Rashmika Mandanna: 'ರಕ್ಷಾ ಬಂಧನ' ದಿನವೇ ತಂಗಿಯ ಕುರಿತು ನಟಿ ರಶ್ಮಿಕಾ ಭಾವುಕ, ಪೋಸ್ಟ್ ವೈರಲ್
ಬೆಂಗಳೂರು, ಆಗಸ್ಟ್ 20: ದೇಶದಾದ್ಯಂತ ಕಳೆದ ದಿನ ಸಹೋದರ, ಸಹೋದರಿಯರ ಬಾಂಧವ್ಯದ ಹಬ್ಬ 'ರಕ್ಷಾ ಬಂಧನ'ವನ್ನು ಅದ್ಧೂರಿಯಾಗಿ ಆಚರಣೆಸಲಾಯಿತು. ಸಾಮಾನ್ಯರಂತೆ ಸೆಲೆಬ್ರೆಟಿಗಳು ಸಹ ಹಬ್ಬ ಆಚರಿಸಿ ರಾಕಿ ಕಟ್ಟಿಸಿಕೊಂಡು ಫೋಟೋಗಳುನ್ನು ಶೇರ್ ಮಾಡಿಕೊಂಡಿದ್ದರು. ಇದೇ ವೇಳೆ ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ತಮ್ಮ ತಂಗಿ ಜೊತೆಗಿನ ಫೋಟೋ ಜೊತೆಗೆ ಬರೆದುಕೊಂಡ ಕ್ಯಾಪ್ಷನ್ ಗಮನ ಸೆಳೆದಿದೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ತಂಗಿಗಾಗಿ ರಕ್ಷಾ ಬಂಧನ ದಿನ ರಕ್ಷಣೆ, ಜೀವನ, ಸವಾಲು ಸೇರಿದಂತೆ ಭವಿಷ್ಯದ ಕುರಿತು ಒಂದಷ್ಟು ಸಾಲುಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 'ಆತ್ಮೀಯ ಲಿಲ್ ಸಹೋದರಿ, ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ನೀವು ಸುಂದರ ಮಹಿಳೆಯಾಗಿ ಬೆಳೆಯುವೆ ಎಂದು ನನಗೆ ವಿಶ್ವಾಸವಿದೆ. ಸಮಾಜದಲ್ಲಿ ಎಲ್ಲರೂ ಗೌರವಿಸುವ ಮಹಿಳೆಯಾಗಿ ನೀನು ಬೆಳೆಯುತ್ತೀಯ.

ಅದಕ್ಕಾಗಿ ನೀವು ಜೀವನದಲ್ಲಿ ಹೋರಾಟ ಮಾಡಬೇಕಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ನಿನ್ನೊಂದಿಗೆ ನಾನಿದ್ದೇನೆ ಎಂಬ ಭರವಸೆ ನೀಡುತ್ತೇನೆ. ನಾನು ಸದಾ ನಿನ್ನನ್ನು ರಕ್ಷಿಸುತ್ತೇನೆ. ಇಡೀ ಜಗತ್ತಿನಲ್ಲಿ ನಿನ್ನ ಜೀವನ ಇನ್ನಷ್ಟು ಸುಲಭವಾಗಲಿದೆ ಎಂಬ ವಿಶ್ವಾಸ ಇದೆ. ಸಮಾಜದಲ್ಲಿ ನೀನು ಸುರಕ್ಷಿತವಾಗಿ, ಖುಷಿ ಖುಷಿಯಾಗಿರುವೆ. ನಿಮ್ಮಂಥಹ ಎಲ್ಲ ಚಿಕ್ಕ ಹೆಣ್ಣುಮಕ್ಕಳಿಗೆ ಈ ಪ್ರಪಂಚ ಸುರಕ್ಷಿತ ಸ್ಥಳವಾಗಿದೆ. ನಾನು ತುಂಬಾ ಪ್ರೀತಿಸುವ ನನ್ನ ಗೊಂಬೆ ನೀನು' ಎಂದು ಅವರು ಬರೆದುಕೊಂಡಿದ್ದಾರೆ.
ಈ ಮೂಲಕ ಸಹೋದರತೆ, ಬಾಂಧವ್ಯವನ್ನು ಹಾಗೂ ಈ ಸಮಾಜದಲ್ಲಿ ತನ್ನ ಸಹೋದರಿ ಜೀವನ ಸುಂದರವಾಗಿಸಲು ಬೆಂಬಲವಾಗಿ ನಿಲ್ಲುವುದಾಗಿ ರಶ್ಮಿಕಾ ತಿಳಿಸಿದ್ದಾರೆ. ನಟಿ ರಶ್ಮಿಕಾ ಮಾತ್ರವಲ್ಲದೇ ಅನೇಕ ಸೆಲೆಬ್ರೆಟಿಗಳು ಸಹ ತಮ್ಮ ವೈಯಕ್ತಿಕ ಜೀವನ ಕೆಲ ಅಂಶಗಳನ್ನು ಇಂತಹ ಸನ್ನಿವೇಶದಲ್ಲಿ ತೆರೆದಿಡುತ್ತಾರೆ. ಇದು ಅಭಿಮಾನಿಗಳಿಗೆ ಪ್ರೇರಣೆ ನೀಡುತ್ತವೆ.

