SeethaRama Serial: ಇನ್ಮುಂದೆ ಮಲಯಾಳಂನಲ್ಲಿ ಸೀತಾ ರಾಮ: ಏನಿದು ಹೊಸ ವಿಚಾರ?
ಕಿರುತೆರೆಯ ಸೆನ್ಸಷೇನಲ್ ಧಾರಾವಾಹಿ ಸೀತಾ ರಾಮ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಆಯ್ಕೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಕಥೆ ಎಂತವರಿಗಾದರೂ ಇಷ್ಟವಾಗುತ್ತದೆ. ಪ್ರಸಾರಕ್ಕೂ ಮೊದಲು ಹಾಡಿನಿಂದಲೇ ಜನಪ್ರಿಯತೆ ಪಡೆದ ಸೀತಾ ರಾಮ ಧಾರಾವಾಹಿ, ಪ್ರಸಾರ ಕಂಡ ಬಳಿಕ ನೋಡುಗರ ಮನಸ್ಸು ಗೆದ್ದಿದೆ. ಟಿಆರ್‌ಪಿ ಪಟ್ಟಿಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಂಡಿರುವ ಸೀತಾ ರಾಮ ಧಾರಾವಾಹಿ ಕಥೆ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಆಗುತ್ತಿದೆ.
ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಸೀತಾ ರಾಮ ಧಾರಾವಾಹಿ ತಂಡ ಇದೀಗ ಮಲಯಾಳಂನತ್ತ ಮುಖ ಮಾಡಿದ್ದಾರೆ. ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿ ಮಲಯಾಳಂಗೆ ಡಬ್ ಆಗಿದೆ. ಜೀ ಕೇರಳಂನಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್ ಕಾಣಿಸಿಕೊಂಡಿರುವ ಸೀತಾ ರಾಮ ಧಾರಾವಾಹಿಯ ಮೊದಲ ಪ್ರೋಮೋವನ್ನು ಮಲಯಾಳಂನಲ್ಲಿ ಡಬ್ ಮಾಡಲಾಗಿದೆ.

ಈ ವಿಡಿಯೋವನ್ನು ಜೀ ಕೇರಳಂನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜೀ ಕೇರಳಂ ಕುಟುಂಬಕ್ಕೆ ಹೊಸ ಸರಣಿಯನ್ನು ಸೇರಿಸಲಾಗಿದೆ. ನಿಮ್ಮದೇ ಆದ ಕೇರಳ ವಾಹಿನಿಯಲ್ಲಿ ಸೀತಾ ರಾಮ ಶೀಘ್ರದಲ್ಲೇ ಬರಲಿದ್ದಾರೆ ಎಂದು ಜೀ ಕೇರಳಂನಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ ಇತ್ತೀಚಿಗಷ್ಟೇ 200 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಕಥೆ ಈಗ ಇಂಟ್ರಸ್ಟಿಂಗ್ ಆಗಿದ್ದು, ಸೀತಾಳ ಹಿಂದಿನ ಕಥೆಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಸದ್ಯ ಸೀತಾ-ರಾಮರ ಮಧ್ಯೆ ಪ್ರೀತಿ ಮೂಡಿ. ಈ ಪ್ರೀತಿಗೆ ದೇಸಾಯಿ ಕುಟುಂಬದ ಒಪ್ಪಿಗೆ ಕೂಡ ಸಿಕ್ಕಿದೆ. ರಾಮ ಹಾಗೂ ಸೀತಾರ ಪ್ರೀತಿಗೆ ಸೇತುವೆಯಾಗಿರುವ ಸಿಹಿ ಹುಟ್ಟಿನ ರಹಸ್ಯ ಏನು ಏನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇನ್ನು ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಸೇರಿದಂತೆ ಸೀತಾ ರಾಮ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ.












Click it and Unblock the Notifications