ಶಿವರಾಜ್‌ಕುಮಾರ್‌ರ 2ನೇ ತಮಿಳು ಸಿನಿಮಾ ಮೊದಲ ದಿನವೇ ಗಳಿಸಿದ್ದು ಎಷ್ಟು ಕೋಟಿ?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60 ಕ್ರಾಸ್ ಆಗಿದ್ರೂ, ಇಂದಿಗೂ 16 ವರ್ಷದ ಚಿರ ಯುವಕರಂತೆ ನಟನೆ ಮಾಡ್ತಿದ್ದಾರೆ. ಅದರಲ್ಲೂ ನಟ ಶಿವಣ್ಣ ಅವರ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಈಗ ಶಿವರಾಜ್‌ಕುಮಾರ್ ಅವರ 2ನೇ ತಮಿಳು ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸ್ ಆಫಿಸ್‌ನಲ್ಲಿ ಕೂಡ ಅಬ್ಬರಿಸಿದೆ.
ಹೀರೋ ಆಗಿ ಶಿವರಾಜ್‌ಕುಮಾರ್ ಅವರ ಮೊದಲನೇ ಸಿನಿಮಾ ರಿಲೀಸ್ ಆಗಿದ್ದು 1986ರಲ್ಲಿ. ಹೀಗೆ ಸಿನಿಮಾ ಲೋಕಕ್ಕೆ ಸುಮಾರು 40 ವರ್ಷಗಳ ಹಿಂದೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಶಿವಣ್ಣ, ಇಂದಿಗೆ 125 ಸಿನಿಮಾಗಳ ಜರ್ನಿ ಸಾಧಿಸಿದ್ದಾರೆ. ಹೀಗಿದ್ದಾಗ ಹ್ಯಾಟ್ರಿಕ್ ಹೀರೋಗೆ ತಮಿಳು ಸಿನಿಮಾ ರಂಗದಲ್ಲಿ ಭರ್ಜರಿ ಆಫರ್ಸ್ ಬರ್ತಿವೆ. ಅದೇ ರೀತಿ ಬೇರೆ ಬೇರೆ ಸಿನಿಮಾ ಇಂಡ್ರಸ್ಟ್ರಿಯಲ್ಲೂ ತಮ್ಮದೇ ಹವಾ ಸೃಷ್ಟಿಸಿದ್ದಾರೆ ನಟ ಶಿವರಾಜ್‌ಕುಮಾರ್.

ಎಷ್ಟು ಕೋಟಿ ರೂಪಾಯಿ?
ಅದರಲ್ಲೂ ಜೈಲರ್ ಹಿಟ್ ಆದ ನಂತರ ನಟ ಶಿವಣ್ಣ ಬೇರೆ ಬೇರೆ ಭಾಷೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಾಗಿ ಧನುಷ್ ಜೊತೆಗೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಮಾಡಿರುವ ಶಿವಣ್ಣ ಮತ್ತೊಂದು ಹಿಟ್ ಕೊಟ್ಟು, ತಮ್ಮ ಅಭಿಮಾನಿಗಳನ್ನ ರಂಜಿಸಿದ್ದಾರೆ. ಹಾಗಾದರೆ ಮೊದಲನೇ ದಿನ ಶಿವಣ್ಣ ಅಭಿನಯದ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಗಳಿಸಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತೆ? ಬನ್ನಿ ತಿಳಿಯೋಣ.
'ಕ್ಯಾಪ್ಟನ್ ಮಿಲ್ಲರ್' ಗಳಿಸಿದ್ದು ಇಷ್ಟು!
ಹೌದು, ನೆರೆಯ ತಮಿಳುನಾಡು ರಾಜ್ಯದಲ್ಲಿ ಸಂಕ್ರಾಂತಿ ದೊಡ್ಡ ಹಬ್ಬ. ಅಲ್ಲಿ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಎಂದು ಆಚರಣೆ ಮಾಡಲಾಗುತ್ತದೆ. ಹೀಗೆ ಸಂಕ್ರಾಂತಿ - ಪೊಂಗಲ್ ಸಂಭ್ರಮದ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ, ಧನುಷ್ ನಟಸಿರುವ 'ಕ್ಯಾಪ್ಟನ್ ಮಿಲ್ಲರ್' ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆಗಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಮೊದಲ ದಿನವೇ ಭರ್ಜರಿ ಸದ್ದು ಮಾಡಿದೆ. 'ಕ್ಯಾಪ್ಟನ್ ಮಿಲ್ಲರ್' ಈಗ ಮೊದಲನೇ ದಿನವೇ ಸುಮಾರು 20 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ.
