ಯುವ, ಶ್ರೀದೇವಿ ವಿಚ್ಛೇದನಕ್ಕೆ ಸಪ್ತಮಿ ಗೌಡನೇ ಕಾರಣ: ಕೊನೆಗೂ ಮೌನ ಮುರಿದ ಕಾಂತಾರ ನಟಿ
ಡಾ ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ (ಗುರು ರಾಜ್‌ಕುಮಾರ್) ವಿಚ್ಛೇದನಕ್ಕೆ ಸಪ್ತಮಿ ಗೌಡ ಅವರೇ ಕಾರಣ ಎಂದು ಶ್ರೀದೇವಿ ಬೈರಪ್ಪ ಅವರು ಆರೋಪಿಸಿದ್ದರು. ಅಲ್ಲದೇ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್ ಮೇಲೆ ಭಾರೀ ಆರೋಪಗಳನ್ನು ಮಾಡಿದ್ದರು. ಯುವ ರಾಜ್ ಕುಮಾರ್ ವಿಚ್ಚೇದನ ವಿಚಾರದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಅವರ ಹೆಸರು ಕೇಳಿ ಬಂದಿದ್ದು, ಲೀಗಲ್ ನೋಟಿಸ್‌ನ ರಿಪ್ಲೈಯಲ್ಲಿ ಶ್ರೀದೇವಿ ಬೈರಪ್ಪ ಅವರು ನೇರವಾಗಿ ಸಪ್ತಮಿ ಗೌಡ ಅವರ ಹೆಸರನ್ನೇ ಉಲ್ಲೇಖ ಮಾಡಿದ್ದಾರೆ.
ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ಇಬ್ಬರೂ ಹೋಟೆಲ್ ರೂಮ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಈ ಹಿಂದೆ ಶ್ರೀದೇವಿ ಬೈರಪ್ಪ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಯುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಯುವ ಸಿನಿಮಾದ ವೇಳೆ ಸಪ್ತಮಿ ಗೌಡ ಹಾಗೂ ಯುವ ರಾಜ್ ಕುಮಾರ್ ಅವರ ಅನ್ನೋನ್ಯತೆ ಹೆಚ್ಚಾಗಿತ್ತು. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಚೇದನ ಹಾಗೂ ಸಪ್ತಮಿ ಗೌಡ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದ ಶ್ರೀದೇವಿ ಅವರ ಹೇಳಿಕೆ ಕುರಿತು ಇದೀಗ ಕೊನೆಗೆ ಕಾಂತಾರ ನಟಿ ಸಪ್ತಮಿ ಗೌಡ ಅವರು ಮೌನ ಮುರಿದಿದ್ದಾರೆ.

ಡಾ ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಮುಂದಾಗಿದ್ದಕ್ಕೆ ಕಾರಣವೇ ಸಪ್ತಮಿ ಗೌಡ ಎಂದು ಯುವ ಪತ್ನಿ ಶ್ರೀದೇವಿ ಬೈರಪ್ಪ ದೂರಿದ್ದರು. ಈ ಆರೋಪದ ಬಳಿಕ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಶ್ರೀದೇವಿ ಬೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಬಗ್ಗೆ ತೆಲುಗು ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಯುವ ರಾಜ್‌ಕುಮಾರ್ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿತ್ತು. ಅದು ಈಗ ಕೋರ್ಟ್‌ನಲ್ಲಿ ಇದೆ. ಈ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಅದು ಏನು ಹೇಳುತ್ತೋ ಆಗ ಎಲ್ಲರಿಗೂ ಗೊತ್ತಾಗುತ್ತೆ. ಆಗ ನಾನು ಖಂಡಿತವಾಗಿಯೂ ಈ ಬಗ್ಗೆ ಮಾತಾಡುತ್ತೇನೆ ಎಂದು ಈ ಪ್ರಕರಣದ ಬಗ್ಗೆ ಸಪ್ತಮಿ ಗೌಡ ಬಹುದಿನಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಈ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಸಪ್ತಮಿ ಗೌಡ ಅವರು, ಚಿತ್ರರಂಗದಲ್ಲಿ ಸ್ನೇಹಿತರಿಲ್ಲ ತೆಲುಗಿನಲ್ಲಿ ಯಾರೂ ಸ್ನೇಹಿತರಿಲ್ಲ. ತಮ್ಮುಡು ಬಳಿಕ ಸ್ನೇಹಿತರನ್ನು ಮಾಡಿಕೊಳ್ಳುತ್ತೇನೆ. ಸಾಮಾನ್ಯವಾಗಿ ಕನ್ನಡದಲ್ಲಿಯೂ ತುಂಬಾನೇ ಸ್ನೇಹಿತರಿಲ್ಲ. ನಾನು ಎಲ್ಲರೊಂದಿಗೂ ಕೆಲಸ ಮಾಡಿದ್ದೇನೆ. ಎಲ್ಲರೂ ನನಗೆ ಗೊತ್ತು. ಆದರೆ, ಅವರೊಂದಿಗೆ ನಿರಂತರವಾಗಿ ಮಾತಾಡುವುದಿಲ್ಲ. ಸ್ಕೂಲ್ ಫ್ರೆಂಡ್ಸ್ ಜೊತೆ ಇನ್ನೂ ಸ್ನೇಹವನ್ನು ಇಟ್ಟುಕೊಂಡಿದ್ದೇನೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ.
ನಾನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ಎರಡು ಸಿನಿಮಾವನ್ನು ಮಾಡುತ್ತಿದ್ದೇನೆ. ಕೆಲವು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಇವೆ. ಎರಡು ತೆಲುಗು ಸಿನಿಮಾಗಳಿವೆ. ಒಂದು ತಮಿಳು ಸಿನಿಮಾಗೆ ಸಹಿ ಮಾಡಿದ್ದೇನೆ. ತಮ್ಮುಡು ಸಿನಿಮಾದಿಂದ ತೆಲುಗಿನಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ ಎಂದು ನಂಬಿದ್ದೇನೆ. ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಕೆಲವು ಹೊತ್ತು ಇದ್ದರೂ, ಪಾತ್ರ ತುಂಬಾನೇ ಪವರ್‌ಫುಲ್ ಆಗಿದೆ ಎಂದು ನಟಿ ಸಪ್ತಮಿ ಗೌಡ ಅವರು ಹೇಳಿದರು.












Click it and Unblock the Notifications