SIIMA Awards 2025: ಸುದೀಪ್ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ಯಾರು ಗೊತ್ತಾ? ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ
ಇಡೀ ಭಾರತೀಯ ಸಿನಿಮಾ ಜಗತ್ತೇ ಕಾಯುವ 'ಸೈಮಾ' ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿ ಆರಂಭ ಕಂಡಿದೆ. 2025ನೇ ಸಾಲಿನ ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಈ ವೇಳೆ ಹಾಜರಿ ಹಾಕಿದ್ದರು.2024ನೇ ಸಾಲಿನಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಅವಾರ್ಡ್ ಘೋಷಣೆ ಮಾಡಲಾಗಿದೆ.
ಇನ್ನೂ ಕನ್ನಡದ ಮ್ಯಾಕ್ಸ್ ಚಿತ್ರಕ್ಕಾಗಿ ನಟ ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಯುಐ ಚಿತ್ರದ ನಿರ್ದೇಶನಕ್ಕಾಗಿ ಉಪೇಂದ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ 2024ರ ಅಂತ್ಯದಲ್ಲಿ ರಿಲೀಸ್ ಆಗಿ ಭಾರೀ ಮೆಚ್ಚುಗೆ ಪಡೆಯಿತು. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಕಿಚ್ಚ ಸುದೀಪ್ ಅವರು ಸಿನಿಮಾ ಕೆಲಸಗಳ ಕಾರಣಕ್ಕೆ ಅವರು ದುಬೈಗೆ ಹೋಗಿಲ್ಲ.

ಯುಐ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ. 02 ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಭೀಮ ಸಿನಿಮಾ ನಟನೆಗೆ ದುನಿಯಾ ವಿಜಯ್ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತಿದೆ. 'ಕೃಷ್ಣಂ ಪ್ರಣಯ ಸಖಿ' ಅತ್ಯುತ್ತಮ ಸಿನಿಮಾ ಅವಾರ್ಡ್ ಗೆದ್ದಿದೆ. ಇನ್ನೂ ಸೈಮಾ ಪ್ರಶಸ್ತಿ ಪಡೆದ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
ಭೀಮಾ ಚಿತ್ರಕ್ಕಾಗಿ ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ - ಕನ್ನಡ- ಜಾಕ್ ಸಿಂಗಂ
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)
ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)
ಅತ್ಯುತ್ತಮ ಚೊಚ್ಚಲ ನಟಿ - ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ - ಐಶ್ವರ್ಯ ರಂಗರಾಜನ್
ಕನ್ನಡದ ಅತ್ಯುತ್ತಮ ಗೀತರಚನೆಕಾರ - ವಿ. ನಾಗೇಂದ್ರ ಪ್ರಸಾದ್
ಅತ್ಯುತ್ತಮ ಪೋಷಕ ನಟಿ - ಕಲ್ಕಿ 2898 - ಅನ್ನಾ ಬೆನ್ ಗಾಗಿ ಮಹಿಳೆ (ತೆಲುಗು)
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ (ಕನ್ನಡ): ಸಂದೀಪ್ ಸುಂಕಡ್
ಅತ್ಯುತ್ತಮ ಚೊಚ್ಚಲ ನಟ - ತೆಲುಗು - ಸಂದೀಪ್ ಸರೋಜ್
ವರ್ಷದ ಹಾಡು ವಿನ್ಯಾಸ (ಕನ್ನಡ) - ಇಮ್ರಾನ್ ಎಸ್ ಸರ್ದಾರಿಯಾ
ಸೈಮಾ 2025ರಲ್ಲಿ ವಿಶೇಷ ಪ್ರಶಸ್ತಿ- ವಿ ಹರಿಕೃಷ್ಣ
ಅತ್ಯುತ್ತಮ ಛಾಯಾಗ್ರಾಹಕ: ಇಬ್ಬನಿ ತಬ್ಬಿದ ಇಳೆಯಲಿ (ಶ್ರೀವತ್ಸನ್ ಸೆಲ್ವರಾಜನ್)
ಅತ್ಯುತ್ತಮ ಗೀತರಚನೆಕಾರ: ತೆಲುಗು (ಚುಟ್ಟಮಲ್ಲೆ) - ರಾಮಜೋಗಯ್ಯ ಶಾಸ್ತ್ರಿ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಿಲ್ಪಾ ರಾವ್
ಅತ್ಯುತ್ತಮ ಛಾಯಾಗ್ರಾಹಕ: ತೆಲುಗು (ದೇವರ) - ರತ್ನವೇಲು ಐಎಸ್ಸಿ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಐಶ್ವರ್ಯಾ ರಂಗರಾಜನ್
ಅತ್ಯುತ್ತಮ ಗೀತರಚನೆಕಾರ - ವಿ.ನಾಗೇಂದ್ರ ಪ್ರಸಾದ್











Click it and Unblock the Notifications