ತಮಿಳು ಪ್ರೇಕ್ಷಕರು ಫುಲ್ ಫಿದಾ
ನಟ ಶಿವಣ್ಣ ಅಬ್ಬರ ಬಲು ಜೋರಾಗಿದೆ. ಇಷ್ಟು ದಿನ ಕಾಲ ಕನ್ನಡಿಗರಿಗೆ ಈ ನಟ ಮನರಂಜನೆ ರಸದೌತಣ ಉಣಬಡಿಸಿದ್ದರು. ಇದೀಗ ಹೊರ ರಾಜ್ಯಗಳ ಬೇರೆ ಭಾಷೆಗಳಲ್ಲೂ, ಶಿವಣ್ಣ ಹವಾ ಜೋರಾಗಿದೆ. ಅದರಲ್ಲೂ ರಜನಿಕಾಂತ್‌ರ ಅಳಿಯನ ಸಿನಿಮಾದಲ್ಲಿ, ಶಿವಣ್ಣ ಅಬ್ಬರಿಸಿದ್ದಾರೆ. ಈ ಮೂಲಕ ತಮಿಳುನಾಡು ಸಿನಿಮಾ ಪ್ರೇಕ್ಷಕರು ನಟ ಶಿವಣ್ಣ ಅವರ ನಟನೆಗೆ ಫಿದಾ ಆಗಿದ್ದಾರೆ ಅಲ್ಲದೆ ಥಿಯೇಟರ್‌ನಲ್ಲಿ ಸಂಭ್ರಮಿಸಿದ್ದಾರೆ.

ಸೆಂಚುರಿ ಸ್ಟಾರ್ ಕ್ರೇಜ್ ಜೋರು
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ & ರಜನಿಕಾಂತ್ ಅಳಿಯ ಧನುಷ್‌ರ ಸಿನಿಮಾದ ಕುರಿತು ಚರ್ಚೆ ಜೋರಾಗಿದೆ. ಸೆಂಚ್ಯುರಿ ಸ್ಟಾರ್ ಜಗತ್ತಿನಾದ್ಯಂತ ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣರ ಸಿನಿಮಾ ಕ್ರೇಜ್ ನೋಡಿದ ಭಾರತೀಯರು ಫಿದಾ ಆಗಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ರಜನಿಕಾಂತ್‌ರ ತಮಿಳು ಸಿನಿಮಾ 'ಜೈಲರ್' ಮೂಲಕ ಶಿವಣ್ಣ ಮಿಂಚಿದ್ದರು, ಇದೀಗ ರಜನಿಕಾಂತ್ ಅಳಿಯ ಧನುಷ್ ಸಿನಿಮಾದಲ್ಲೂ ಹೊಸ ಸಂಚಲನಕ್ಕೆ ಅವ್ರು ಸಾಕ್ಷಿಯಾಗಿದ್ದಾರೆ
ಕಥೆಯ ಹಿನ್ನೆಲೆ ಏನು ಗೊತ್ತಾ?
ಬ್ರಿಟೀಷರ ಕಾಲದಲ್ಲಿ ನಡೆಯುವ ಕಥೆ ಇದಾದ ಹಿನ್ನೆಲೆ, ವಿಭಿನ್ನವಾಗಿ ನಿರ್ಮಿಸಲಾಗಿದೆ. ತನ್ನ ಗ್ರಾಮ ಕಬಳಿಸಲು ಬರುವ ಬ್ರಿಟೀಷ್ ಆಡಳಿತದ ಸೈನಿಕರು-ಅಧಿಕಾರಿಗಳ ಸಂಹರಿಸುವ ವಿಭಿನ್ನ ಲುಕ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದು, ಡೆವಿಲ್ ಲುಕ್‌ನಲ್ಲಿ ಗನ್ ಹಿಡಿದು ಮಿಂಚಿದ್ದಾರೆ. ಈ ನಡುವೆ ಗ್ರಾಮಕ್ಕಾಗಿ ಹೋರಾಡುವ ಜನರು ಮತ್ತು ಅವರ ಅಸಹಾಯಕತೆ ತೋರಿಸಲಾಗಿದ್ದು, ತಮ್ಮ ತನ ಉಳಿಸಲು ಯಾವ ಹಂತಕ್ಕೂ ಹೋಗಿ ಹೋರಾಡಬಲ್ಲೆ ಎಂಬ ಅಂಶವನ್ನ ಸಿನಿಮಾ ಕಥೆ ತಿಳಿಸುತ್ತದೆ.
