Get Updates
Get notified of breaking news, exclusive insights, and must-see stories!

Jawaan successful: ಮನ್ನತ್ ಬಾಲ್ಕನಿಯಲ್ಲಿ ಬಾದ್‌ಶಾ: ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ್ ಜವಾನ್

400 ಕೋಟಿ ಕ್ಲಬ್ ಪ್ರವೇಶಿಸಿದ ಜವಾನ್ ಸಿನಿಮಾದ ನಟ ಬಾದ್‌ಶಾ ಸದ್ಯ ಸಂತೋಷದ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಜವಾನ್‌ನ ಯಶಸ್ಸನ್ನು ಅಭಿಮಾನಿಗಳೊಂದಿಗೆ ಆಚರಿಸಲು ತಮ್ಮ ಮನೆ ಮನ್ನತ್‌ನ ಬಾಲ್ಕನಿಗೆ ಬಂದ ಶಾರುಖ್ ಖಾನ್ ಜನರತ್ತ ಕೈ ಬೀಸಿ, ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.

7 ಸೆಪ್ಟೆಂಬರ್ 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಜವಾನ್ ಚಿತ್ರ 10 ದಿನಗಳಲ್ಲಿ 400 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ ಈ ಸಿನಿಮಾ 700 ಕೋಟಿ ರೂಪಾಯಿಗೂ ಹೆಚ್ಚು ಬ್ಯುಸಿನೆಸ್ ಮಾಡಿದೆ. ಇದು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ.

Shahrukh Khan: Baadshah on Mannat balcony: Jawan gives flying kiss to fans

ಶಾರುಖ್ ಖಾನ್ ಅವರ ಮುಂಬೈ ನಿವಾಸ ಮುನ್ನತ್ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಈ ಮನೆಯ ಎದುರು ಸದಾ ಅಭಿಮಾನಿಗಳ ದಂಡು ನೆರೆದಿರುತ್ತದೆ. ಶಾರುಖ್‌ ಖಾನ್ ಬಾಲ್ಕನಿಗೆ ಬಂದು ಕೈಬೀಸುತ್ತಾರೆ ಎಂದು ಫ್ಯಾನ್ಸ್ ಕಾದಿರುತ್ತಾರೆ. ಇಡೀ ದಿನ ತಮ್ಮ ನೆಚ್ಚಿನ ನಟನ ಬರುವಿಕೆಗಾಗಿ ಅಭಿಮಾಣಿಗಳು ಕಾಯುತ್ತಾರೆ.

ಅಭಿಮಾಣಿಗಳಿಗೆ ದರ್ಶನ ಕೊಟ್ಟ ಶಾರುಖ್ ಖಾನ್

ಶಾರುಖ್ ಖಾನ್ ಅವರ ಮುಂಬೈ ನಿವಾಸ ಮುನ್ನತ್ ಬಾಲ್ಕನಿಗೆ ಬಂದು ಚಿತ್ರದ ಮೇಲೆ ತಮ್ಮ ಪ್ರೀತಿಯನ್ನು ಧಾರೆಯೆರೆದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಮನ್ನತ್ ಹೊರಗೆ ನಿಂತಿದ್ದ ಅಭಿಮಾನಿಗಳಿಗೂ ಕೈ ಬೀಸಿ ನಮಸ್ಕಾರ ಮಾಡಿದರು. ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಒಂದು ನೋಟವನ್ನು ಪಡೆಯಲು, ಅವರ ಸಾವಿರಾರು ಅಭಿಮಾನಿಗಳು 17 ಸೆಪ್ಟೆಂಬರ್ 2023 ರಂದು (ಭಾನುವಾರ) ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯ ಮನ್ನತ್‌ನ ಹೊರಗೆ ಜಮಾಯಿಸಿದ್ದರು.

Shahrukh Khan: Baadshah on Mannat balcony: Jawan gives flying kiss to fans

'ಜವಾನ್' 10 ದಿನಗಳಲ್ಲಿ 400 ಕೋಟಿ ಗಳಿಕೆ

ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ 'ಜವಾನ್' ಚಿತ್ರ 10 ದಿನಗಳಲ್ಲಿ 400 ಕೋಟಿ ರೂಪಾಯಿ ಗಳಿಸಿದೆ. ಹೀಗಾಗಿ ತಮ್ಮ ಮೇಲೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಶಾರುಖ್ ಖಾನ್ ಮನ್ನತ್ ಬಾಲ್ಕನಿಗೆ ಬಂದು ಧನ್ಯವಾದ ಹೇಳಿದ್ದಾರೆ. ಶಾರುಖ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, 'ಜವಾನ್' 400 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ತಕ್ಷಣ, ಶಾರುಖ್ ಖಾನ್ ಮನ್ನತ್‌ನಿಂದ ಹೊರಬಂದು ತಮ್ಮ ಅಭಿಮಾನಿಗಳ ಮೇಲೆ ಪ್ರೀತಿಯ ಮಳೆಗರೆದರು.

ಕೈ ಜೋಡಿಸಿ ಧನ್ಯವಾದ ಹೇಳಿದ ಬಾದ್‌ಶಾ

ಕಿಂಗ್ ಖಾನ್ ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಜೊತೆಗೆ ಕನ್ನಡಕವನ್ನು ಧರಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಶಾರುಖ್ ಖಾನ್ ಮನ್ನತ್ ಅವರ ಬಾಲ್ಕನಿಗೆ ಬಂದ ತಕ್ಷಣ, ತಮ್ಮ ಸೂಪರ್‌ಸ್ಟಾರ್ ಅನ್ನು ನೋಡಲು ಅವರ ಮನೆಯ ಹೊರಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದರು. ಶಾರುಖ್ ತಮ್ಮ ಅಭಿಮಾನಿಗಳತ್ತ ಕೈ ಬೀಸಿ ಕೈಮುಗಿದು ಧನ್ಯವಾದ ಹೇಳಿ ಫ್ಲೈಯಿಂಗ್ ಕಿಸ್ ಕೂಡ ನೀಡಿದರು.

Shahrukh Khan: Baadshah on Mannat balcony: Jawan gives flying kiss to fans

'ಜವಾನ್' ಯಶಸ್ಸಿನ ಸಂತಸದಲ್ಲಿ ಚಿತ್ರದ ತಾರಾಬಳಗ

ಇದಕ್ಕೂ ಮುನ್ನ ಶಾರುಖ್ ಖಾನ್ ಸೇರಿದಂತೆ ಚಿತ್ರದ ಇಡೀ ತಾರಾ ಬಳಗ ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ದೀಪಿಕಾ ಪಡುಕೋಣೆ, ಸುನಿಲ್ ಗ್ರೋವರ್, ಸನ್ಯಾ ಮಲ್ಹೋತ್ರಾ, ರಿದ್ಧಿ ಡೋಗ್ರಾ, ವಿಜಯ್ ಸೇತುಪತಿ, ಚಿತ್ರದ ನಿರ್ದೇಶಕ ಅಟ್ಲೀ ಕುಮಾರ್ ಸೇರಿದಂತೆ ಇಡೀ ತಾರಾಗಣ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ನಯನತಾರಾ ಕಾಣಿಸಿಕೊಂಡಿರಲಿಲ್ಲ. ಅವರು ವಿಡಿಯೋ ಕಾಲ್ ಮೂಲಕ ಕಾರ್ಯಕ್ರಮಕ್ಕೆ ಸೇರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+