ಡಾ. ಶಿವರಾಜ್‌ಕುಮಾರ್ ಲಾಯರ್ ಆಗೋದ್ರಾ? ‘ಭೈರತಿ ರಣಗಲ್’ ಅಬ್ಬರ ಹೇಗೆ ಇದೆ ನೋಡಿ!
ನಟ ಡಾ. ಶಿವರಾಜ್‌ಕುಮಾರ್ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ದೊಡ್ಡ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ. 'ಭೈರತಿ ರಣಗಲ್' ಆಗಿ ಶಿವಣ್ಣ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಸುದ್ದಿಯನ್ನ ಈಗಾಗಲೇ ಕನ್ನಡಿಗರು ತಿಳಿದಿದ್ದಾರೆ. ಹೀಗಿದ್ದಾಗಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ನಟ ಡಾ. ಶಿವರಾಜ್‌ಕುಮಾರ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ಲಾಯರ್ ಅವತಾರದಲ್ಲಿ ನೋಡಿ ಫುಲ್ ಖುಷ್ ಆಗಿದ್ದಾರೆ.
ಶಿವಣ್ಣ ಮಾಡಿರೋ ಸಿನಿಮಾಗಳು ನೂರಾರು, ಹೀಗಿದ್ರೂ ಶಿವಣ್ಣನ ಖದರ್ ಬದಲಾಗಿಲ್ಲ. ಹೀಗೆ ದೊಡ್ಮನೆ ಹಿರಿಯ ಪುತ್ರ ಶಿವರಾಜ್‌ಕುಮಾರ್ ಹಲವು ದಶಕದಿಂದಲೂ ಕನ್ನಡ ಸಿನಿ ಪ್ರಿಯರನ್ನು ರಂಜಿಸಿ ಮನಸ್ಸು ಗೆದ್ದಿದ್ದಾರೆ. ಆಕ್ಷನ್ ಆದರೂ ಸೈ, ಪಕ್ಕಾ ಆಕ್ಟಿಂಗ್‌ಗೂ ಜೈ ಅಂತಾರೆ ಶಿವಣ್ಣ.

ಹೀಗಿದ್ದಾಗ 'ಮಫ್ತಿ' ಮುಂದುವರಿದ ಭಾಗ 'ಭೈರತಿ ರಣಗಲ್' ರಿಲೀಸ್‌ಗೆ ರೆಡಿ ಆಗುತ್ತಿದೆ. ಇದೇ ಸಮಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 'ಭೈರತಿ ರಣಗಲ್' ಪೋಸ್ಟರ್ ರಿಲೀಸ್ ಆಗಿದೆ. ಇದನ್ನ ನೋಡಿದ ಕನ್ನಡ ಸಿನಿಮಾ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
'ಭೈರತಿ ರಣಗಲ್' ಆರ್ಭಟ ಶುರು!
ಈಗಾಗಲೇ ಸಿನಿಮಾ ಶೂಟಿಂಗ್ ಭಾಗಶಃ ಮುಗಿಸಿರುವ 'ಭೈರತಿ ರಣಗಲ್' ತೆರೆಗೆ ಅಪ್ಪಳಿಸಬೇಕು ಅಷ್ಟೇ. ಫ್ಯಾನ್ಸ್ ಕೂಡ, 'ಭೈರತಿ ರಣಗಲ್' ನೋಡಿ ಎಂಜಾಯ್ ಮಾಡೋಕೆ ಕಾಯುತ್ತಿದ್ದಾರೆ. ಸಿನಿಮಾ ತಂಡ ಕೂಡ ಇದಕ್ಕೆ ತಕ್ಕ ತಯಾರಿ & ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮತ್ತೊಂದು ಕಡೆ ನಟ ಶಿವಣ್ಣ ಅವರು ಯುಗಾದಿ ಹಬ್ಬಕ್ಕೆ ಲಾಯರ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ಇದನ್ನ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಹಿಂದೆ ಎಂದಿಗೂ ನಟ ಶಿವಣ್ಣ, ಲಾಯರ್ ಅಂದ್ರೆ ಅಡ್ವೊಕೇಟ್ ಪಾತ್ರವನ್ನು ಮಾಡಿಲ್ಲ. ಹೀಗಾಗಿ 'ಭೈರತಿ ರಣಗಲ್' ಚಿತ್ರ ಭಾರಿ ಕೂತೂಹಲ ಕೆರಳಿಸಿದೆ.
ತಮಿಳು, ತೆಲುಗು ಭಾಷೆಯಲ್ಲೂ ಹವಾ!
ಡಾ. ಶಿವರಾಜ್‌ಕುಮಾರ್ ಇದೀಗ ಬೇರೆ ಬೇರೆ ಭಾಷೆಯಲ್ಲಿ ಕೂಡ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾ ರಂಗದ ಹ್ಯಾಟ್ರಿಕ್ ಹೀರೋ ಆಗಿರುವ ಡಾ. ಶಿವಣ್ಣ ಅವರಿಗೆ ಇದೀಗ ತಮಿಳು & ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ರಜನಿಕಾಂತ್ ಜೊತೆ ನಟಿಸಿದ ನಂತರ ಡಾ. ಶಿವರಾಜ್‌ಕುಮಾರ್ ಅವರಿಗೆ ಪರ ಭಾಷೆಯ ಸಿನಿಮಾ ಜಗತ್ತು ಕೂಡ ಭರ್ಜರಿ ಆಫರ್ಸ್ ಕೊಡುತ್ತಿದೆ. ಆದರೂ ನಟ ಶಿವಣ್ಣ ಅಳೆದು, ತೂಗಿ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ರಜನಿಕಾಂತ್ ಅಳಿಯನ ಸಿನಿಮಾದಲ್ಲೂ ನಟನೆ ಮಾಡಿ ಅಲ್ಲಿನ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು ಶಿವಣ್ಣ.
ಹೀಗೆ ಶಿವಣ್ಣ ಅವರ 'ಭೈರತಿ ರಣಗಲ್' ಸಿನಿಮಾ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗು ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ರಿಲೀಸ್ ಆಗುತ್ತಾ? ಅನ್ನೋ ಕುತೂಹಲವು ಇದೀಗ ಮೂಡಿದೆ. ಮತ್ತೊಂದ್ಕಡೆ ಕನ್ನಡಿಗರು ಈ ಸಿನಿಮಾ ಕಣ್ತುಂಬಿಕೊಳ್ಳಲು ಹಲವು ವರ್ಷದಿಂದ ಕಾಯುತ್ತಿದ್ದು, ಇದೇ ವರ್ಷ ಕನ್ನಡ ಸಿನಿಮಾ ಅಭಿಮಾನಿಗಳ ಕನಸು ನನಸಾಗಲಿದೆ.












Click it and Unblock the Notifications