Darshan Thoogudeepa: ದರ್ಶನ್‌ಗೆ ಮತ್ತೆ ಬೆನ್ನು ನೋವು: ಕೆಲಸದ ಒತ್ತಡಕ್ಕೆ ಕುಗ್ಗಿದ ದಾಸ
ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಮತ್ತೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿದೆ. ಇದೇ ಕಾರಣದಿಂದಾಗಿ ಅವರು ಕಳೆದ ದಿನ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ. ಹಾಗಾದರೆ ಇತ್ತೀಚೆಗೆ ಕವಲವಿಕೆಯಿಂದ ಓಡಾಡಿಕೊಂಡು ಇದ್ದ ದಾಸನಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು ಯಾಕೆ? ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಸರಿಸುಮಾರು ಆರೇಳು ತಿಂಗಳಿಂದ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ. ವರ್ಕೌಟ್ ಮಾಡಿಲ್ಲ. ಸರಿಯಾಗಿ ಆಹಾರ ಕೂಡ ಸೇವನೆ ಮಾಡಲು ಆಗಿಲ್ಲ. ಹೀಗಾಗಿ ದರ್ಶನ್ ಆರೋಗ್ಯ ತುಂಬಾ ಹದಗೆಟ್ಟಿತ್ತು. ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದರಿಂದ ಕೂಡಲೇ ಅವರಿಗೆ ಸರ್ಜರಿ ಮಾಡಬೇಕು ಎನ್ನುವ ಕಾರಣಕ್ಕೆ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೀಗ ಎಲ್ಲವೂ ಬದಲಾಗಿದೆ.

ದರ್ಶನ್ ಆರೋಗ್ಯವಾಗಿದ್ದು ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನಕ್ಕೆ ಪ್ರಯಾಣ ಮಾಡುತ್ತಲೇ ಇದ್ದಾರೆ. ಇದರ ನಡುವೆ ಕಳೆದ ದಿನ (ಏಪ್ರಿಲ್ 8) ಕೋರ್ಟ್ ವಿಚಾರಣೆಗೆ ದರ್ಶನ್ ಹಾಜರಾಗಬೇಕಿತ್ತು. ಆದರೆ ಅವರು ಬೆನ್ನು ನೋವಿನ ಕಾರಣ ನೀಡಿ ಕೋರ್ಟ್‌ಗೆ ಗೈರಾಗಿದ್ದಾರೆ. ಹಾಗಾದರೆ ದರ್ಶನ್ ಅವರಿಗೆ ಆಗಿದ್ದೇನು?
ಶೂಟಿಂಗ್‌ನಲ್ಲಿ ಬ್ಯೂಸಿ ಆಗಿರುವ ದರ್ಶನ್ ಅವರಿಗೆ ಒತ್ತಡ ಹೆಚ್ಚಾಗುತ್ತಿದೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್ 28 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದಾರಂತೆ. ಕಳೆದ ಮಂಗಳವಾರದಿಂದ ಗುರುವಾರದವರೆಗೂ ನಿರಂತರವಾಗಿ ಬಿಡುವಿಲ್ಲದೆ ಶೂಟಿಂಗ್ ಮಾಡಲಾಗಿದೆಯಂತೆ. ಬೇರೆ ಇಂಡಸ್ಟ್ರಿಯ ಆರ್ಟಿಸ್ಟ್ ಒಬ್ಬರ ಕಾಲ್‌ಶೀಟ್ ಮುಗಿದು ಹೋಗುತ್ತಿತ್ತು. ಹೀಗಾಗಿ ದರ್ಶನ್ ನಿರಂತವಾಗಿ ಕೆಲಸ ಮಾಡೋ ಸನ್ನಿವೇಶ ಎದುರಾಗಿತ್ತು. ಹೆಚ್ಚು ಕೆಲಸ ಮಾಡಿದ್ರಿಂದ ದರ್ಶನ್‌ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬೇರೆ ಭಾಷೆಯ ಆರ್ಟಿಸ್ಟ್ ಒಬ್ಬರ ಕಾಲ್‌ಶೀಟ್ ಮುಗಿದು ಹೋಗುತ್ತಿದ್ದರಿಂದ ದರ್ಶನ್ ಅವರು ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಿ ಬಂತು. ಇದರಿಂದಾಗಿ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ದರ್ಶನ್ ಅವರು ಶೂಟಿಂಗ್ ಹೋಗುವ ಮುನ್ನ ಇಂಜೆಕ್ಷನ್ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಅವರಿಗೆ ನೋವು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿತ್ತು. ಆದರೆ ಅದನ್ನು ತೆಗೆದುಕೊಂಡು ಹೋಗಿದ್ದರೂ ಕೂಡ ಅವರಿಗೆ ವರ್ಕ್ ಫ್ರಸೆರ್ ಜಾಸ್ತಿ ಆಗಿದ್ದರಿಂದ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಆದರೆ ದರ್ಶನ್ ಅವರು ರಾಜಸ್ಥಾನದಿಂದ ಬಂದಾಗ ಅವರ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಆ ವಿಡಿಯೋಗಳಲ್ಲಿ ದರ್ಶನ್ ಸುಸ್ತಾದಂತೆ ಕಂಡು ಬಂದಿಲ್ಲ. ತುಂಬಾ ಆರಾಮಾಗಿ ನಡೆದುಕೊಂಡು ಬಂದು ಕಾರು ಹತ್ತಿ ಹೋದ ದೃಶ್ಯಗಳು ಕಂಡು ಬಂದಿದೆ. ಈ ವಿಡಿಯೋವನ್ನು ನೋಡಿ ಜನ ಮೆಚ್ಚಿಕೊಂಡಿದ್ದರು. ದರ್ಶನ್ ನಡಿಗೆಯನ್ನು ಸಿಂಹಕ್ಕೆ ಹೋಲಿಕೆ ಮಾಡಿದ್ದರು.
ಹೀಗಿರುವಾಗ ದರ್ಶನ್ ಪರ ವಕೀಲರು ಕೋರ್ಟ್‌ಗೆ ನೀಡಿದ ಹೇಳಿಕೆಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದರ್ಶನ್ ನಡೆದುಕೊಂಡು ಬಂದ ರೀತಿಗೂ ಸಾಮ್ಯತೆನೇ ಕಂಡುಬಂದಿಲ್ಲ. ಹೀಗಾಗಿ ದರ್ಶನ್ ಕೋರ್ಟ್‌ಗೆ ಹಾಜರಾಗಲು ಬೆನ್ನು ನೋವಿನ ನೆಪ ಹೇಳಿದ್ರಾ ಅನ್ನೋ ಅನುಮಾನ ಸೃಷ್ಟಿಯಾಗಿದೆ.












Click it and Unblock the Notifications