Rashmika Mandanna: ನ್ಯೂಯಾರ್ಕ್‌ಗೆ ಹಾರಲಿದ್ದಾರೆ ರಶ್ಮಿಕಾ-ವಿಜಯ್ ಜೋಡಿ! ಫ್ಯಾನ್ಸ್ ಫುಲ್ ಖುಷ್
Actress Rashmika Mandanna: ಹೊಸ ಸಿನಿಮಾದ 'ಮೈಸಾ' ಶಿರ್ಷಿಕೆ ಬಿಡುಗಡೆ ಬಳಿಕ ಸಖತ್ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಬ್ಯೂಸಿಯಾಗಿದ್ದಾರೆ. ಇತ್ತ ವಿಜಯ್ ದೇವರಕೊಂಡ ಅವರು ಸಹ ಅವಾರ್ಡ್ ಫಂಕ್ಷನ್, ಶೂಟಿಂಗ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಇಬ್ಬರು ಮದುವೆಯಾಗುತ್ತಾರೆ. ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಗಳಿವೆ. ಆದರೆ ಇಬ್ಬರು ದೃಢೀಕರಿಸಿಲ್ಲ. ಇದೀಗ ಈ ಜೋಡಿ ನ್ಯೂಯಾರ್ಕ್‌ಗೆ ಜೊತೆಯಾಗಿದ್ದಾರೆ ತೆರಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇದನ್ನು ಕೇಳುತ್ತಿದ್ದಂತೆ ಅವರ ಫ್ಯಾನ್ಸ್ ಸಿಹಿ ಸುದ್ದಿ ಸಿಗುತ್ತೆ ಎಂದು ಫುಲ್ ಖುಷ್ ಆಗಿದ್ದಾರೆ
ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ ರಶ್ಮಿಕಾ ಬಾಲಿವುಡ್, ಟಾಲಿವುಡ್‌ನಲ್ಲಿ ಬ್ಯೂಸಿ ಇದ್ದಾರೆ. ಇತ್ತ ನಟ ವಿಜಯ್ ದೇವರಕೊಂಡ ಅವರು ಒಂದು ದೊಡ್ಡ ಸಕ್ಸಸ್, ಹಿಟ್ ಎದುರು ನೋಡುತ್ತಿದ್ದಾರೆ. ಇಬ್ಬರ ಮಧ್ಯ ಲವ್ ಇದೆ, ಹೋಟೆಲ್, ಟ್ರಾವೆಲ್ ಎಂದು ಸುತ್ತಾಡಿದ್ದ ಫೋಟೋ ಆಗಾಗ ವೈರಲ್ ಆಗುತ್ತವೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಿಂದ ರಶ್ಮಿಕಾ ಇಬ್ಬರು ಜೊತೆಯಾಗಿ ಓಡಾಡಿದ್ದರು.

ಇದೀಗ ಮತ್ತದೇ ಜೋಡಿ ನ್ಯೂಯಾರ್ಕ್‌ಗೆ ಜೊತೆಯಲ್ಲೇ ತೆರಳಲಿದ್ದಾರೆ. ಈ ವಿಚಾರ ನೆಟ್ಟಿಗರ ಕಣ್ಣು ಇವರಿಬ್ಬರ ಮೇಲಿಡುವಂತೆ ಮಾಡಿದೆ. ರಶ್ಮಿಕಾ, ವಿಜಯ್ ಇಬ್ಬರು ಡೇಟಿಂಗ್‌ಗೆ ನ್ಯೂಯಾರ್ಕ್‌ಗೆ ಹೋಗುತ್ತಿಲ್ಲ. ಬದಲಾಗಿ ಕಾರ್ಯಕ್ರಮದ ಅತಿಥಿಗಳಾಗಿ ಇಬ್ಬರಿಗೂ ಆಹ್ವಾನ ಬಂದಿದೆ. ಹೀಗಾಗಿ ಅವರು ಮೂರು ದಿನ ವಿದೇಶದಲ್ಲಿರಲಿದ್ದಾರೆ.
