'ಪೃಥ್ವಿ ತಂದೆ ಕ್ಷಮೆ ಕೇಳಬೇಕು..ಇಲ್ಲದಿದ್ದರೆ ಬಿಡುವುದಿಲ್ಲ': ನರಹರಿ ದೀಕ್ಷಿತ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮಾಜಿ ಸ್ಪರ್ಧಿ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದದಲ್ಲಿ ಖ್ಯಾತ ಸಂಗೀತ ಶಿಕ್ಷಕ ಹಾಗೂ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಅವರ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಸ್ವತಃ ಪೃಥ್ವಿ ಭಟ್ ತಂದೆ ನರಹರಿ ದೀಕ್ಷಿತ್ ವಿರುದ್ಧ ಆರೋಪ ಮಾಡಿದ್ದು, ನಮ್ಮ ಜೀವನದಲ್ಲಿ ಇದ್ದ ಒಂದೇ ಧಾರೆ ಎರೆಯುವ ಅವಕಾಶವನ್ನು ಕಿತ್ತುಕೊಂಡರು ಎಂದು ಆಡಿಯೋ ಮೂಲಕ ಆರೋಪ ಮಾಡಿದ್ದರು.
ಇದೀಗ ಈ ಆರೋಪದ ಬಗ್ಗೆ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಪ್ರತಿಕ್ರಿಸಿದ್ದು, ಸುಧೀರ್ಘ ಪತ್ರವೊಂದನ್ನು ಬರೆದಿದ್ದಾರೆ. ನರಹರಿ ದೀಕ್ಷಿತ್ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

'ಪ್ರೀತಿಯ ಹವ್ಯಕ ಬಂಧುಗಳೇ ಹಾಗೂ ರಾಮಚಂದ್ರಾಪುರ ಮಠದ ಬಂಧುಗಳೇ ಹಾಗೂ ಗಿರಿನಗರ ಹವ್ಯಕ ವಲಯ ಪದಾಧಿಕಾರಿಗಳೇ ಹಾಗೂ ನನ್ನೆಲ್ಲಾ ಹವ್ಯಕ ಸ್ನೇಹಿತರೇ, ಬಂಧುಗಳೇ. ನಾನು ನರಹರಿ ದೀಕ್ಷಿತ್ ಗಾಯಕ ಹಾಗೂ ಸುಗಮ ಸಂಗೀತ ಶಿಕ್ಷಕ. ನಿಮ್ಮೆಲ್ಲರ ಸಮಕ್ಷಮದಲ್ಲಿ ನನ್ನದೊಂದು ಮುಖ್ಯವಾದ ವಿಷಯ ಹಂಚಿಕೊಳ್ಳುವುದಿದೆ. ಏನೆಂದರೆ ನನ್ನ ವಿದ್ಯಾರ್ಥಿನಿ ಕುಮಾರಿ ಪೃಥ್ವಿ ಭಟ್ ಕಾಸರಗೋಡು ಮೊನ್ನೆ ಮಾರ್ಚ್ 27 ಗುರುವಾರ ಅಭಿಷೇಕ್ ಜೀ ಕನ್ನಡದ ಉದ್ಯೋಗಿ ಅಸೋಸಿಯೇಟೆಡ್ ಡೈರೆಕ್ಟರ್ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಹಾಗೂ ಅವರು ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದಾರೆ. ಆದರೆ ಮನೆಯವರ ಒಪ್ಪಿಗೆ ಇಲ್ಲದೇ ಮದುವೆಯಾಗಿದ್ದಾರೆ.
ಇದು ಕಳೆದ 4 ವರುಷದ ಹಿಂದೆ ಅವರಿಬ್ಬರಲ್ಲಿ ನಡೆದ ಒಪ್ಪಂದ. ಸಹಜವಾಗಿ ಹವ್ಯಕರಲ್ಲದ ನಮ್ಮವರಲ್ಲದ ಹುಡುಗನನ್ನ ಮದುವೆಯಾಗಿದ್ದು ತಂದೆ ತಾಯಿಗಳಿಗೆ ತುಂಬಾನೇ ಬೇಸರ ತಂದಿದೆ. ಆ ಮದುವೆಯ ವಿಚಾರ ಕಳೆದ 1 ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದು ನಾನು ಪೃಥ್ವಿ ಮನೆಗೆ ಹೋಗಿ ಶಿವಣ್ಣನಲ್ಲಿ ಹಾಗೂ ಅವಳ ಅಮ್ಮನಲ್ಲಿ ಈ ವಿಚಾರ ತಿಳಿಸಿ. ಪರಿಸ್ಥಿತಿ ಕೈಬಿಟ್ಟು ಹೋಗಿದೆ ಅವರು ಮದುವೆ ಆಗೋದು ನಿಶ್ಚಿತಾ. ನೀವು ಹುಡುಗನನ್ನು ಕರೆಸಿ ಮಾತನಾಡಿ ಎಂದು ಹೇಳಿ ಬಂದಿದ್ದೇನೆ.

