ಚಿಕ್ಕಣ್ಣ & ಶರಣ್ ಜೋಡಿ ಮೋಡಿ, ಉಪಾಧ್ಯಕ್ಷ ಸಿನಿಮಾ ಕಲೆಕ್ಷನ್ ನೋಡಿ!

ಅದು 2014 ನಟ ಚಿಕ್ಕಣ್ಣ ಮತ್ತು ಶರಣ್ ಅವರ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕೊಟ್ಟಿತ್ತು. 'ಅಧ್ಯಕ್ಷ' ಸಿನಿಮಾ ಮೂಲಕ ಇಬ್ಬರು ಭರ್ಜರಿ ಸಕ್ಸಸ್ ಪಡೆದರು. ಹೀಗೆ ಅಧ್ಯಕ್ಷ ಸಿನಿಮಾ ನೋಡ ನೋಡುತ್ತಲೇ ಸೂಪರ್ ಹಿಟ್ ಸಿನಿಮಾ ಆಗಿತ್ತು. ಹಾಗೇ ಬಾಕ್ಸ್ ಆಫಿಸ್‌ನಲ್ಲಿ ಕೂಡ ಭರ್ಜರಿ ಸಕ್ಸಸ್ ಪಡೆದಿತ್ತು 'ಅಧ್ಯಕ್ಷ' ಸಿನಿಮಾ. ಇದೀಗ 10 ವರ್ಷಗಳ ನಂತರ 'ಅಧ್ಯಕ್ಷ' ಸಿನಿಮಾದ ಮುಂದುವರಿದ ಭಾಗ 'ಉಪಾಧ್ಯಕ್ಷ' ರಿಲೀಸ್ ಆಗಿ ಅಬ್ಬರಿಸುತ್ತಿದೆ.

ಚಿಕ್ಕಣ್ಣ ಯಾವುದೇ ಪಾತ್ರಕ್ಕೂ ಹೊಂದಿಕೊಳ್ಳುವ ನಟ. ಹೀಗಾಗಿಯೇ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ. ಆದರೆ ಇದೇ ಮೊದಲ ಬಾರಿಗೆ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿದ್ದಾಗ ಚಿಕ್ಕಣ್ಣ ಅವರಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹಾಗೇ 'ಉಪಾಧ್ಯಕ್ಷ' ಸಿನಿಮಾ ಸಕ್ಸಸ್ ನೋಡಿ ಪ್ರೇಕ್ಷಕರು ಕೂಡ ಈಗ ಜೈಕಾರ ಹಾಕುತ್ತಿದ್ದಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾ 3 ದಿನದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಾಕ್ಸ್ ಆಫಿಸ್‌ನಲ್ಲಿ ಗೆದ್ದಿದೆಯಾ? ಅಥವಾ ಸೋತಿದೆಯಾ?

Sandalwood Star Chikkanna & Sharan Movie Upadhyaksha Is Getting Good Response In Box Office

ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಉಪಾಧ್ಯಕ್ಷ'

ಹೌದು, ಗಣರಾಜ್ಯೋತ್ಸವ ರಜೆ ನಡುವೆ ಸಂಭ್ರಮದ ಬಿಡುಗಡೆ ಪಡೆದ 'ಉಪಾಧ್ಯಕ್ಷ' ಈಗ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅದರಲ್ಲೂ ಈ ಸಿನಿಮಾ ರಿಲೀಸ್ ಆದ ನಂತರವೇ ಸಾಲು ಸಾಲು ರಜೆ ಬಂದಿವೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೊದಲ ದಿನವೇ ಕೋಟಿಗೂ ಹೆಚ್ಚು ಗಳಿಸಿದ್ದು, 2ನೇ ದಿನವಾದ ಶನಿವಾರ ಕೂಡ ಭರ್ಜರಿ ಕಲೆಕ್ಷನ್ ಮಾಡಿತ್ತು. ಹಾಗೇ 3ನೇ ದಿನಕ್ಕೆ ಸುಮಾರು 2 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದು. ಈ ಮೂಲಕ 3 ದಿನದಲ್ಲಿ ಉಪಾಧ್ಯಕ್ಷ ಸಿನಿಮಾ ಸುಮಾರು 5 ಕೋಟಿ ರೂಪಾಯಿ ಬಾಚಿದೆ ಎನ್ನಲಾಗುತ್ತಿದೆ. ಆದರೆ ಸಿನಿಮಾ ತಂಡ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

ಶರಣ್ ಮೋಡಿಗೆ ಫ್ರೇಕ್ಷಕ ಫಿದಾ

'ಉಪಾಧ್ಯಕ್ಷ' ರಿವ್ಯೂ ವೇಳೆ ಪ್ರೇಕ್ಷಕರು ಕೂಡ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಬಗ್ಗೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಚಿಕ್ಕಣ್ಣ ಅವರು ಹೀರೋ ಆಗಿದ್ದರೂ, ಉಪಾಧ್ಯಕ್ಷದಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮರೆತಿಲ್ಲ. ಇದು ಕೂಡ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಈಗ, ಸಿಕ್ಕಾಪಟ್ಟೆ ಇಷ್ಟವಾಗಿದೆ. ಹಾಗೇ ಕುಟುಂಬ ಸಮೇತ ಸಿನಿಮಾ ನೋಡುತ್ತಿದ್ದಾರೆ. ಇದರ ಜೊತೆಗೆ ನಟ ಶರಣ್ ಕೂಡ ಈ ಸಿನಿಮಾದಲ್ಲಿ, ಅತಿಥಿ ಪಾತ್ರ ಮಾಡಿದ್ದಾರೆ. ಈ ಮೂಲಕ ಚಿಕ್ಕಣ್ಣ & ಶರಣ್ ಅವರ ಕಾಂಬಿನೇಷನ್ ಕೂಡ ಭರ್ಜರಿ ಸಕ್ಸಸ್ ಕೊಟ್ಟಿದೆ.

