ರಶ್ಮಿಕಾ ಮಂದಣ್ಣ-ವಿಜಯ್ ನಿಶ್ವಿತಾರ್ಥ: ಕೈಯಲ್ಲಿ ಉಂಗುರದ ಫೋಟೋ ವೈರಲ್
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಈ ಸುದ್ದಿ ಸುಳ್ಳಾಗಿದ್ದರೆ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಮೌನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಎರಡು ದಿನಗಳ ಬಳಿಕ ವಿಜಯ್ ದೇವರಕೊಂಡ ಅವರ ಫೋಟೋಗಳು ವೈರಲ್ ಆಗಿದ್ದು, ವಿಜಯ್ ಕೈಯಲ್ಲಿರೋ ಉಂಗುರ ಎಲ್ಲರ ಪ್ರಶ್ನೆಗೆ ಉತ್ತರ ನೀಡುವಂತಿದೆ. ನಿಶ್ವಿತಾರ್ಥದ ವದಂತಿ ನಡುವೆಯೇ ವಿಜಯ್ ದೇವರಕೊಂಡ ಕೈಯಲ್ಲಿ ಉಂಗುರ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ನಿಶ್ಚಿತಾರ್ಥ ಕಾರ್ಯಕ್ರಮ ಬಹಳ ಖಾಸಗಿ ರೀತಿಯಲ್ಲಿ ವಿಜಯ್ ಅವರ ಹೈದರಾಬಾದ್ ಮನೆಯಲ್ಲಿ ನೆರವೇರಿದೆ ಎಂಬ ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿದೆ. ಇವರ ಮದುವೆ 2026ರ ಫೆಬ್ರವರಿಯಲ್ಲಿ ನಡೆಯಲಿವೆ ಎಂದು ವರದಿಯಾಗಿದೆ. ರಶ್ಮಿಕಾ ಮತ್ತು ವಿಜಯ್ ಇಬ್ಬರು ಮೊದಲಿಗೆ 2018ರಲ್ಲಿ 'ಗೀತ ಗೋವಿಂದಂ' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಅವರ ನಿಶ್ಚಿತಾರ್ಥದ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾಗಿದ್ದರೂ, ವಿಜಯ್ ಅವರ ಆಪ್ತರು ಇದು ಸತ್ಯ ಎಂದು ಖಚಿತಪಡಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರು ಎನ್ನುವುದೇ ಎಲ್ಲರ ತಲೆಯಲ್ಲಿ ಕೂತಿರುವ ಪ್ರಶ್ನೆಯಾಗಿದೆ.

ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ನಿವಾಸದಲ್ಲಿ ಎಂಗೇಜ್‌ಮೆಂಟ್ ಸರಳವಾಗಿ, ಗುಟ್ಟಾಗಿ ನೆರವೇರಿದ್ದು, ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರವೇ ಭಾಗಿಯಾಗಿದ್ದಾರೆ. ಸಿನಿಮಾರಂಗದವರಿಗೂ ಯಾರಿಗೂ ಆಹ್ವಾನವಿಲ್ಲದೆ ಈ ಕಾರ್ಯಕ್ರಮ ನೆರವೇರಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿಯಲ್ಲೇ ಇವರ ಮದುವೆ ಕೂಡ ನಿಶ್ಚಯವಾಗಿದೆ. ವಿಜಯ್ ದೇವರಕೊಂಡ ಅವರ ಕೆಲ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಲ್ಲಿ ಅವರ ಕೈಯಲ್ಲಿ ಉಂಗುರ ಹೈಲೈಟ್ ಆಗಿದೆ.
ಗುಟ್ಟಾಗಿ ಎಂಗೇಜ್ ಆಗಿದ್ದೇಕೆ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದ ಸುದ್ದಿಯು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅವರಿಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೇ ಯಾಕೆ ರಹಸ್ಯವಾಗಿ ನಡೆಸಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಒಂದೇ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ, ವಿಜಯ್ ಅವರ ಮನೆಯಲ್ಲಿ ರಶ್ಮಿಕಾ ಫೋಟೋ ತೆಗೆದುಕೊಂಡಿದ್ದರು. ಒಟ್ಟಿಗೆ ಹುಟ್ಟುಹಬ್ಬ ಆಚರಿಸಿದ್ದರು. ಒಂದೇ ಸ್ಥಳಕ್ಕೆ ಪ್ರವಾಸ ಹೋಗುವುದೆಲ್ಲ ನಡೆದಿತ್ತು. ಹೀಗಿರುವಾಗ ರಹಸ್ಯವಾಗಿಟ್ಟಿದ್ದೇಕೆ ಎಂಬ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ.
ನಿಜವಾಗಿ ಪ್ರೀತಿ ವಿಷಯವನ್ನು ರಹಸ್ಯವಾಗಿ ಇಡುವುದು ಸಹಜ. ಆದರೆ ನಿಶ್ಚಿತಾರ್ಥದ ಬಗ್ಗೆ ಕೂಡಾ ರಹಸ್ಯವನ್ನು ಉಳಿಸಿಕೊಳ್ಳುವುದು ಏಕೆ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ರಶ್ಮಿಕಾ ತಮ್ಮ ಹೊಸ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಆದರೆ ನಿಶ್ಚಿತಾರ್ಥದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ಇವರಿಬ್ಬರ ಸಂಬಂಧ, ಮತ್ತು ನಿಶ್ಚಿತಾರ್ಥ ಕುರಿತಂತೆ ಸ್ಪಷ್ಟನೆ ನೀಡಿ ಎಂದು ಕೇಳುತ್ತಿದ್ದಾರೆ.












Click it and Unblock the Notifications