ರೇಣುಕಾಸ್ವಾಮಿ ಕುಟುಂಬವನ್ನು ಸಂಪರ್ಕಿಸಿದ ದರ್ಶನ್? ರಾಜೀ ಸಂಧಾನದ ಬಗ್ಗೆ ಕಾಶಿನಾಥಯ್ಯ ಸ್ಫೋಟಕ ಹೇಳಿಕೆ
ಚಿತ್ರದುರ್ಗ, ಜೂನ್ 08: ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆ ಇಂದು ಕುಟುಂಬಸ್ಥರು ರೇಣುಕಾ ಸ್ವಾಮಿ ಕುಟುಂಬದವರು ಇಂದು ರೇಣುಕಾ ಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮತ್ತೊಮ್ಮೆ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳು ಕೊಂದಿದ್ದಾರೆ ಎಂದು ಹೇಳಲಾಗುತ್ತಿರುವ ಆರೋಪಿಗಳು ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ನಟಿ ವಿತ್ರಾ ತಮ್ಮ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ನಟ ದರ್ಶನ್ ಇತ್ತೀಚೆಗೆ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಸಹ ಆಚರಿಸಿದ್ದು, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಆದರೆ, ರೇಣುಕಾ ಸ್ವಾಮಿ ಕುಟುಂಬದವರು ಆ ನೋವಿನಿಂದ ಇನ್ನೂ ಹೊರಬಂದಿಲ್ಲ.

ಇಂದು(ಜೂನ್ 08, ಭಾನುವಾರ) ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ನನ್ನ ಮಗ ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷವಾಗಿದೆ. ಈ ವೇಳೆ ದರ್ಶನ್ ಜೈಲಿನಿಂದ ಬಂದ ಮೇಳೆ ನಿಮ್ಮ ಕುಟುಂಬವನ್ನ ಭೇಟಿಯಾಗಿದ್ದಾರಾ ಎಂಬ ಬಗ್ಗೆಯೂ ಕಾಶಿನಾಥಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಇಲ್ಲ ನಮ್ಮನ್ನ ಯಾರೂ ಸಂಪರ್ಕ ಮಾಡಿಲ್ಲ, ನಾವೂ ಯಾರನ್ನ ಸಂಪರ್ಕ ಮಾಡೋಕೆ ಹೋಗಿಲ್ಲ ಎಂದು ಹೇಳಿದ್ದಾರೆ.
ಇನ್ನು ರಾಜಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಮಾಧ್ಯಮಗಳ ಪ್ರಶ್ನೆಗ ಉತ್ತರಿಸಿದ್ದು, ಇಲ್ಲ ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನ ಇಲ್ಲಿವರೆಗೆ ಯಾರೂ ಸಂಪರ್ಕ ಮಾಡಿಲ್ಲ. ಮಾಡ್ತಾರೆ ಅನ್ನೋ ನಂಬಿಕೆ ಕೂಡಾ ಇಲ್ಲ. ಬರೋದಿದ್ರೆ ಇಷ್ಟೊತ್ತಿಗೆ ಬರ್ಬೇಕಿತ್ತು ಎಂದು ಹೇಳಿದ್ದಾರೆ. ಭೇಟಿ, ಸಂಧಾನದ ಬಗ್ಗೆ ನಮ್ಮ ಹಿರಿಯರು ಇದ್ದಾರೆ, ಅವರು ತೀರ್ಮಾನ ಮಾಡ್ತಾರೆ. ಅವರ ಮಾತಿಗೆ ಬದ್ಧರಾಗಿರ್ತೇವೆ. ಆದರೆ, ಆರೋಪಿಗಳಿಗೆ ಶಿಕ್ಷೆ ಆಗಬೇಕು. ಕೊಲೆ ಪ್ರಕರಣ ವಿಶೇಷ ಇರೋದ್ರಿಂದ ಕಾನೂನು ತಕ್ಕ ಶಿಕ್ಷೆ ನೀಡಬೇಕು. ನ್ಯಾಯಾಲಯ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.












Click it and Unblock the Notifications