Upendra: ನನ್ನ ಎದುರಲ್ಲೇ ಆ್ಯಸಿಡ್ ಹಾಕ್ತೀನಿ ಎಂದು ಹೆದರಿಸಿದ್ದ: ಭಯಾನಕ ಸಂಗತಿ ಬಿಚ್ಚಿಟ್ಟ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ಅವರು ಇಂದು ಅತ್ಯುತ್ತಮ ನಿರ್ದೇಶಕ ಹಾಗೂ ನಟನಾಗಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇವರ ಪ್ರತಿಭೆಯನ್ನು ಹೊರತಂದಿದ್ದು ಖ್ಯಾತ ನಿರ್ದೇಶಕ ಕಾಶಿನಾಥ್ ಅವರು ಎಂಬುದನ್ನು ಖುದ್ದು ಉಪ್ಪಿ ಅವರೇ ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಉಪೇಂದ್ರ ಅವರು ಭಯಾನಕ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ವ್ಯಕ್ತಿಯೊಬ್ಬ ಆ್ಯಸಿಡ್ ಹಾಕಲು ಬಂದಿದ್ದ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
ಸದ್ಯ ಕಾಶಿನಾಥ್ ಅವರ ಪುತ್ರ ಕೂಡ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು, ಅವರ ಸಿನಿಮಾಗೆ ನಟ ಉಪೇಂದ್ರ ಶುಭ ಹಾರೈಸಿದ್ದಾರೆ. ಈ ವೇದಿಕೆಯಲ್ಲಿ ಅವರು ಆ್ಯಸಿಡ್ ಘಟನೆಯನ್ನು ನೆನೆದಿದ್ದಾರೆ. ಕಾಶಿನಾಥ್ ಅವರ ಗರಡಿಯಲ್ಲೇ ಬೆಳೆದಿದ್ದ ಉಪೇಂದ್ರ ಅವರು ಬಳಿಕ ಅವರೊಂದಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದರು. ಹೀಗೆ ಬೆಂಗಳೂರಿನ ಮನೆಯಲ್ಲಿ ಒಮ್ಮೆ ಕಾಶಿನಾಥ್ ಹಾಗೂ ಉಪೇಂದ್ರ ಅವರಿದ್ದಾಗ ವ್ಯಕ್ತಿಯೊಬ್ಬ ಆ್ಯಸಿಡ್ ಬಾಟಲ್ ಹಿಡಿದು ಬಂದು ಬೆದರಿಸಿದ್ದ ಎಂದು ಹೇಳಿದ್ದಾರೆ.

ನಾನು ಹಾಗೂ ಕಾಶಿನಾಥ್ ಅವರು ಒಟ್ಟಿಗೆ ಕುಳಿತಿದ್ದೆವು. ಸೀದಾ ಮನೆಯೊಳಗೆ ನುಗ್ಗಿದ ವ್ಯಕ್ತಿ ನಮ್ಮ ಮುಂದೆ ಬಂದು ಕುಳಿತ. ನೋಡಲು ಭಯಾನಕವಾಗಿದ್ದ ಆ ವ್ಯಕ್ತಿ. ಅಲ್ಲಿಗೆ ಬಂದು ಹಣಕ್ಕೆ ಡಿಮ್ಯಾಂಡ್ ಇಟ್ಟ. ನನಗೆ ಇಷ್ಟು ಸಾವಿರ ಹಣ ಕೊಡಲೇಬೇಕು. ಇಲ್ಲದಿದ್ದರೆ ಆ್ಯಸಿಡ್ ಹಾಕುತ್ತೀನಿ ಎಂದು ಹೆದರಿಸಿದ್ದ ಎಂದು ಉಪೇಂದ್ರ ವಿವರಿಸಿದ್ದಾರೆ. ಕಾಶಿನಾಥ್ ಸರ್ ಆ ವ್ಯಕ್ತಿಗೆ ಯಾಕೆ? ಎಂದು ಪ್ರಶ್ನಿಸಿದ್ದಕ್ಕೆ, ಆತ ಹಣ ಕೊಡಬೇಕಷ್ಟೇ ಎಂದು ಹೇಳಿದ್ದ.
ಕಾಶಿನಾಥ್ ಅವರು ಏನ್ ಇವಾಗ, ನಾನು ಹಣ ಕೊಡಲ್ಲ ಎಂದು ನೇರವಾಗಿ ಹೇಳಿದ್ದರು. ಆಗ ಒಂದು ಬಾಟಲ್ ಅನ್ನು ಮುಂದಿಟ್ಟ. ಈ ಬಾಟಲ್‌ನಲ್ಲಿರೋದು ಆ್ಯಸಿಡ್. ನಾನು ನಾಳೆ ಬೆಳಿಗ್ಗೆ ಬರ್ತೀನಿ, ನೀವು ಹಣ ಕೊಡಲಿಲ್ಲ ಅಂದ್ರೆ ಆ್ಯಸಿಡ್ ಎರಚುತ್ತೀನಿ ಎಂದು ಹೇಳಿದ್ದ. ಇದನ್ನು ಕಂಡು ನನಗೂ ಸ್ವಲ್ಪ ಭಯ ಆಗಿತ್ತು ಎಂದಿದ್ದಾರೆ ಉಪ್ಪಿ.

