ದೊಡ್ಮನೆ ಮೊಮ್ಮಗನ ಸಿನಿಮಾಗೆ ‘ಗೋಲ್ಡನ್ ಸ್ಟಾರ್’ ಸಾಥ್!

ಒಂದು ಸರಳ ಪ್ರೇಮ ಕಥೆ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದ, ಚೆಂದದ ಹಾಡನ್ನ ಉಡುಗೊರೆಯಾಗಿ ನೀಡಲು ಸಿದ್ಧರಾಗಿದ್ದಾರೆ. ಈಗಾಗಲೇ, ನೀನ್ಯಾರೆಲೆ.. ನಿನಗಾಗಿಯೇ ಈ ಜೀವ ಭಾವ ಸೋಜಿಗ.. ಎಂಬ ಹಾಡು ನೀಡಿರುವ 'ಒಂದು ಸರಳ ಪ್ರೇಮ ಕಥೆ' ಸಿನಿಮಾ ತಂಡ, ಇದೀಗ ಮತ್ತೊಂದು ಸರ್ಪ್ರೈಸ್‌ನ ನೀಡಲು ಸಜ್ಜಾಗಿದೆ. ಹಾಗಾದರೆ ಏನದು ಸರ್ಪ್ರೈಸ್? ಮುಂದೆ ಓದಿ.

'ಒಂದು ಸರಳ ಪ್ರೇಮ ಕಥೆ' ಆರಂಭದಿಂದಲೂ ಕನ್ನಡ ಸಿನಿ ಫ್ಯಾನ್ಸ್ ಗಮನ ಸೆಳೆಯುತ್ತಿದೆ. ಇದೆ ಮೊದಲ ಬಾರಿ ದೊಡ್ಮನೆ ಮೊಮ್ಮಗ ವಿನಯ್ ರಾಜ್ ಕುಮಾರ್‌ಗೆ ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿದ್ದಾರೆ. ವಿನಯ್‌ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್ & ರಾಧಾ ಕೃಷ್ಣ ಧಾರಾವಾಹಿ ಖ್ಯಾತಿ ಮಲ್ಲಿಕಾ ಸಿಂಗ್, ಇಬ್ಬರು ಚೆಲುವೆಯರು ನಾಯಕಿಯಾರಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೊಲ್‌ನಲ್ಲಿ ನಟಿಸಿದ್ದು. ಈ ಸಿನಿಮಾಗೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಸಾಥ್ ನೀಡಿದ್ದಾರೆ.

Sandalwood Movie Ondu Sarala Prema Kathe Movie Team Is Preparing For Song Release

ಗೋಲ್ಡನ್ ಸ್ಟಾರ್ ಗಣೇಶ್ ಸಾಥ್

ಹೌದು, 'ಒಂದು ಸರಳ ಪ್ರೇಮ ಕಥೆ' ಸಿಂಪಲ್ ಸುನಿ ನಿರ್ದೇಶನದಲ್ಲಿ ಅದ್ಧೂರಿಯಾಗಿ ಸಿದ್ಧ ಆಗಿದೆ. ಈ ಹಿನ್ನೆಲೆ ಚಿತ್ರದ ಹಾಡುಗಳನ್ನ ರಿಲೀಸ್ ಮಾಡಲು ಸಿದ್ಧತೆ ಕೂಡ ನಡೆದಿದೆ. ನಾಳೆ ನಡೆಯುವ ಈ ಸಮಾರಂಭದಲ್ಲಿ ಮುಂಗಾರು ಮಳೆ ಗಣೇಶ್ ಕೂಡ ಭಾಗಿ ಆಗಲಿದ್ದಾರೆ. ಈ ಮೂಲಕ ಇದೀಗ ದೊಡ್ಮನೆ ಮೊಮ್ಮಗನ ಸಿನಿಮಾಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಸಾಥ್ ನೀಡುತ್ತಿದ್ದಾರೆ. ಹೀಗೆ 'ಒಂದು ಸರಳ ಪ್ರೇಮ ಕಥೆ' ಮತ್ತಷ್ಟು ಗಮನವನ್ನ ಸೆಳೆದಿದೆ. ಹಾಗೆ ಅಭಿಮಾನಿಗಳಿಗೂ ಈ ಮೂಲಕ ತನ್ನ ಮ್ಯೂಸಿಕ್ ಮಸ್ತಿ ನೀಡಲು ಸಜ್ಜಾಗಿದೆ ಸಿನಿಮಾ.

Sandalwood Movie Ondu Sarala Prema Kathe Movie Team Is Preparing For Song Release

ನಾಳೆ ಸಿಗಲಿದೆ ಭರ್ಜರಿ ಸರ್ಪ್ರೈಸ್!

ಇನ್ನೂ 'ಒಂದು ಸರಳ ಪ್ರೇಮ ಕಥೆ' ಸಿನಿಮಾಗೆ ರಾಜೇಶ್ ನಟರಂಗ & ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ಸಾಥ್ ನೀಡಿದ್ದಾರೆ. ಸಿನಿಮಾ ತಂಡಕ್ಕೆ ಆದಿ ಸಂಕಲನ ಇದ್ರೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ. ಹೀಗಾಗಿ ಸಿನಿಮಾ ಆರಂಭದಿಂದ ಕೂಡ ಗಮನ ಸೆಳೆದಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನಾಳೆಯೇ ಉತ್ತರ ಸಿಗಲಿದ್ದು, ಹಾಡು ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

Sandalwood Movie Ondu Sarala Prema Kathe Movie Team Is Preparing For Song Release

ಒಟ್ನಲ್ಲಿ ಈಗಾಗಲೇ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ವಿನಯ್ ರಾಜ್‌ಕುಮಾರ್ ಈಗ ವಿಭಿನ್ನ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಳೆದು, ತೂಗಿ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ವಿನಯ್ ರಾಜ್‌ಕುಮಾರ್. ಈಗ ಅದೇ ರೀತಿ, ಒಂದು ಸರಳ ಪ್ರೇಮ ಕಥೆ ಕೂಡ ಕಮಾಲ್ ಮಾಡಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+