ಬಾಲಿವುಡ್ ಸೆಲೆಬ್ರೆಟಿಗಳ ರಕ್ಷಾ ಬಂಧನ
ರಶ್ಮಿಕಾ ಮಾತ್ರವಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರ ಅಕ್ಷತ್ ರನೌತ್ ಜೊತೆಗಿನ ರಕ್ಷಾ ಬಂಧನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ಪರಸ್ಪರ ಸಿಹಿ ತಿನ್ನಿಸಿದ್ದಾರೆ. ಅರ್ಥಪೂರ್ಣವಾಗಿ ಹಬ್ಬ ಆಚರಿಸಿದ್ದಾರೆ.
ಬಾಲಿವುಡ್ ನಟ ಸಂಜಯ್ ದತ್ ತಮ್ಮ ಸಹೋದರಿಯರೊಂದಿಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಹೋದರಿಯರಿಬ್ಬರು ನನ್ನೊಂದಿಗೆ ಇರುವುದು ಅತೀವ ಸಂತೋಷ ನೀಡುತ್ತದೆ. ನಿಮ್ಮ ಪ್ರೋತ್ಸಾಹ, ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅವರ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಇವರೊಂದಿಗೆ ಖುಷಿ ಕಪೂರ್ ಹಾಗೂ ಶನಯಾ ಕಪೂರ್ ಸಹೋದರ ಅರ್ಜುನ್ ಕಪೂರ್ ಜೊತೆಗಿನ ರಕ್ಷಾ ಬಂಧನದ ಫೋಟೋಗಳು ವೈರಲ್ ಆಗಿವೆ.
ಸಹೋದರಿಗೆ ನಟಿ ರಶ್ಮಿಕಾ ಅಭಯ
ನಟಿ ರಶ್ಮಿಕಾ ಮಂದಣ್ಣ ಪೋಸ್ಟ್ ವಿಶೇಷವೇನೆಂದರೆ ನಟಿ ತಮ್ಮ ಸಹೋದರಿ ಜೊತೆಗೆ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ನಿನ್ನೊಂದಿಗೆ, ಬೆಂಬಲವಾಗಿ ನಾನು ನಿಲ್ಲುವೆ ಎಂದು ಪುಟ್ಟ ತಂಗಿಗೆ ರಶ್ಮಿಕಾ ಅಭಯ ನೀಡಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಅವರ ನಟನೆಯ 'ಛಾಯಾ' ಸಿನಿಮಾ ಟೀಸರ್ ಮೊನ್ನೆಯಷ್ಟೆ ಬಿಡುಗಡೆ ಆಗಿದೆ. ಈ ಸಿನಿಮಾ ಹಾಗೂ ಪುಷ್ಪ 2 ಸಿನಿಮಾಗಳು ಒಂದೇ ದಿನ ಡಿಸೆಂಬರ್ 06ರಂದು ಬಿಡುಗಡೆ ಆಗಲಿವೆ. ಇವೆರಡರಲ್ಲೂ ನಟಿ ರಶ್ಮಿಕಾ ನಾಯಕಿಯಾಗಿದ್ದು, ಅವರ ಫ್ಯಾನ್ಸ್‌ಗೆ ಡಿಸೆಂಬರ್ ತಿಂಗಳನ್ನು ಹಬ್ಬವಾಗಿ ಆಚರಿಸಲಿದ್ದಾರೆ.












Click it and Unblock the Notifications