Kichha Sudeep: ಹೊಸಬರ ಸಿನಿಮಾಗೆ ನಟ ಕಿಚ್ಚ ಸುದೀಪ್ ಸಾಥ್!

ಸ್ಯಾಂಡಲ್‌ವುಡ್‌ನ ಹಲವು ಹೊಸಬರಿಗೆ ನಟ ಕಿಚ್ಚ ಸುದೀಪ್ ಸಾಥ್ ನೀಡಿ, ಅವರ ಚಿತ್ರ ರಿಲೀಸ್‌ಗೂ ಸಹಾಯ ಮಾಡಿದ್ದಾರೆ. ಅದೇ ರೀತಿ ಇದೀಗ ಹೊಸಬರ ಸ್ಪೆಷಲ್ ಸಿನಿಮಾಗಾಗಿ ಸಾಥ್ ನೀಡಿದ್ದಾರೆ. ಹಾಗಾದರೆ ಯಾವುದು ಆ ಹೊಸ ಸಿನಿಮಾ? ಹೊಸ ಚಿತ್ರದ ಟ್ರೇಲರ್ ಬಗ್ಗೆ ನಟ ಕಿಚ್ಚ ಸುದೀಪ್ ಹೇಳಿದ್ದೇನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಸ್ಯಾಂಡಲ್‌ವುಡ್ ಅಂಗಳದಲ್ಲಿ 'ಅನಾವರಣ' ಟೈಟಲ್‌ನಡಿ ರಿಲೀಸ್‌ಗೆ ರೆಡಿಯಾದ ಈ ಚಿತ್ರ ಹಾಡುಗಳ ಮೂಲಕವೇ ಹವಾ ಎಬ್ಬಿಸಿದೆ. ಫಸ್ಟ್ ಲುಕ್ ಮೂಲಕವೂ ಚಿತ್ರ ಸದ್ದ ಮಾಡಿ, ಸುದ್ದಿಯಾಗಿತ್ತು. ಲವ್, ಕ್ರೈಂ, ಕುಟುಂಬ, ಎಮೋಷನ್ ಜೊತೆ ಸಸ್ಪೆನ್ಸ್ ಅಂಶದಿಂದ ಕೂಡಿ ಗಮನ ಸೆಳೆದ ಸಿನಿಮಾದ ಟ್ರೇಲರ್ ಅನ್ನು ನಟ ಕಿಚ್ಚ ಸುದೀಪ್ ರಿಲೀಸ್ ಮಾಡಿ, ಶುಭಾಶಯ ಕೋರಿದ್ದಾರೆ. ಅಲ್ಲದೆ ಟ್ರೇಲರ್ ಬಗ್ಗೆ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

kiccha-sudeep-released-new-kannada-movie-trailer

ಏನ್ ಹೇಳಿದ್ರು ನಟ ಕಿಚ್ಚ ಸುದೀಪ್?

'ಅನಾವರಣ' ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ನಟ ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡು, ಸಿನಿಮಾ ತಂಡಕ್ಕೆ & ಅವರ ಪರಿಶ್ರಮಕ್ಕೆ ಒಳ್ಳೆದಾಗಲಿ. ಡಿಸೆಂಬರ್ 1ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಟ್ರೇಲರ್ ನೋಡುವಾಗ, ಬಹಳ ಪರಿಚಯಸ್ಥರು ತುಂಬಾ ಜನ ಈ ಸಿನಿಮಾದಲ್ಲಿ ಇದ್ದಾರೆ.

ಟ್ರೇಲರ್ ಚೆನ್ನಾಗಿ ಮೂಡಿ ಬಂದಿದ್ದು, ಸಿನಿಮಾ ಟೀಂಗೆ ಆಲ್ ದಿ ಬೆಸ್ಟ್ ಅಂದಿದ್ದಾರೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಈ 'ಅನಾವರಣ' ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

kiccha-sudeep-released-new-kannada-movie-trailer

ಯಾರೆಲ್ಲಾ ಇದ್ದಾರೆ ಸಿನಿಮಾದಲ್ಲಿ?

ನಮ್ಮ ಸಿನಿಮಾ ಬ್ಯಾನರ್ ಅಡಿ ಅದ್ವೈತ್ ಪ್ರಭಾಕರ್, ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ನಿರ್ಮಿಸಿದ್ದಾರೆ. ಅನಾವರಣ ಸಿನ್ಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ಸೇರಿ, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ ಸೇರಿದಂತೆ ಹಲವು ಪರಿಚಿತ ಕಲಾವಿದರು ನಟಿಸಿದ್ದಾರೆ. ನಾಗೇಂದ್ರ ಪ್ರಸಾದ್ ಹಾಗೂ ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಸಿನಿಮಾಗೆ ಇರುವುದು ವಿಶೇಷ.

ಒಟ್ನಲ್ಲಿ ವಿಭಿನ್ನ ಕಥಾ ಹಂದರದ ಹೊಸ ಕನ್ನಡ ಸಿನಿಮಾ ತಂಡಕ್ಕೆ ನಟ ಕಿಚ್ಚ ಸುದೀಪ್ ಅವರು ಸಾಥ್ ನಿಡಿ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ಹಾಗೇ, ಇನ್ನೇನು ಕೆಲ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಟ್ರೇಲರ್ ಬಗ್ಗೆಯೂ ನಟ ಸುದೀಪ್ ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+