ಒಂದು ಯುಟ್ಯೂಬ್ ಚಾನೆಲ್ ತೆರೆದು, ಅದರಲ್ಲಿ ಪ್ರತಿನಿತ್ಯವು ವ್ಲಾಗ್ಸ್ ಹಾಕುತ್ತಿದ್ದ ಸೋನು ಶ್ರೀನಿವಾಸ್ ಗೌಡಗೆ ಒಂದು ಐಡಿಯಾ ಹೊಳೆದಿತ್ತು. ಹೀಗಾಗಿ ಹೆಣ್ಣು ಮಗು ಒಂದನ್ನ ದತ್ತು ಪಡೆದಿದ್ದೇನೆ ಅಂತಾ, ಊರು ತುಂಬಾ ಹೇಳಿಕೊಂಡು ಬಂದು ಅದನ್ನೂ ವ್ಲಾಗ್ ಮಾಡಿ ಸೋನು ತಾನೇ ಹಳ್ಳಕ್ಕೆ ಬಿದ್ದಂತೆ ಆಗಿತ್ತು. ಇದೇ ಕಾರಣಕ್ಕೆ ಅರೆಸ್ಟ್ ಆಗಿ ಜೈಲಿಗೆ ಕೂಡ ಸೇರಿದ್ದರು ಸೋನು ಶ್ರೀನಿವಾಸ್ ಗೌಡ.

ಅಂತೂ.. ಇಂತೂ.. ಸೋನು ರಿಲೀಸ್!
ಹೀಗೆ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆದ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು ಬಾಲಕಿಯ ರಾಯಚೂರಿನ ಮಸ್ಕಿ ತಾಲೂಕು ಕಾಚಾಪುರ ಗ್ರಾಮದಿಂದ, ಸೋನು ಕರೆದುಕೊಂದು ಬಂದಿದ್ರು ಎನ್ನಲಾಗಿತ್ತು. ಬಾಲಕಿ ದತ್ತು ಪಡೆಯುವಲ್ಲಿ, ಯಾವುದೇ ರೀತಿ ಕಾನೂನು ಪಾಲನೆ ಮಾಡಿರದ ಸೋನು ಗೌಡ ಪೊಲೀಸರ ಅತಿಥಿಯಾದರು. ಸ್ಥಳ ಮಹಜರ್ ಮಾಡಲು ಬಾಲಕಿ ಹುಟ್ಟೂರಿಗೂ ಸೋನು ಅವರನ್ನು ಕರೆದುಕೊಂಡು ಹೋಗಿ ಬಂದಿದ್ದರು ಪೊಲೀಸರು. ಆ ನಂತರ ಸೋನುಗೆ ಪರಪ್ಪನ ಅಗ್ರಹಾರ ದರ್ಶನ ಆಗಿತ್ತು, ಈಗ ರಿಲೀಸ್ ಆಗಿ ಮನೆ ಸೇರಿದ್ದಾರೆ.












Click it and Unblock the Notifications