Rashmika Mandanna marriage: ನಾಳೆಯೇ ರಶ್ಮಿಕಾ-ವಿಜಯ್ ಮದುವೆ ಎಂದು ಉದಯಪುರದಿಂದ ವಿಡಿಯೋ ಹಂಚಿಕೊಂಡ ಯುವತಿ
Rashmika Mandanna marriage: ಕನ್ನಡದಿಂದ ಸಿನಿಮಾರಂಗ ಪ್ರವೇಶಿಸಿ, ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರ ಮದುವೆ ವಿಚಾರದ ಬಗ್ಗೆ ಹೊಸ್ ಅಪ್‌ಡೇಟ್ ಸಿಕ್ಕಿದೆ. ವರದಿಗಳ ಪ್ರಕಾರ ಫೆಬ್ರವರಿ ಕೊನೆಯ ವಾರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ರಾಜಸ್ಥಾನದ ಉದಯಪುರದಲ್ಲಿರುವ ಐತಿಹಾಸಿಕ ಸಿಟಿ ಪ್ಯಾಲೇಸ್‌ನಲ್ಲಿ ಮದುವೆ ತಯಾರಿಗಳು ನಡೆಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಫೆಬ್ರವರಿ 2ರಂದೇ ಈ ಜೋಡಿ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಉದಯಪುರದ ಅರಮನೆಯ ಆವರಣದಲ್ಲಿ ಹೂವಿನ ಅಲಂಕಾರ, ಬೃಹತ್ ಲೈಟಿಂಗ್ ವ್ಯವಸ್ಥೆ, ವೇದಿಕೆ ನಿರ್ಮಾಣ ಸೇರಿದಂತೆ ಅದ್ಧೂರಿ ಸಿದ್ಧತೆಗಳು ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. "tanyaa.yaaa" ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಬ್ಬರು ಯುವತಿಯರು ಇದೇ ಅರಮನೆಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಫೆಬ್ರವರಿ 2ರಂದು ನಡೆಯಲಿದೆ ಎಂದು ರಿವೀಲ್ ಮಾಡಿದ್ದಾರೆ.

ಸಿಬ್ಬಂದಿಯಿಂದ ಖಚಿತ ಮಾಹಿತಿ ಎಂದ ಯುವತಿ
ಅಲ್ಲದೆ ತಾರಾಜೋಡಿಯ ಮದುವೆ ಬಗ್ಗೆ ಅವರು ಅರಮನೆ ಸಿಬ್ಬಂದಿಯಿಂದ ಮಾಹಿತಿ ದೃಢಪಡಿಸಿಕೊಂಡಿರುವುದಾಗಿ ಹೇಳಿರುವುದು ಈ ವದಂತಿಗೆ ಮತ್ತಷ್ಟು ಬಲ ನೀಡಿದೆ. ಸಿಟಿ ಪ್ಯಾಲೇಸ್ ಈಗಾಗಲೇ ಹಲವು ಸೆಲೆಬ್ರಿಟಿ ಮದುವೆಗಳು ಮತ್ತು ಐಷಾರಾಮಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಕಾರಣ, ಈ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಇತ್ತೀಚೆಗೆ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮದುವೆ ಕುರಿತು ಪ್ರಶ್ನೆ ಕೇಳಿದಾಗ, ರಶ್ಮಿಕಾ ಮಂದಣ್ಣ ನಗುಮುಖದಿಂದ ಪ್ರತಿಕ್ರಿಯಿಸಿ ನೇರ ಉತ್ತರ ನೀಡುವುದನ್ನು ತಪ್ಪಿಸಿಕೊಂಡಿದ್ದರು. ಅವರ ಈ ಪ್ರತಿಕ್ರಿಯೆ ಕೂಡ ಅಭಿಮಾನಿಗಳ ಊಹಾಪೋಹಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಶುಭಾಶಯಗಳ ಸುರಿಮಳೆ ಹರಿಸಿದ ಫ್ಯಾನ್ಸ್
ವೈರಲ್ ವಿಡಿಯೋ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭಾಶಯಗಳ ಪೋಸ್ಟ್‌ಗಳು, ಮೀಮ್ಸ್, ಮದುವೆಯ ಎಐ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈಗಾಗಲೇ "ವಿಜಯ್-ರಶ್ಮಿಕಾ ವೆಡ್ಡಿಂಗ್ ಲುಕ್" ಎಂದು ಡಿಸೈನ್‌ಗಳನ್ನು ಶೇರ್ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲೊಂದು ಎಂಬ ಕಾರಣಕ್ಕೆ ಈ ಸುದ್ದಿ ಸದ್ಯ ಟ್ರೆಂಡಿಂಗ್ ಟಾಪಿಕ್ ಆಗಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆ ಕುರಿತು ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಉದಯಪುರದ ಅರಮನೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳು ಯಾರ ಮದುವೆಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಈ ಜೋಡಿಯ ಮದುವೆ ಸುದ್ದಿಯೇ ಇರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ. ಅಧಿಕೃತ ಘೋಷಣೆ ಹೊರಬರುವವರೆಗೆ, ಈ ಸುದ್ದಿ ಸೋಷಿಯಲ್ ಮೀಡಿಯಾದ ವದಂತಿಯಾಗಿ ಉಳಿದಿದೆ.
ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ಅಕ್ಟೋಬರ್‌ನಲ್ಲೇ ಹೈದರಾಬಾದ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈ ವಿಷಯವನ್ನೂ ಈವರೆಗೆ ಇಬ್ಬರೂ ಬಹಿರಂಗವಾಗಿ ದೃಢಪಡಿಸಿಲ್ಲ. ಆದರೂ ಇವರಿಬ್ಬರ ನಡುವಿನ ಆಪ್ತತೆ, ಒಟ್ಟಿಗೆ ಕಾಣಿಸಿಕೊಳ್ಳುವ ಸಂದರ್ಭಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿರುವ ಫೋಟೋಗಳು ಮದುವೆ ಸುದ್ದಿಯನ್ನು ಚರ್ಚೆಗೆ ತಂದಿವೆ.












Click it and Unblock the Notifications