ಆಗ ಅವರು ಅದನ್ನು ಪರಿಗಣಿಸಲಿಲ್ಲ. ಈಗ ನಾನೇ ಅವರಿಬ್ಬರನ್ನು ಮದುವೆ ಮಾಡಿಸಿದ್ದು, ಪೃಥ್ವಿಯ ತಲೆಕೆಡಿಸಿದ್ದು, ಅವರ ಬಾಳು ಹಾಳು ಮಾಡಿದ್ದು ಎಂದು ಆರೋಪಿಸಿ ನನಗೆ ದಿನ 25 ಬಾರಿ ಕರೆ ಮಾಡಿ ನನ್ನ ಮಾನ ಹರಾಜು ಮಾಡುತ್ತೇನೆ. ನನ್ನನ್ನ ಮುಗಿಸುತ್ತೇನೆ. ನನ್ನ ಶಾಲೆಯನ್ನು ಮುಚ್ಚಿಸುತ್ತೇನೆ. ನನ್ನ ಹಾಗೂ ನನ್ನ ಹೆಂಡತಿಯನ್ನು ಬೇರೆ ಮಾಡುತ್ತೇನೆ. ಇಡೀ ಹವ್ಯಕ ಪಂಗಡಕ್ಕೆ ಹಾಗೂ ಮಠದಲ್ಲಿ ಕೂಡ ನನ್ನ ಮಾನ ಮರ್ಯಾದೆ ತೆಗೆಯುತ್ತೇನೆ. ನನ್ನ ಜೀವನವನ್ನೇ ಸಂಪೂರ್ಣ ಹಾಳುಮಾಡುತ್ತೇನೆ ಎಂದು ಗಂಡ, ಹೆಂಡತಿ, ಸೋದರ ಮಾವ ಎಲ್ಲರೂ ಫೋನ್ ಮಾಡಿ ಚಿತ್ರ ಹಿಂಸೆ ಕೊಡುತ್ತಿದ್ದಾರೆ. ಆದರೆ ಅಸಲಿ ವಿಷಯ 4 ವರುಷದಿಂದ ಅವರಿಗೆ ಗೊತ್ತು.
ಮಗಳಿಗೆ ಅವಕಾಶ ಸಿಗುತ್ತದೆ ಎಂದು ಸುಮ್ಮನೆ ಇದ್ದು, ಈಗ ಕೈ ಮೀರಿದಾಗ ನನ್ನನ್ನು ದೂರುತ್ತಿದ್ದಾರೆ. 30 ವರ್ಷ ನನ್ನ ವೃತ್ತಿ ಜೀವನದಲ್ಲಿ ಪೃಥ್ವಿಯನ್ನು ಸೇರಿ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಬರೆದಿದ್ದೇನೆ. ಈ ಮೂಲಕ ನಮ್ಮೆಲ್ಲರಲ್ಲಿ ಮನವಿ ಏನೆಂದರೆ ಅವರು ನಿಮ್ಮ ಬಳಿ ಏನೇ ಹೇಳಿದರೂ ಅದನ್ನು ನಂಬಬೇಡಿ.
ನಾನು ಪೃಥ್ವಿ ಗಂಡ ಹೆಂಡತಿಯರನ್ನು ಕೂರಿಸಿ ಮಾತಾಡುತ್ತೇನೆ. ಅವರಿಗೆ ತುಂಬಾ ನೋವಾಗಿದೆ. ಸಹಜ ಆದರೆ ಅವರು ಮಾಡಿದ ತಪ್ಪಿಗೆ ನನ್ನನ್ನು ದೂರುತ್ತಿದ್ದಾರೆ. ನಾನೇ ಕಾರಣ ಎಂದು ಹೇಳುತ್ತಿದ್ದಾರೆ. ಅವರಿಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದಾರೆ ಯಾರು ಏನು ಮಾಡಲಾಗದು. ಒಂದು ವಾರದಿಂದ ನನ್ನ ಸಂಕಟ ಹೇಳಲಾಗದು. ನೊಂದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಮುಂದಿನ ಹೋರಾಟ ಎಂದರೆ ಅವರು ಒಂದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾನು ಅವರನ್ನು ಬಿಡುವುದಿಲ್ಲ. ನನಗೆ ಶ್ರೀಧರ ಸ್ವಾಮಿಗಳ ಆಶೀರ್ವಾದ ಹಾಗೂ ಗುರುಗಳ ಆಶೀರ್ವಾದ ಇದೆ' ಎಂದಿದ್ದಾರೆ.












Click it and Unblock the Notifications