ನಾನಿನ್ನೂ ಆಗ ಕಾಲೇಜಿನಲ್ಲಿ ಓದುತ್ತಿದ್ದೆ. ಇರಿ ನಾನು ಒಂದಷ್ಟು ಜನ ಹುಡುಗರನ್ನು ಕರ್ಕೊಂಡು ಬರ್ತೀನಿ ಎಂದು ಕಾಶಿನಾಥ್ ಅವರಿಗೆ ಹೇಳಿದ್ದೆ. ಆದರೆ, ಆ ವ್ಯಕ್ತಿ ಹಾಗೆ ಧಮ್ಕಿ ಹಾಕಿದ್ರೂ ಕಾಶಿನಾಥ್ ಅವರು ಸ್ವಲ್ಪವೂ ಹೆದರಿಲಿಲ್ಲ. ಸುಮ್ನೆ ಇರು, ನಾಳೆ ಮನೆ ಬಾಗಿಲು ತೆಗೆದಿರುತ್ತೆ. ಅವನು ಬರಲಿ, ನೀನು ತಲೆಕೆಡಿಸಿಕೊಳ್ಳಬೇಡ ಎಂದು ಹೇಳಿದ್ದರು. ನೀನು ನನ್ ಜೊತೆ ಇರಬೇಡ ಸ್ವಲ್ಪ ದೂರದಿಂದ ಏನಾಗುತ್ತೆ ಅನ್ನೋದನ್ನು ನೋಡು ಎಂದಿದ್ದರು.
ಮರುದಿನ ಆ ವ್ಯಕ್ತಿ ಹೇಳಿದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ. ಮತ್ತೆ ಆ್ಯಸಿಡ್ ಬಾಟಲ್ ಅಲ್ಲಿಟ್ಟು, ಹಣ ಕೇಳಿದ. ಆಗಲೂ ಕಾಶಿನಾಥ್ ಅವರು ಹಣ ಕೊಡಲ್ಲ ಅಂದ್ರು. ನಿಂಗೆ ಹಣ ಯಾಕೆ ಕೊಡ್ಬೇಕು? ನೀನೇನು ಕೆಲಸ ಮಾಡಿದ್ಯಾ? ಎಂದು ಕೇಳಿದ್ರು. ಕೊನೆಗೆ ಆತ ಸುತ್ತಲೂ ನೋಡಿ, ಅಲ್ಲಿಂದ ಸೈಲೆಂಟಾಗಿ ಹೊರಟು ಹೋದ. ನಿಜವಾದ ಹೀರೋಯಿಸಂ ಅಂದ್ರೆ ಇದೇ ಅಲ್ವಾ? ಎಂದು ಉಪೇಂದ್ರ ಅವರು ಕಾಶಿನಾಥ್ ಅವರನ್ನು ನೆನೆದಿದ್ದಾರೆ.












Click it and Unblock the Notifications