‘ಕಾಂತಾರ’ ರಿಷಬ್ ಶೆಟ್ಟಿ ಬಿಟ್ಟುಕೊಟ್ಟ ಹೊಸ ಸಿನಿಮಾದ ಹಾಡು ರಿಲೀಸ್!

ನಟ ರಿಷಬ್ ಶೆಟ್ಟಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಟ್ಯಾಲೆಂಟೆಡ್ ನಟರು ಮಾತ್ರವಲ್ಲ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ನಿರ್ದೇಶಕ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ. ಅದ್ರಲ್ಲೂ ಈ ನಟನ 'ಕಾಂತಾರ' ಸಿನಿಮಾ ಸಖತ್ ದೊಡ್ಡ ಸಕ್ಸಸ್ ಪಡೆದು ಮಿಂಚಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ 'ಕಾಂತಾರ' ಸಿನಿಮಾಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಿಷಬ್ ಅವರು ಹಲವು ಸಿನಿಮಾಗಳನ್ನು ಬಿಟ್ಟು ಕೊಟ್ಟಿದ್ದಾರೆ!

ಹೌದು, 'ಕಾಂತಾರ' ದೊಡ್ಡ ಮಟ್ಟಿಗೆ ಸಕ್ಸಸ್ ಪಡೆದ ನಂತರ ರಿಷಬ್ ಶೆಟ್ಟಿ ಅವರು ಆಗ ಅನಿವಾರ್ಯ ಕಾರಣಕ್ಕೆ ಹಲವು ಸಿನಿಮಾಗಳಿಂದ ಹಿಂದೆ ಸರಿದರು. 'ಬ್ಯಾಚುಲರ್‌ ಪಾರ್ಟಿ' ಸಿನಿಮಾ ಕೂಡ ಅದರಲ್ಲಿ ಒಂದು. 'ಕಾಂತಾರ' ದೊಡ್ಡ ಹಿಟ್ ಆಗುವ ಮೊದಲು ಸಿನಿಮಾ ಘೋಷಣೆ ಆಗಿತ್ತು. ಈ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಹಣ ಹಾಕೋದು ಕೂಡ ಕನ್ಫರ್ಮ್ ಆಗಿತ್ತು. ಆದ್ರೆ ಅಂತಿಮವಾಗಿ 'ಕಾಂತಾರ' ಸಿನಿಮಾ ಜಗತ್ತಿನಾದ್ಯಂತ ಸಕ್ಸಸ್ ಆಗಿ. ಎಲ್ಲಾ ಕಡೆ ಅಬ್ಬರಿಸಲು ಶುರುವಾದ ನಂತರ, ಅನಿವಾರ್ಯವಾಗಿ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಮುಂದುವರಿದ ಭಾಗಕ್ಕೆ ಸಜ್ಜಾದರು. ಹೀಗಾಗಿ 'ಬ್ಯಾಚುಲರ್‌ ಪಾರ್ಟಿ' ಸಿನಿಮಾ ಬಿಟ್ಟುಕೊಟ್ಟರು.

Sandalwood Movie Bachelor Party First Song Getting Viral On Social Media

ರಿಷಬ್ ಜಾಗಕ್ಕೆ ಬಂದರು ಲೂಸ್ ಮಾದ!

'ಬ್ಯಾಚುಲರ್‌ ಪಾರ್ಟಿ' ಟೈಟಲ್‌ನಡಿ ರಿಲೀಸ್ ಆಗಿದ್ದ ಸಿನಿಮಾ ಒಂದರ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿತ್ತು. 'ಬ್ಯಾಚುಲರ್‌ ಪಾರ್ಟಿ' ಫಸ್ಟ್ ಲುಕ್ ನೋಡಿದ್ದ ಅಭಿಮಾನಿಗಳು ಥ್ರಿಲ್ ಆಗಿದ್ದರು. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಜತೆಗೆ ಅಚ್ಯುತ್ ಕುಮಾರ್ ಮತ್ತು ದಿಗಂತ್ ನಟಿಸೋದು ಗ್ಯಾರಂಟಿ ಆಗಿತ್ತು. ಆದರೆ 'ಕಾಂತಾರ'ದ ಅಬ್ಬರದ ಎದುರು, ಎಲ್ಲವೂ ಬದಲಾಗಿ ಹೋಗಿತ್ತು. ರಿಷಬ್ ಶೆಟ್ಟಿ ತಮ್ಮ ಪೂರ್ಣ ಗಮನ ಕಾಂತಾರ-1 ಮೇಲೆ ಕೇಂದ್ರೀಕರಿಸಿದ್ದರಿಂದ, 'ಬ್ಯಾಚುಲರ್‌ ಪಾರ್ಟಿ' ಬಿಟ್ಟುಕೊಟ್ಟರು. ಅವರ ಜಾಗಕ್ಕೆ ಲೂಸ್ ಮಾದ ಯೋಗಿ ಬಂದರು ಈ ಸಿನಿಮಾದ ಟೀಸರ್ ಬಳಿಕ ಈಗ ಮೊದಲನೇ ಸಾಂಗ್ ಕೂಡ ಸದ್ದು ಮಾಡುತ್ತಿದೆ.

'ವಾರ್ನಿಂಗ್ ಸಾಂಗ್' ಬಿಟ್ಟ ಟೀಂ!

ಅಂದಹಾಗೆ ಇದೀಗ 'ಬ್ಯಾಚುಲರ್‌ ಪಾರ್ಟಿ' ಸಿನಿಮಾ ತಂಡ 'ವಾರ್ನಿಂಗ್ ಸಾಂಗ್' ರಿಲೀಸ್ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಟೀಸರ್ ರಿಲೀಸ್ ಮಾಡಿದ್ದ ಟೀಂ ಈಗ 'ವಾರ್ನಿಂಗ್ ಸಾಂಗ್' ರಿಲೀಸ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ, ಈ ಸಾಂಗ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಹೊಸ ವರ್ಷದ ಸಮಯದಲ್ಲೇ ಅಭಿಮಾನಿಗಳಿಗೂ ಸರ್ಪ್ರೈಸ್ ಕೊಟ್ಟಿದೆ.

ಸಿಂಪಲ್ ಸ್ಟಾರ್ ಬಿರುದಾಂಕಿತ ರಕ್ಷಿತ್ ಶೆಟ್ಟಿ ನಿರ್ಮಾಣದ & ಅಬಿಜಿತ್‌ ಮಹೇಶ್‌ ನಿರ್ದೇಶನದ 'ಬ್ಯಾಚುಲರ್‌ ಪಾರ್ಟಿ'ಗೆ ಕೌಂಟ್‌ಡೌನ್ ಶುರುವಾಗಿದೆ. ಹೊಸ ವರ್ಷಕ್ಕೆ ಅಂದ್ರೆ 2024 ಜನವರಿ 26ಕ್ಕೆ 'ಬ್ಯಾಚುಲರ್‌ ಪಾರ್ಟಿ' ಭರ್ಜರಿಯಾಗಿ ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾ ರಿಲೀಸ್‌ಗಾಗಿ ಬೇಕಿರುವ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+