ಸೋನು ನಿಗಮ್ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು- ಕನ್ನಡ ನಿರ್ಮಾಪಕ
ಕನ್ನಡ ಕನ್ನಡ ಅಂತ ಹೇಳಿದ್ದಕ್ಕೆ ಪಾಹಲ್ಗಾಮ್‌ನಲ್ಲಿ ದಾಳಿ ಆಗಿದ್ದು ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವ ಗಾಯಕ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋನು ನಿಗಮ್ ಅವರನ್ನು ರಾಜ್ಯದಿಂದ ದೂರ ಇಡಬೇಕು ಅನ್ನೋ ಕೂಗು ಹೆಚ್ಚಾಗಿದೆ. ಈ ನಡುವೆ ಕನ್ನಡ ನಿರ್ಮಾಪಕರೊಬ್ಬರು ಸೋನು ನಿಗಮ್ ಹೇಳಿಕೆಗೆ ವಾಗ್ದಾಳಿ ಮಾಡಿದ್ದು ಕನ್ನಡದಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ ಅವರು ಸೋನು ನಿಗಮ್ ಹೇಳಿಕೆ ವಿರುದ್ಧ ಕೋಪಗೊಂಡಿದ್ದು, ಕನ್ನಡದಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಾರ್ತಿಕ್ ಗೌಡ ಅವರು, ಭಯೋತ್ಪಾದಕ ಕೃತ್ಯಕ್ಕೂ ಸೋನು ನಿಗಮ ಹೇಳಿದ್ದಕ್ಕೂ ಸಂಬಂಧವೇ ಇಲ್ಲ. ಕನ್ನಡ ಹಾಡಿಗೂ ಭಯೋತ್ಪಾದಕ ದಾಳಿಗೂ ಏನು ಸಂಬಂಧ. ಇದು ಮೂರ್ಖತನ ಅಲ್ಲದೆ ಇನ್ನೇನು ಅಲ್ಲ ಎಂದಿದ್ದಾರೆ.

ಸೋನು ನಿಗಮ್ ಈ ಹಿಂದೆ ರಾಜ್ಯಕ್ಕೆ ಬಂದಾಗ ಹಲವಾರು ಬಾರಿ ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಹೀಗಾಗಿ ಕನ್ನಡಿಗರು ಇತರರಿಗಿಂತ ಹೆಚ್ಚು ಪ್ರೀತಿ ತೋರಿಸುತ್ತಾರೆ. ಕನ್ನಡ ಹಾಡು ಹಾಡಿ ಅನ್ನೋದರಲ್ಲಿ ತಪ್ಪೇನು ಇಲ್ಲ. ಅದಕ್ಕೆ ಸೋನು ನಿಗಮ್ ಹೀಗೆ ಮೂರ್ಖ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕಾಗಿ ಅವರು ಕನ್ನಡಿಗರಿಗೆ ಕ್ಷಮೆ ಕೇಳಬೇಕು ಎಂದು ನಿರ್ಮಾಪಕ ಕಾರ್ತಿಕ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ಗುರುವಾರ ಮೇ 1ರಂದು ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಈ ಸಮಯದಲ್ಲಿ ಸೋನು ನಿಗಮ್ ಹಾಡುವಾಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡಲು ಕೇಳಿದ್ದಾರೆ. ಆಗ ಸೋನು ನಿಗಮ್ ಹಾಡು ಹೇಳುವುದನ್ನು ಅರ್ಧಕ್ಕೆ ನಿಲ್ಲಿಸಿ ತಮಗೆ ಕನ್ನಡ ಮೇಲಿರುವ ಪ್ರೀತಿ ಜನರ ಮೇಲಿನ ಗೌರವದ ಬಗ್ಗೆ ಮಾತನಾಡಿದರು.
ನಾನು ಹಲವಾರು ಭಾಷೆಗಳಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿ ಇವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿಯಿಂದ ಕುಟುಂಬದವರಂತೆ ಕಾಣುತ್ತಾರೆ. ಹೀಗಾಗಿ ನಾನು ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಹಾಡುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ.

ಆದರೆ ಆ ಹುಡುಗ ಕನ್ನಡ ಕನ್ನಡ ಎಂದು ಕಿರುಚಿಕೊಂಡಿದ್ದು ನನಗೆ ಇಷ್ಟ ಆಗಿಲ್ಲ. ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ದಾಳಿ ಆಗಿದ್ದು ಎಂದು ಹೇಳಿರುವುದಾಗಿ ಹೇಳಿದ್ದಾರೆ. ಈ ಮೂಲಕ ಸೋನು ನಿಗಮ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಆದರೆ ಇಲ್ಲಿ ಪಹಲ್ಗಾಮ್ ದಾಳಿಗೂ ವಿದ್ಯಾರ್ಥಿ ಕನ್ನಡ ಹಾಡು ಹಾಡಿ ಎಂದು ಕೂಗುವುದಕ್ಕೂ ಏನ್ ಸಂಬಂಧ? ಇದು ಮೂರ್ಖತನ ಹೇಳಿಕೆ ಎಂದು ಸೋನು ನಿಗಮ್ ವಿರುದ್ಧ ನಿರ್ಮಾಪಕ ಕಾರ್ತಿಕ್ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಸೋನು ನಿಗಮ್ ಅನ್ನು ಚಿತ್ರರಂಗದಿಂದ ದೂರ ಇಡಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಕಾರ್ತಿಕ್ ಗೌಡ ಆಗ್ರಹಿಸಿದ್ದಾರೆ.












Click it and Unblock the Notifications