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿದೆ. ಇನ್ನು ಈ ಸಿನಿಮಾಗೆ ಅರುಣ್ ಮಾಥೇಶ್ವರನ್ ಅವರು ಡೈರೆಕ್ಷನ್ ಮಾಡಿದ್ದಾರೆ. ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಈ ಹಿಂದೆ ಟ್ರೇಲರ್ ಬಗ್ಗೆ ಕೂಡ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಿನಿಮಾ ನೋಡಿ ಹೊರಗಡೆ ಬಂದ ಅಭಿಮಾನಿಗಳು ಫಿದಾ ಆಗಿ ಮಾತನಾಡಿದ್ದಾರೆ.
ಕನ್ನಡಿಗರ ಹವಾ ಬಲು ಜೋರು
ಕನ್ನಡ ಸಿನಿಮಾ ರಂಗ ಜಗತ್ತಿನಾದ್ಯಂತ ತನ್ನ ಬಲ ಪ್ರದರ್ಶನ ಮಾಡುತ್ತಿದೆ. ಕನ್ನಡಿಗರ ಈ ಸಿನಿಮಾ ಜಗತ್ತಿಗೆ ಹತ್ತಿರ ಹತ್ತಿರ 100 ವರ್ಷಗಳ ಇತಿಹಾಸ ಇದೆ. ಹೀಗಿರುವ ಕನ್ನಡ ಸಿನಿಮಾ ಇಂಡಸ್ಟ್ರಿ ಕಳೆದ 5-6 ವರ್ಷದಿಂದ ಅಬ್ಬರಿಸುತ್ತಿದೆ. ಅದರಲ್ಲೂ ನಟ ಶಿವಣ್ಣ ಅವರು ಈಗ ಇಡೀ ಭಾರತದಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ನೆರೆಯ ತಮಿಳುನಾಡಿನ ಜನ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಅಪ್ಪಿಕೊಂಡು, ಒಪ್ಪಿದ್ದಾರೆ!
ಅಂದಹಾಗೆ ನಟ ಶಿವಣ್ಣ ಹತ್ತಿರ ಹತ್ತಿರ ಸುಮಾರು 40 ವರ್ಷದಿಂದ ಸಿನಿಮಾ ಜಗತ್ತಿಗೆ ದೊಡ್ಡ ಕಲಾ ಸೇವೆ ಒದಗಿಸಿದ್ದಾರೆ. ಅದ್ರಲ್ಲೂ ಬಾಲ ನಟನಾಗಿ, ತಮ್ಮ ತಂದೆಯಾದ ವರನಟ ಡಾ.ರಾಜ್‌ಕುಮಾರ್ ಅವರ ಜೊತೆಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು ಹ್ಯಾಟ್ರಿಕ್ ಹೀರೋ. ಮುಂದೆ ಸ್ವತಂತ್ರ ನಟನಾಗಿ, ಶಿವಣ್ಣ ಹೀರೋ ಆಗಿ ಮಿಂಚಿದ್ರು. ಆಗಿನ ಹೊಸ ತಲೆಮಾರಿನಿಂದ ಹಿಡಿದು, ಈಗಿನ ಹೈಟೆಕ್ ಹುಡುಗರ ತನಕ ಶಿವಣ್ಣನ ಸಿನಿಮಾಗೆ ತಲೆಬಾಗದೆ ಇರುವವರು ಇಲ್ಲ.












Click it and Unblock the Notifications