ಸಮಂತಾನ ಸೆಕೆಂಡ್ ಹ್ಯಾಂಡ್, ಬಳಕೆಯಾದವಳು ಎಂದಿದ್ದು ಯಾರು, ಸಮಂತಾ ಏನಂದ್ರು!
ನಟಿ ಸಮಂತಾ ರುತ್ ಪ್ರಭು ಅವರು ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡು ಮೂರು ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಸಮಂತಾ ಅವರು ಆ ನೋವಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ಈಚೆಗೆ ಆಂಧ್ರಪ್ರದೇಶದ ಪ್ರಭಾವಿ ಸಚಿವೆಯೊಬ್ಬರು ನೀಡಿದ್ದ ವಿವಾದಾತ್ಮಕ ಸುದ್ದಿಯಿಂದ ತೀರ ನೊಂದುಕೊಂಡಿದ್ದರು. ಅಷ್ಟೇ ಅಲ್ಲ ತೆಲುಗು ಪ್ರಭಾವಿ ನಟ ಅಕ್ಕಿನೇನಿ ನಾಗಾರ್ಜುನ ಅವರ ಕುಟುಂಬ ಹಾಗೂ ನಾಗ ಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೇಸ್ ಸಹ ದಾಖಲಾಗಿತ್ತು. ಇದೀಗ ಸಮಾಂತ ಅವರು ಡಿವೋರ್ಸ್ ಆದ ಮೇಲೆ ಕೇಳಿ ಬಂದ ಕೆಟ್ಟ ಬೈಗುಳಗಳ ಬಗ್ಗೆ ಮಾತನಾಡಿದ್ದಾರೆ.
ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರಿಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು. ಇವರ ಜೋಡಿ ಎಂತವರ ಕಣ್ಣು ಕುಕ್ಕುವಂತೆ ಇತ್ತು. ಅದು ಆನ್ ಸ್ಕ್ರೀನ್ ಇರಲಿ.. ಇಲ್ಲ ಆಫ್ ಸ್ಕ್ರೀನ್ ಇರಲಿ. ಇವರಿಬ್ಬರ ಜೋಡಿ ಚಂದವಿತ್ತು. ಸಿನಿಮಾರಂಗದಲ್ಲಿ ಇವರಿಬ್ಬರ ಜೋಡಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು. ಅಕ್ಕಿನೇನಿಯಂತಹ ದೊಡ್ಡ ಕುಟುಂಬಕ್ಕೆ ಹೋದ ಮೇಲೆ ಸಮಂತಾ ಅವರು ಅಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಸಾಕಷ್ಟು ಬದಲಾಗಿದ್ದರು. ಮದುವೆಯ ನಂತರವೂ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ..

ಸಮಂತಾ ಹಾಗೂ ನಾಗ ಚೈತನ್ಯ ಅವರು ಡಿವೋರ್ಸ್ ಆದರು. ಈ ಡಿವೋರ್ಸ್ ಆಗಿ ಮೂರು ವರ್ಷಗಳೇ ಕಳೆದಿವೆ. ಆದರೆ, ಇಲ್ಲಿಯ ವರೆಗೂ ಇದಕ್ಕೆ ಸಂಬಂಧಿಸಿದ ಗಾಸಿಪ್ ಅಥವಾ ಒಂದಿಲ್ಲೊಂದು ಸುದ್ದಿಗಳು ಇಂದಿಗೂ ಬರುತ್ತಲ್ಲೇ ಇವೆ. ಇದೀಗ ಸಮಂತಾ ರುತ್ ಪ್ರಭು ಅವರು ಡಿವೋರ್ಸ್ ಆದ ಮೇಲೆ ಯಾವ ರೀತಿಯ ನೋವು ಅನುಭವಿಸಿದರು. ಎಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದರು. ಆ ನೋವುಗಳಿಂದ ಹೇಗೆ ಹೊರ ಬಂದರು ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಡಿವೋರ್ಸ್ ನಂತರ ಮಾಜಿ ದಂಪತಿಗಳಿಬ್ಬರೂ ಸಾಕಷ್ಟು ನೋವು ಅನುಭವಿಸಿದ್ದಾರೆ. ಆದರೆ ನಾಗ ಚೈತನ್ಯ ಅವರು ಈ ನೋವಿನಿಂದ ಸ್ವಲ್ಪ ಹೊರ ಬಂದಿದ್ದು, ಮತ್ತೊಂದು ಮದುವೆಗೆ ಸಿದ್ಧರಾಗುತ್ತಿದ್ದಾರೆ. ನಾಗ ಚೈತನ್ಯ ಅವರ ಎರಡನೇ ವಿವಾಹಕ್ಕೆ ಸಂಬಂಧಿಸಿದಂತೆ ಈಚೆಗಷ್ಟೇ ಎಂಗೇಜ್ಮೆಂಟ್ ಸಹ ಆಗಿದೆ. ಆದರೆ, ಸಮಂತಾ ಅವರು ಇನ್ನೂ ಆ ನೋವಿನಿಂದ ಸಂಪೂರ್ಣವಾಗಿ ಹೊರ ಬಂದಂತಿಲ್ಲ.