Sandalwood Star Chikkanna & Sharan Movie Upadhyaksha Is Getting Good Response In Box Office

ಹೀರೋ ಆಗಿ ಗೆದ್ದರು ಚಿಕ್ಕಣ್ಣ

ಚಿಕ್ಕಣ್ಣ ಕಾಮಿಡಿ ಮಾಡ್ತಾ ಮಾಡ್ತಾ ಕೋಟ್ಯಂತರ ಫ್ಯಾನ್ಸ್ ಹೃದಯ ಗೆದ್ದರೆ. ಅದರಲ್ಲೂ ಈ ನಟ ಈಗಾಗಲೇ ನೂರಾರು ಸಿನಿಮಾದಲ್ಲಿ ಮಿಂಚಿದ್ದಾರೆ. ಆದರೆ ಎಲ್ಲೋ ಚಿಕ್ಕಣ್ಣ ಹೀರೋ ಆಗಬೇಕು ಎನ್ನುವ ಆಸೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಆ ಆಸೆಯೂ ನೆರವೇರಿದೆ. ಈ ಮೂಲಕ, ಚಿಕ್ಕಣ್ಣ ಹೀರೋ ಆಗಿ ಗೆದ್ದಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರು ಉಪಾಧ್ಯಕ್ಷ ಸಿನಿಮಾ ನೋಡಿ ಮೆಚ್ಚಿದ್ದಾರೆ. ಕುಟುಂಬ ಸಮೇತ ಸಿನಿಮಾ ನೋಡುತ್ತಿರುವ ಕಾರಣ ಕಲೆಕ್ಷನ್ ಕೂಡ ಬುಲೆಟ್ ರೈಲಿನಂತೆ ಏರುತ್ತಿದೆ.

ಹೀಗೆ ನಟ ಚಿಕ್ಕಣ್ಣ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಅಲ್ಲದೆ ತಾವು ಹೀರೋ ಆಗಿಯೂ ಗೆಲ್ಲಬಹುದು ಎಂಬುದನ್ನು ತೋರಿಸಿದ್ದಾರೆ. ಈ ಮೂಲಕ ಚಿಕ್ಕಣ್ಣ ತಮ್ಮ ವ್ಯಾಪ್ತಿಯನ್ನೂ ವಿಸ್ತರಿಸಿಕೊಂಡಿದ್ದು, ಮತ್ತಷ್ಟು ಸಿನಿಮಾಗಳಲ್ಲಿ ಇದೇ ರೀತಿ ಸದ್ದು ಮಾಡೋದು ಗ್ಯಾರಂಟಿ ಅಂತಿದ್ದಾರೆ ಅವರ ಅಭಿಮಾನಿಗಳು.

5 ಕೋಟಿಗೂ ಹೆಚ್ಚು ಕಲೆಕ್ಷನ್?

ಗಣರಾಜ್ಯೋತ್ಸವ ರಜೆಯಲ್ಲಿ ಸಂಭ್ರಮದ ಬಿಡುಗಡೆ ಪಡೆದ 'ಉಪಾಧ್ಯಕ್ಷ' ಈಗ ದಾಖಲೆ ಮೇಲೆ ದಾಖಲೆ ಬರೆದಿದೆ. ಅದರಲ್ಲೂ ಸಿನಿಮಾ ರಿಲೀಸ್ ಆದ ನಂತರವೇ ಸಾಲು ಸಾಲು ರಜೆ ಬಂದಿವೆ. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೊದಲ ದಿನವೇ ಕೋಟಿಗೂ ಹೆಚ್ಚು ಗಳಿಸಿದ್ದು, ಈಗಾಗಲೇ ಲೆಕ್ಕ ಹೇಳುವಂತೆ ಕೋಟಿ ಕೋಟಿ ಗಳಿಸಿದೆಯಂತೆ. ಸೋಷಿಯಲ್ ಮೀಡಿಯಾದಲ್ಲಿ ಓಡಾಡುವ, ಪೋಸ್ಟರ್‌ಗಳು ಹೇಳುವಂತೆ ಸುಮಾರು 5 ಕೋಟಿಗೂ ಹೆಚ್ಚು ಗಳಿಸಿದೆ ಉಪಾಧ್ಯಕ್ಷ ಸಿನಿಮಾ ಎನ್ನಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಕಲೆಕ್ಷನ್‌ನ ಬಗ್ಗೆ ಹೇಳಿಕೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+