"ನಾನು ಈಗಾಗಲೇ ತಾಯಿಯಾಗಿ..." ಶಾಕಿಂಗ್ ವಿಚಾರ ತಿಳಿಸಿದ ರಶ್ಮಿಕಾ ಮಂದಣ್ಣ Rashmika Mandanna
ಕನ್ನಡದಿಂದ ಸಿನಿಮಾ ರಂಗ ಪ್ರವೇಶಿಸಿದ ಖ್ಯಾತ ನಟಿ ರಶ್ಮಿಕಾ ಮಂದಣ್ಣ, ನಟ ವಿಜಯ್ ದೇವರಕೊಂಡ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ಹಲವು ವರ್ಷಗಳಿಂದ ಜೊತೆಯಾಗಿದ್ದರೂ, ಈ ವಿಚಾರವನ್ನು ಖಚಿತಪಡಿಸಿರಲಿಲ್ಲ. ಆದರೆ, ಈ ವದಂತಿ ಬೆನ್ನಲ್ಲೆ ಇಬ್ಬರ ಕೈನಲ್ಲೂ ಉಂಗುರುಗಳು ಪ್ರತ್ಯಕ್ಷವಾಗಿದ್ದವು. ಹೀಗಾಗಿ ಎಂಗೇಜ್‌ಮೆಂಟ್ ಆಗಿರುವುದು ಬಹುತೇಕ ಖಚಿತವಾಗಿತ್ತು. ಇದೀಗ ರಶ್ಮಿಕಾ ತಮ್ಮ ತಾಯ್ತನದ ಬಗ್ಗೆ ಅಚ್ಚರಿಯ ವಿಚಾರಗಳನ್ನು ತಿಳಿಸಿದ್ದಾರೆ.
ಎಲ್ಲರೂ ರಷ್ಮಿಕಾ ಎಂಗೇಜ್‌ಮೆಂಟ್ ಬಗ್ಗೆ ತಲೆಕೆಡಿಸಿಕೊಂಡಿದ್ದರೆ, ಅವರು ಆಗಲೇ ತಾಯ್ತನದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು 'ಕುಟುಂಬ, ವಿಶ್ರಾಂತಿ ಹಾಗೂ ಫಿಟ್ನೆಸ್ ಮೇಲೆ ಗಮನ ಕೊಡುವುದು ಈಗ ಹೆಚ್ಚು ಆದ್ಯತೆ ಎಂದಿದ್ದಾರೆ. ನಾನು ಕುಟುಂಬಕ್ಕೆ ನೀಡುವ ಸಮಯದ ಮೇಲೆ ಗಮನಹರಿಸಬೇಕು. ಸಾಕಷ್ಟು ನಿದ್ರೆ ಮಾಡಬೇಕು, ವ್ಯಾಯಾಮ ಮಾಡಲು ಸಮಯ ಮಾಡಿಕೊಳ್ಳಬೇಕು. ಇದರಿಂದ ನಾನು ಆರೋಗ್ಯವಾಗಿರಲು ಸಾಧ್ಯವಾಗದಿದ್ದಕ್ಕೆ ಮುಂದೆ ಬೇಸರ ಪಡಬೇಕಿಲ್ಲ' ಎಂದಿದ್ದಾರೆ.

ಇದೇ ವೇಳೆ ರಶ್ಮಿಕಾ ತಮ್ಮ ಭವಿಷ್ಯದ ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. 'ನಾನು ಇನ್ನೂ ತಾಯಿಯಾಗಿಲ್ಲ. ಆದರೆ ನನಗೆ ಈಗಾಗಲೇ ಮಕ್ಕಳಾಗಿದೆ ಎಂಬ ತಾಯ್ತನದ ಭಾವನೆ ಇದೆ. ನನಗೆ ಮಕ್ಕಳಾಗುತ್ತವೆ ಎಂದು ನನಗೆ ತಿಳಿದಿದೆ. ಅದು ಆಗುವುದನ್ನು ನಾನು ಇಷ್ಟಪಡುತ್ತೇನೆ. ಆದರೆ ಇನ್ನೂ ಹುಟ್ಟದ ಈ ಪುಟ್ಟ ಮನುಷ್ಯರಿಗಾಗಿ ನನಗೆ ಈಗಾಗಲೇ ಏನೋ ಒಂದು ಬಲವಾದ ಭಾವನೆ ನನ್ನಲ್ಲಿದೆ. ನಾನು ಅವರಿಗಾಗಿ ಎಲ್ಲವನ್ನೂ ಮಾಡಲು ಸಿದ್ಧ. ನಾನು ಅವರನ್ನು ತುಂಬಾ ಸುರಕ್ಷಿತವಾಗಿಡಲು ಬಯಸುತ್ತೇನೆ. ನಾನು ಅವರಿಗಾಗಿ ಯುದ್ಧಕ್ಕೆ ಹೋಗಲು ಸಾಕಷ್ಟು ಫಿಟ್ ಆಗಿರಬೇಕು. ನಾನು ಈಗಾಗಲೇ ಅದರ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
'ಅತಿಯಾದ ಕೆಲಸ ಬೇಡ'
ರಶ್ಮಿಕಾ ಅವರು ಅತಿಯಾದ ಕೆಲಸವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಒಪ್ಪಿಕೊಂಡಿದ್ದಾರೆ. 'ನಾನು ಅತಿಯಾದ ಕೆಲಸ ಮಾಡುತ್ತೇನೆ. ಆದರೆ ನಾನು ನಿಮಗೆ ಹೇಳುತ್ತಿದ್ದೇನೆ, ಹಾಗೆ ಮಾಡಬೇಡಿ. ಅದು ಒಳ್ಳೆಯದಲ್ಲ. ನಿಮಗೆ ಸೂಕ್ತವಾದದ್ದನ್ನು ಮಾಡಿ, ಅದು ದಿನಕ್ಕೆ 8ರಿಂದ 10 ಗಂಟೆಗಳು ಆಗಿರಲಿ. ಆದರೆ ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ. ನಾನು ಆಯ್ಕೆ ಮಾಡಲು ಸಾಧ್ಯವಾದರೆ, ನಮ್ಮನ್ನು ಅದಕ್ಕಿಂತ ಹೆಚ್ಚು ಕೆಲಸ ಮಾಡಬೇಡಿ ಎಂದು ನಾನು ಹೇಳುತ್ತೇನೆ. ನಟರು ಮಾತ್ರವಲ್ಲ, ತಂತ್ರಜ್ಞರು ಮತ್ತು ಇಡೀ ತಂಡವು ಆ ಸಮತೋಲನಕ್ಕೆ ಅರ್ಹರು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸುದ್ದಿಯಾಗಿತ್ತು. ಇತ್ತೀಚಿನ ಕಾರ್ಯಕ್ರಮವೊಂದರಲ್ಲೂ ರಶ್ಮಿಕಾಗೆ ಈ ಪ್ರಶ್ನೆ ಕೇಳಿದಾಗ, ನಿಮಗೆಲ್ಲರಿಗೂ ಗೊತ್ತೇ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಕನ್ಫರ್ಮ್ ಮಾಡಿದ್ದರು. ಈಗ ತಾಯ್ತನದ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ರಶ್ಮಿಕಾ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನವೆಂಬರ್ 7 ರಂದು ಬಿಡುಗಡೆಯಾಗಲಿದೆ. ಫೆಬ್ರವರಿಯಲ್ಲಿ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ ಎಂದೂ ವರದಿಯಾಗಿದೆ.












Click it and Unblock the Notifications