ಕನ್ನಡದಲ್ಲಿ ಏನಿದು ‘ಬಿಸಿ-ಬಿಸಿ Ice-Cream’ ಮಹಿಮೆ?

ಸ್ಯಾಂಡಲ್‌ವುಡ್‌ಗೆ ಪ್ರತಿ ವರ್ಷ ನೂರಾರು ಹೊಸಬರ ಸಿನಿಮಾಗಳು ಬರ್ತವೆ. ಆದರೆ ಇಲ್ಲಿ ಉಳಿಯುವ ಮತ್ತು ಪ್ರೇಕ್ಷಕರ ಮನಸ್ಸನ್ನು ಆಳುವ ಹೊಸಬರ ಹೊಸ ಹೊಸ ಸಿನಿಮಾಗಳು ಬೆರಳೆಣಿಕೆಯಷ್ಟು ಮಾತ್ರ. ಅದೇ ರೀತಿ ಇದೀಗ, ಕನ್ನಡ ಸಿನಿಮಾ ಇಂಡಸ್ಟ್ರಿಗೆ 'ಬಿಸಿ-ಬಿಸಿ Ice-Cream' ಬಂದಿದೆ. ತನ್ನ ಟೈಟಲ್ ಮೂಲಕವೇ ಹವಾ ಎಬ್ಬಿಸಿರುವ 'ಬಿಸಿ-ಬಿಸಿ Ice-Cream' ಈಗ ಟ್ರೇಲರ್ ಮೂಲಕವೂ ಹೊಸ ಅಬ್ಬರ ಶುರು ಮಾಡಿದೆ.

ಅಷ್ಟಕ್ಕೂ ಕನ್ನಡ ಸಿನಿ ರಂಗಕ್ಕೆ 2024 ಸಿಕ್ಕಾಪಟ್ಟೆ ಕಲರ್‌ಫುಲ್ ಆಗುವ ಎಲ್ಲಾ ಲಕ್ಷಣ ಕಾಣ್ತಿದೆ. ಅದೇ ರೀತಿ 'ಬಿಸಿ-ಬಿಸಿ Ice-Cream' ಕಥೆಯನ್ನ ಕನ್ನಡಿಗರ ಎದುರು ಹೇಳೋದಿಕ್ಕೆ ಬರ್ತಿದ್ದಾರೆ ಅರವಿಂದ್ ಶಾಸ್ತ್ರಿ. ಮೊದಲೇ ಹೇಳಿದಂತೆ ಟೈಟಲ್ ಮೂಲಕವೇ ಈ ಸಿನಿಮಾ ಪ್ರೇಕ್ಷಕರನ್ನ ಸೆಳೆದಿತ್ತು. ಇದೀಗ ತನ್ನ ಟ್ರೇಲರ್ ಮೂಲಕ ಹೊಸ ಹವಾ ಸೃಷ್ಟಿಸುವ ಸೂಚನೆ ನೀಡಿದೆ. ಹಾಗಾದರೆ ಸಿನಿಮಾ ತಂಡ 'ಬಿಸಿ-ಬಿಸಿ Ice-Cream' ಕಥೆ ಬಗ್ಗೆ ಹೇಳಿದ್ದಾದ್ರೂ ಏನು? ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

Sandalwood Movie Bisi Bisi Ice Cream Team Released The Trailer

ಯಾವಾಗ ರಿಲೀಸ್ 'ಬಿಸಿ-ಬಿಸಿ Ice-Cream'?

ಅಂದಹಾಗೆ 'ಬಿಸಿ-ಬಿಸಿ Ice-Cream' ಟ್ರೇಲರ್ ರಿಲೀಸ್ ಮಾಡಿ ಸಿನಿಮಾ ತಂಡ ತಮ್ಮೆಲ್ಲರ ಅನಿಸಿಕೆ ಹಂಚಿಕೊಂಡಿದೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಅರವಿಂದ್ ಶಾಸ್ತಿ ಮಾತನಾಡ್ತಾ, ಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ನಾವು ಆ ವ್ಯಕ್ತಿ ಕಥೆನ ಸಿನಿಮಾದಲ್ಲಿ ತಿಳಿಸಲು ಹೊರಟಿದ್ದೇವೆ. ಶೂಟಿಂಗ್ ಮುಗಿಸಿ, ವರ್ಷ ಕಳೆದಿದ್ದೇವಿ. ಒಂಟಿ ಕ್ಯಾಬ್ ಡ್ರೈವರ್‌ನ ಲೈಫಲ್ಲಿ ವಿಸ್ಮಯಕಾರಿ ಹುಡುಗಿ ಬಂದಾಗ, ಅಡ್ವೆಂಚರ್ಸ್ ಮತ್ತು ಮಿಸ್ ಅಡ್ವೆಂಚರ್ಸ್ ಹೇಗೆಲ್ಲ ಆಗುತ್ತೆ? ಅನ್ನೋದನ್ನ ಈ ಸಿನಿಮಾದಲ್ಲಿ ಹೇಳ್ತಿದ್ದೀವಿ. ಮಾರ್ಚ್ ತಿಂಗಳಲ್ಲಿ ನಮ್ಮ ಸಿನಿಮಾ ರಿಲೀಸ್ ಮಾಡುತ್ತೇವೆ ಅಂತ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಸಿನಿಮಾ ನಾಯಕನ ಮಾತು

