Kantara Chapter 1: ಭಾರತ ಮಾತ್ರವಲ್ಲ, ಈ ದೇಶದಲ್ಲೂ 'ಕಾಂತಾರ ಚಾಪ್ಟರ್-1' ಸಿನಿಮಾ ರಿಲೀಸ್
ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 (Kantara: Chapter 1) ಸಿನಿಮಾ ಅಕ್ಟೋಬರ್ 2ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇದು ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ನಿರ್ಮಾಣ ಮಾಡಿರುವ ಕನ್ನಡದ ಹೊಂಬಾಳೆ ಫಿಲ್ಮ್ಸ್ ಹೊಸ ಅಪ್‌ಡೇಟ್ ನೀಡಿದೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಭಾರತ ಮಾತ್ರವಲ್ಲದೆ ಈ ಮತ್ತೊಂದು ಪ್ರಮುಖ ದೇಶದಲ್ಲೂ ಕಾಂತಾರ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಈ ಬಗ್ಗೆ ಹೊಂಬಾಳೆ ಅಪ್‌ಡೇಟ್ ನೀಡಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್‌ಗೆ ಇನ್ನು 27 ದಿನಗಳಷ್ಟೇ ಬಾಕಿ ಇದ್ದು, ಅಕ್ಟೋಬರ್ 2ರಂದು ಪ್ರಪಂಚದಾದ್ಯಂತ ಭೂತಕಾಲದ ಪವಿತ್ರತೆ ಪ್ರತಿಧ್ವನಿಸಲಿದೆ. ಶೀಘ್ರದಲ್ಲೇ ನಿಮಗಾಗಿ ಹೊಸ ಅಪ್‌ಡೇಟ್ ಬರಲಿವೆ ಎಂದು ಹೇಳಿದೆ. ಕಾಂತಾರದ ದೈವಿಕ ಭೂಮಿಗೆ ಹೆಜ್ಜೆ ಹಾಕಿ, ಒಂದು ದಂತಕಥೆಯ ಉದಯವನ್ನು ವೀಕ್ಷಿಸಿ. ಕಾಂತಾರ ಮತ್ತೆ ದೊಡ್ಡ ಪರದೆಯ ಮೇಲೆ ಘರ್ಜಿಸಲು ಸಜ್ಜಾಗಿದೆ. ಈ ಭಾರಿ ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತದ ರಾಜ್ಯಗಳಲ್ಲಿಯೂ ಕಾಂತಾರ ಪ್ರೀಕ್ವೆಲ್ ರಿಲೀಸ್ ಆಗಲಿದೆ.

ಈಗಾಗಲೇ ನೆರೆಯ ತೆಲುಗು ರಾಜ್ಯಗಳಲ್ಲಿಯೂ ಕಾಂತಾರ ಚಾಪ್ಟರ್ 1 ಸಿನಿಮಾಗೆ ಭಾರಿ ಬೇಡಿಕೆ ಇದ್ದು, ಭಾರಿ ಮೊತ್ತಕ್ಕೆ ಸಿನಿಮಾ ವಿತರಣೆಯ ಹಕ್ಕು ಮಾರಾಟವಾಗಿದೆ. ಈಗ ನೇಪಾಳದಲ್ಲಿಯೂ ಏಕಕಾಲಕ್ಕೆ ಸಿನಿಮಾ ಕಾಂತಾರ ರಿಲೀಸ್ ಆಗಲಿದೆ. ಕಾಂತಾರ ಕನ್ನಡದ ಪೌರಾಣಿಕ ಥ್ರಿಲ್ಲರ್ ಚಿತ್ರವಾಗಿದ್ದು, ರಿಷಬ್ ಶೆಟ್ಟಿ ಬರೆದು ನಟಿಸಿ ನಿರ್ದೇಶಿಸಿದ್ದಾರೆ. ಇದನ್ನು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.
ನೇಪಾಳದಲ್ಲೂ ಕಾಂತಾರ ರಿಲೀಸ್
ಭಾರತದ ನೆರೆಯ ದೇಶ ನೇಪಾಳದಲ್ಲೂ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಲಿದೆ. ನೇಪಾಳ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಎಎ ಫಿಲ್ಮ್ಸ್ ಇಂಡಿಯಾ ಜೊತೆಗೂಡಿ ಹೊಂಬಾಳೆ ಈ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಿಷಬ್ ಶೆಟ್ಟಿ ಅವರ ಮೊದಲ ಕಾಂತಾರ ಸಿನಿಮಾ ಕೂಡ ಕನ್ನಡದಲ್ಲಿ ಹಿಟ್ ಕಂಡು ನಂತರ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಭಾಷೆಗಳಿಂದಲೂ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಪ್ರೀಕ್ವೆಲ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲಾಗುತ್ತಿದೆ.

ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಕನಕವತಿ ಪಾತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಮಲಯಾಳಂ ನಟ ಜಯರಾಂ, ಕುಲಶೇಖರ ಪಾತ್ರದಲ್ಲಿ ಬಾಲಿವುಡ್ ನಟ ಗುಲ್ಷನ್ ದೇವಯ್ಯ ಸೇರಿ ಪ್ರಮುಖರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೈಚಳಕವಿರುವ ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬಂಗಾಳಿ ಮತ್ತಿತರ ಭಾಷೆಗಳಲ್ಲಿ ತೆರೆ ಕಾಣಲಿದೆ.












Click it and Unblock the Notifications