Sonu Gowda: ಸೋನು ಶ್ರೀನಿವಾಸ್ ಗೌಡ ಮತ್ತೊಂದು ವಿಡಿಯೋ ವೈರಲ್.. ಸೋನು ಮದುವೆ...
ಸೋನು ಶ್ರೀನಿವಾಸ್ ಗೌಡ ಹೆಸರು ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಈ ಹಿಂದೆ ಒಂದು ವಿಡಿಯೋ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಮತ್ತೆ ಮುನ್ನೆಲೆಗೆ ಬಂದಾಗಿದೆ. ಅಂದಹಾಗೆ, ಈ ಬಾರಿ ಕೂಡ ಸೋನು ಶ್ರೀನಿವಾಸ್ ಗೌಡಗೆ ಸೇರಿದ್ದು ಅಂತಾ ಹೇಳಲಾಗಿರುವ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದ್ದು, ಎಲ್ಲೆಲ್ಲೂ ವಿಡಿಯೋ ಈಗ ಹರಿದಾಡುತ್ತಿದೆ. ಹಾಗಿದ್ರೆ ಏನಿದು ಸೋನು ಶ್ರೀನಿವಾಸ್ ಗೌಡ ಮತ್ತೊಂದು ವಿಡಿಯೋ ವೈರಲ್ ಸುದ್ದಿ?
ಸೋನು ಶ್ರೀನಿವಾಸ್ ಗೌಡ ರೀಲ್ಸ್ ಮಾಡುತ್ತಲೇ ದೊಡ್ಡ ಹೆಸರು ಮಾಡಿದ್ದು ಆಯ್ತು. ಈ ರೀತಿ ಹೆಸರು ಮಾಡಿದ ನಂತರ, ಇಂತಹ ಜನರಿಗೆ ಕಾಲ? ಅಂತಾ ಕರ್ನಾಟಕದ ಪ್ರಜೆಗಳೆಲ್ಲಾ ಪ್ರಶ್ನೆ ಕೇಳಿದ್ದೂ ಆಯ್ತು. ಇದೆಲ್ಲವನ್ನ ಮೀರಿಸಿ ಸದ್ದು ಮಾಡಿದ್ದು ಮಾತ್ರ ಸೋನು ಶ್ರೀನಿವಾಸ್ ಗೌಡದ್ದು ಅಂತಾ ಆರೋಪ ಮಾಡಲಾಗಿದ್ದ ಅದೊಂದು ಖಾಸಗಿ ವಿಡಿಯೋ. ಅಲ್ಲದೆ ಆಗ ಸದ್ದು ಮಾಡಿದ್ದ 'ಅರುಣ್' ಈವರೆಗೂ ಪತ್ತೆಯೇ ಆಗಿಲ್ಲ. ಇಂತಹ ಸಮಯದಲ್ಲೇ ಸೋನು ಶ್ರೀನಿವಾಸ್ ಗೌಡಗೆ ಸೇರಿದ...

ಸೋನು ಶ್ರೀನಿವಾಸ್ ಗೌಡಗೆ ಸೇರಿದ...
ಅಂದಹಾಗೆ, ಸೋನು ಶ್ರೀನಿವಾಸ್ ಗೌಡ ಮಾಡಿಕೊಂಡಿರುವ ಕಾಂಟ್ರವರ್ಸಿ ಒಂದಾ? ಎರಡಾ? ಯಾಕಂದ್ರೆ ಸೋನು ಶ್ರೀನಿವಾಸ್ ಗೌಡ ಹೆಸರಿನ ಜೊತೆಗೇ ಕಾಂಟ್ರವರ್ಸಿ ಅಂದ್ರೆ ವಿವಾದಗಳು ಬೆರೆತು ಹೋಗಿವೆ ಎನ್ನಬಹುದು. ಯಾಕಂದ್ರೆ ಈ ಹಿಂದೆ ನಾನು ಒಂದು ಮಗುವನ್ನ ದತ್ತು ಪಡೆದಿದ್ದೇನೆ ಅಂತಾ ಹೇಳಿಕೊಂಡು, ಯುಟ್ಯೂಬ್ ವಿಡಿಯೋ ಮಾಡಿ ಹಾಕುತ್ತಾ ಕೊನೆಗೂ ಪೊಲೀಸರ ಅತಿಥಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಸುದ್ದಿ ಈಗ ಮತ್ತೆ ಸದ್ದು ಮಾಡುತ್ತಿದೆ.
ರಕ್ಷಕ್ ಬುಲೆಟ್ & ಸೋನು ಗೌಡ...
ಸೋನು ಗೌಡ ಬರೀ ರೀಲ್ಸ್ ಮಾಡ್ಕೊಂಡು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ಅನಿಸುತ್ತೆ. ಆದರೆ ಈ ಮಧ್ಯೆ ತನ್ನದೆ ಯುಟ್ಯೂಬ್ ಚಾನೆಲ್ ತೆರೆದು ಅದ್ರಲ್ಲಿ ಪ್ರತಿನಿತ್ಯ ವ್ಲಾಗ್ಸ್ ಹಾಕುತ್ತಿದ್ದ ಸೋನು ಶ್ರೀನಿವಾಸ್ ಗೌಡ ಮಗು ದತ್ತು ತೆಗೆದುಕೊಂಡ ಬಗ್ಗೆ ಮಾತನಾಡಿದ್ದರು ಆ ಬಳಿಕ ಕೂಡ ಸೋನು ಸುದ್ದಿ ಸದ್ದು ಮಾಡುತ್ತಿರುವಾಗಲೇ, ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋ ಎಡಿಟ್ ಮಾಡಿ ಹಾಕಿದ್ದಾರೆ ಕೆಲ ಕಿಡಿಗೇಡಿಗಳು.
ಹೀಗೆ ರಕ್ಷಕ್ ಬುಲೆಟ್ & ಸೋನು ಶ್ರೀನಿವಾಸ್ ಗೌಡ ಅವರು ಒಟ್ಟಿಗಿರುವ ಇರುವ ವಿಡಿಯೋ ಎಡಿಟ್ ಮಾಡಿ, ಇಬ್ಬರೂ ಮದುವೆ ಆಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ವಿಡಿಯೋ ವೈರಲ್ ಆಗುತ್ತಿದ್ದು, ಪರ & ವಿರೋಧದ ಚರ್ಚೆ ಕೂಡ ಶುರುವಾಗಿದೆ. ಅಲ್ಲದೆ ಏನೂ ತಪ್ಪು ಮಾಡದೇ ಇದ್ದರೂ ಈ ಬಾರಿ ಸೋನು ಶ್ರೀನಿವಾಸ್ ಗೌಡ ಮತ್ತೆ ಟ್ರೋಲ್ ಆಗುವ ವಾತಾವರಣ ನಿರ್ಮಾಣ ಆಗಿದೆ ಅಂತಿದ್ದಾರೆ ಸೋನು ಶ್ರೀನಿವಾಸ್ ಗೌಡ ಬೆಂಬಲಿಗರು.












Click it and Unblock the Notifications