Tax Payers: ಶಾರುಖ್ ಖಾನ್, ವಿರಾಟ್ ಕೊಹ್ಲಿ ಒಂದು ವರ್ಷಕ್ಕೆ ಕಟ್ಟುವ ತೆರಿಗೆ ಎಷ್ಟು ಕೋಟಿ ಗೊತ್ತಾ?
2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದಿ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದೆ. 2024ರಲ್ಲಿ ಭರ್ಜರಿ ಯಶಸ್ಸು ಕಂಡಿರುವ ನಟ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಬರೋಬ್ಬರಿ 92 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಶಾರುಖ್ ಖಾನ್ ಬಳಿಕ ತಮಿಳು ನಟ ವಿಜಯ್ ಎರಡನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಇದ್ದಾರೆ. ವಿರಾಟ್ ಕೊಹ್ಲಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 66 ಕೊಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ.
ನಟ ಶಾರುಖ್ ಖಾನ್ ಜವಾನ್, ಪಠಾಣ್ ಮತ್ತು ಡಂಕಿ ಸಿನಿಮಾಗಳು 2023ಲ್ಲಿ ಬಿಡುಗಡೆಯಾಗಿದ್ದವು, ಇದರಲ್ಲಿ ಜವಾನ್ ಮತ್ತು ಪಠಾಣ್ ಸಿನಿಮಾ ಗಳಿಕೆ ವಿಚಾರದಲ್ಲಿ ಹೊಸ ದಾಖಲೆ ಮಾಡಿವೆ. ಇದರಿಂದ ನಟನ ಆದಾಯ ಕೂಡ ಹೆಚ್ಚಾಗಿದ್ದರಿಂದ ಬರೋಬ್ಬರಿ 92 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ.

ರಾಜಕೀಯಕ್ಕೆ ಬರಲು ಸಜ್ಜಾಗಿರುವ ತಮಿಳು ನಟ ವಿಜಯ್ 80 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 75 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದು, ಪತ್ನಿ ಜಯಾ ಬಚ್ಚನ್ ಜೊತೆ 1,578 ಕೋಟಿ ರೂಪಾಯಿ ಒಟ್ಟು ಆಸ್ತಿ ಇರುವುದಾಗಿ ಘೋಷಣೆ ಮಾಡಿರುವ ಅಮಿತಾಬ್ ಬಚ್ಚನ್ 71 ಕೋಟಿ ಆದಾಯ ರೂಪಾಯಿ ತೆರಿಗೆ ಕಟ್ಟಿದ್ದಾರೆ.
ಸಿನಿಮಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟ ಅಜಯ್ ದೇವಗನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಅವರು 42 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಶೈತಾನ್ ಮತ್ತು ಮೈದಾನ್ ಎರಡು ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದವು. ಅಜಯ್ ದೇವಗನ್ ನಂತರ ರಣಬೀರ್ ಕಪೂರ್ 36 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಹೃತಿಕ್ ರೋಷನ್ 28 ಕೋಟಿ, ಕಪಿಲ್ ಶರ್ಮಾ 26 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ.












Click it and Unblock the Notifications