ಸೆಕೆಂಡ್ ಹ್ಯಾಂಡ್ ಎಂದರು..
ಸಮಾಜದಲ್ಲಿ ಮಹಿಳೆಯರು ಡಿವೋರ್ಸ್ ಆದ ಮೇಲೆ ಸಾಕಷ್ಟು ಟೀಕೆ, ಅವಮಾನಗಳಿಗೆ ಒಳಗಾಗಬೇಕಾಗುತ್ತದೆ. ನಾನೂ ಕೂಡ ಡಿವೋರ್ಸ್ ತೆಗೆದುಕೊಂಡ ಮೇಲೆ ಸೆಕೆಂಡ್ ಹ್ಯಾಂಡ್ ಹಾಗೂ ಬಳಕೆಯಾದವಳು ಎಂದು ಕರೆಸಿಕೊಳ್ಳಬೇಕಾಯಿತು. ಈ ಪದಗಳನ್ನು ಬಳಸಿ ಹಲವರು ಕಮೆಂಟ್ ಮಾಡುತ್ತಿದ್ದರು. ಡಿವೋರ್ಸ್ ಆದ ಮೇಲೆ ಮಹಿಳೆಯರು ಮತ್ತು ಅವರ ಕುಟುಂಬದವರು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗುತ್ತೆ ಅಂತ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದ ಮೊದಲು ಇದು ತುಂಬಾ ಕಷ್ಟವಾಗಿತ್ತು. ಹಾಗಂದ ಮಾತ್ರಕ್ಕೆ ನಾನು ಅಳುತ್ತಾ ಇರುತ್ತೇನೆ ಎಂದುಕೊಳ್ಳಬೇಕಿಲ್ಲ. ನಾನು ಡಿವೋರ್ಸ್ ಪಡೆದಿದ್ದೇನೆ ಎನ್ನುವುದು ವಾಸ್ತವ. ಅದನ್ನು ನಾನು ಮುಚ್ಚಿಡುವ ಅವಶ್ಯಕತೆಯೂ ಇಲ್ಲ. ನನ್ನ ಜೀವನ ಇಲ್ಲಿಗೆ ಕೊನೆಯಾಗಿಲ್ಲ. ಒಂದು ಅಂತ್ಯವಾದರೆ, ಮತ್ತೊಂದರ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಸಮಂತಾ ಅವರು ಡಿವೋರ್ಸ್‌ನ ಬಗ್ಗೆ ಅಷ್ಟಾಗಿ ಎಲ್ಲೂ ಮುಕ್ತವಾಗಿ ಹೇಳಿಕೊಂಡಿಲ್ಲ.
ಡಿವೋರ್ಸ್ ವಿಚಾರದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಮೊದಲಿನಿಂದಲೂ ಬದ್ಧತೆ ಕಾಪಾಡಿಕೊಂಡಿದ್ದಾರೆ. ಇಬ್ಬರು ಡಿವೋರ್ಸ್ ಬಗ್ಗೆ ಒಂದೇ ಸಮಯಕ್ಕೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಭಿನ್ನಾ ಅಭಿರುಚಿ ಹಾಗೂ ಜೀವನ ಶೈಲಿಗಾಗಿ ಒಪ್ಪಿತರಾಗಿ ಸ್ನೇಹಪೂರ್ವಕವಾಗಿಯೇ ಇಬ್ಬರು ಡಿವೋರ್ಸ್ ತೆಗೆದುಕೊಂಡಿದ್ದರು.












Click it and Unblock the Notifications