ಆಗಸ್ಟ್ 15ರಂದು ನಡೆಯಲಿರುವ ಇಂಡಿಯಾ ಡೇ ನಿಮಿತ್ತ ವಿವಿಧ ಸಮಾರಂಭಗಳಲ್ಲಿ ನಟ ವಿಜಯ್ ಮತ್ತು ನಟಿ ರಶ್ಮಿಕಾ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 17ರಂದು ಮ್ಯಾಡಿಸನ್ ಅವೆನ್ಯೂ ಮಾರ್ಗದಲ್ಲಿ ಹಮ್ಮಿಕೊಂಡಿರುವ ಪರೇಡ್ ನಲ್ಲಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಈ ಇಬ್ಬರು ಸೆಲೆಬ್ರೆಟಿಗಳು ಭಾಗಿಯಾಗಲಿದ್ದಾರೆ.
ಇಂಡಿಯಾ ಡೇ ಪರೇಡ್‌ಗೆ ಚಾಲನೆ
ಇಂಡಿಯಾ ಡೇ ಪರೇಡ್‌ನ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಭಾರತೀಯ ಸಂಘಗಳ ಒಕ್ಕೂಟ ಕಳೆದ ಶುಕ್ರವಾರ ಆಹ್ವಾನಿಸಿದೆ. ಅಂದು ನ್ಯೂಯಾರ್ಕ್‌ನ 43ನೇ ಇಂಡಿಯಾ ಡೇ ಪರೇಡ್‌ಗೆ ಚಾಲನೆ ನೀಡಲಾಯಿತು. ಒಕ್ಕೂಟದ ಸದಸ್ಯರು ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ಹಾಗೂ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಶ್ಮಿಕಾ, ವಿಜಯ್ ಪ್ರತಿಕ್ರಿಯೆ
ಆಗಸ್ಟ್ ನಲ್ಲಿ ನಡೆಯಲಿರುವ ನ್ಯೂಯಾರ್ಕ್ ದೊಡ್ಡ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳುವುದು ನನಗೆ ಹರ್ಷವೆನಿಸುತ್ತದೆ. ಉತ್ಸಾಹವು ಹೆಚ್ಚಾಗಿದೆ. ಮಾತೃಭೂಮಿಗೆ ಪಾಲ್ಗೊಳ್ಳಲು ನಾವೆಲ್ಲರು ಒಟ್ಟಾಗೋಣ ಎಂದು ನಟಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ಇತ್ತ ವಿಜಯ್ ದೇವರಕೊಂಡ ಸಹ ಇಂಡಿಯಾ ಡೇ ಪರೇಡ್‌ನಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಿರುವುದಕ್ಕೆ ಖುಷಿ ಇದೆ. ನಿಮ್ಮೆಲ್ಲರೊಂದಿಗೆ ಆಚರಣೆ ಮಾಡಲು, ಮಾತೃ ಭೂಮಿಗೆ ಗೌರವ ಸಲ್ಲಿಸಲು ಜೊತೆಯಾಗೋಣ ಎಂದು ಹೇಳಿದ್ದಾರೆ.
ಈ ವಿಚಾರ ಕೇಳುತ್ತಿದ್ದಂತೆ ರಶ್ಮಿಕಾ, ವಿಜಯ್ ಫ್ಯಾನ್ಸ್ ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಈ ಸೆಲೆಬ್ರೆಟಿಗಳು ಒಟ್ಟಿಗೆ ಕಾಣಸಿಕೊಂಡರೆ ಸಾಕು ಹಬ್ಬದಂತೆ ಸಂಭ್ರಮಿಸುವ ಫ್ಯಾನ್ಸ್ ಆಗಸ್ಟ್ ತಿಂಗಳಲ್ಲಿ ಈ ಜೋಡಿಯನ್ನು ವಿದೇಶಗಳಲ್ಲಿ ಒಟ್ಟಿಗೆ ನೋಡಲು ಕಾತರರಾಗಿದ್ದಾರೆ.












Click it and Unblock the Notifications