ನಟ ಅರವಿಂದ್ ಐಯ್ಯರ್ ಮಾತನಾಡಿ, ನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕೋಸ್ಕರ ಸಖತ್ ವರ್ಕೌಟ್ ಮಾಡಿದ್ದೇನೆ. ನಟನೆ ಮಾಡಲು ಒಳ್ಳೆ ಅವಕಾಶ ಸಿಕ್ಕಿದ್ದು ಆಕ್ಟಿಂಗ್ ಮಾಡಬೇಕು. ಪರ್ಫಾಮ್ ಮಾಡಬೇಕು ಎಂದು ಮಾಡಿದ್ದಲ್ಲ. ನಮ್ಮ ತಯಾರಿ ಚೆನ್ನಾಗಿತ್ತು, ಬಹಳ ಖುಷಿ, ಖುಷಿಯಿಂದ ಈ ಸಿನಿಮಾದಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಹಾಗೇ ಈ ಸಿನಿಮಾದಲ್ಲಿ ತುಂಬಾ ಡಿಫರೆಂಟ್ ಸಬ್‌ಜೆಕ್ಟ್ ಹೇಳಲು ಬರ್ತಿದ್ದೀವಿ ಅಂದ್ರು.

ಹೇಗೆ ಸಾಗಲಿದೆ ಸಿನಿಮಾ ಕಥೆ?

ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾ ಈಗಾಗಲೇ ಬಂದಿವೆ. ಆದರೂ ಬಿಸಿಬಿಸಿ Ice-Cream, ಅನಾರೋಗ್ಯದಲ್ಲಿ ಇರುವ ಕ್ಯಾಬ್ ಡ್ರೈವರ್‌ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ ಏನಾಗುತ್ತೆ? ಎಂಬುದನ್ನ ತಿಳಿಸಲಿದೆ. ಅವಳು ಅವನ ದುಃಖಗಳಿಗೆ ಹೇಗೆ ಔಷಧ ನೀಡುತ್ತಾಳೆ & ಅನೇಕ ಸಾಹಸಕ್ಕೆ ಹೇಗೆ ನಾಂದಿಯಾಗುತ್ತಾಳೆ. ಎಂಬ ಕಥೆ ಎಳೆ ಇಟ್ಟುಕೊಂಡು, ಅರವಿಂದ್ ಶಾಸ್ತ್ರಿ ಈ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

Sandalwood Movie Bisi Bisi Ice Cream Team Released The Trailer

ಇನ್ನು ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ, ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ & ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವುದು ಗಮನ ಸೆಳೆದಿದೆ. ಹೀಗೆ ಮತ್ತೊಂದು ವಿಭಿನ್ನವಾದ ಸಿನಿಮಾ ಕೊಡಲು ಈ ತಂಡ ಸಿದ್ಧವಾಗಿದೆ.

ದೊಡ್ಡ ಗ್ಯಾಪ್ ನಂತರ ಕಂಬ್ಯಾಕ್

ಅಷ್ಟಕ್ಕೂ ಅರವಿಂದ್ ಶಾಸ್ತ್ರಿ ಒಂದು ಗ್ಯಾಪ್ ನಂತರ ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. 4 ವರ್ಷ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರಿ ಒಂದೊಳ್ಳೆ ತಾಜಾ ತಾಜಾ ಕಂಟೆಂಟ್ ಮೂಲಕ ಪ್ರೇಕ್ಷಕರ ಎದುರು ಹಾಜರಾಗ್ತಿದ್ದಾರೆ. ಇನ್ನು ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಇದೀಗ ಟ್ರೇಲರ್ ಕೂಡ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+