Rashmika Mandanna: ವಿಜಯ್ ಮನೆಯಲ್ಲಿ ಶ್ರೀವಲ್ಲಿ ದೀಪಾವಳಿ, ಶೀಘ್ರವೇ ಮದುವೆ ಡೇಟ್ ಅನೌನ್ಸ್?
Actress Rashmika Mandanna: ಬಾಲಿವುಡ್ ಮತ್ತು ತೆಲುಗು ಸೇರಿದಂತೆ ಸಾಲು ಸಾಲು ಹೊಸ ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣಾ ಅವರು ಸಹ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ರಶ್ಮಿಕಾ 'ಪುಷ್ಪಾ-2' ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಇತ್ತ ರಶ್ಮಿಕಾ ವಿಜಯ್ ಲವ್ ಸೀಕ್ರೆಟ್ ರಿವೀಲ್ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಟ ಹಂಚಿಕೊಂಡು ಫೋಟೋಗಳೇ ಸಾಕ್ಷಿಯಾಗಿವೆ.
ಹೌದು, ಎಲ್ಲರಂತೆ ನಟಿ ರಶ್ಮಿಕಾ ಮಂದಣ್ಣಾ ಅವರ ಮನೆಯಲ್ಲೂ ದೀಪಾವಳಿ ಸಡಗರ ಮನೆ ಮಾಡಿದೆ. ಕಳೆದ ವರ್ಷದಂತೆ ಈ ವರ್ಷವು ನಟ ವಿಜಯ್ ದೇವರಕೊಂಡು ಅವರ ಫ್ಯಾಮಿಲಿ ಜೊತೆಗೆ ಅವರ ಮನೆಯಲ್ಲಿಯೇ ರಶ್ಮಿಕಾ ಹಬ್ಬದ ಆಚರಿಸಿದ್ದಾರೆ ಎನ್ನಲಾಗಿದೆ.

ಲವ್ ಸೀಕ್ರೆಟ್ ಬಿಟ್ಟು ಕೊಟ್ರಾ ರಶ್ಮಿಕಾ..!
ದೀಪ ಹಿಡಿದು ಸ್ಮೈಲಿ ಫೇಸ್ ಫೋಟೋಗಳನ್ನು ರಶ್ಮಿಕಾ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತ ನಟ ವಿಜಯ್ ಸಹ ಅವರ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷವು ವಿಜಯ್ ಕುಟುಂಬ ಜೊತೆಗೆ ನಟಿ ರಶ್ಮಿಕಾ ದೀಪಾವಳಿ ಆಚರಿಸಿದ್ದರು. ಈ ಭಾರಿಯು ಆಚರಣೆ ಮಾಡಿದ್ದು, ಫೋಟೋ ಕ್ರೆಡಿಟ್ ನೀಡುವ ಮೂಲಕ ದೀಪಾವಳಿ ಹಾಗೂ ನಟ ವಿಜಯ್ ಜೊತೆಗಿನ ಲವ್ ರಿಲೇಷನ್‌ಶಿಪ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಯ ಮೆಟ್ಟಿಲುಗಳ ಮೇಲೆ ದೀಪ ಹಿಡಿದು ಪೋಸ್ಟ್ ಕೊಟ್ಟ ರಶ್ಮಿಕಾ ಫೋಟೋ ತೆಗೆದದ್ದು ವಿಜಯ್ ದೇವರಕೊಂಡ ಸಹೋದರ ನಟ ಆನಂದ್ ದೇವಕೊಂಡ ಎನ್ನಲಾಗಿದೆ. ಫೋಟೋ ಕೆಳಗೆ ಫೋಟೋ ಕೆಡಿಟ್ ಅನ್ನು ಆನಂದ್ ದೇವಕೊಂಡಾಗೆ ಹೇಳಿರುವ ನಟಿ ರಶ್ಮಿಕಾ ಈ ಬಗ್ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೆಲ್ಲ ನೋಡಿದರೆ, ಈ ವರ್ಷ ಕೊಡಗಲ್ಲಿರುವ ಮನೆ, ಇಲ್ಲವೇ ಮುಂಬೈ, ಹೈದರಾಬಾದ್ ಮನೆ ಹೀಗೆ ಯಾವ ಮನೆಯಲ್ಲಿ ದೀಪಾವಳಿ ಮಾಡಿದ್ದಾರೆ ಎಂದು ಕಾದಿದ್ದ ನಟಿ ರಶ್ಮಿಕಾ ಅಭಿಮಾನಿಗಳಿಗೆ ಖಚಿತ ಮಾಹಿತಿ ಸಿಕ್ಕಿದೆ. ಈ ಮೂಲಕ ಈ ಇಬ್ಬರು ಸ್ಟಾರ್ ನಟ, ನಟಿ ಪ್ರೀತಿಯಲ್ಲಿ ಬಿದ್ದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಈವರೆಗ ಆ ಇಬ್ಬರು ನಟ ನಟಿಯರು ಈ ಮಾತು ಒಪ್ಪದೇ ನಿರಾಕರಿಸುತ್ತಿದ್ದಾರೆ.
ಹೊಸ ಸಿನಿಮಾ, ಜಾಹೀರಾತುಗಳಲ್ಲಿ ಬ್ಯೂಸಿ
ಆದರೆ ಈ ಹಿಂದೆಯೂ ಈ ಬಗ್ಗೆ ಮಾತುಗಳು ಕೇಳಿ ಬಂದಾಗ, ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದಷ್ಟೇ ಹೇಳಿಕೊಂಡಿದ್ದಾರೆ. ಸದ್ಯ ವಿಜಯ್ ದೇವಕೊಂಡ ಸಹ ಬೇರೆ ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಜಾಹೀರಾತು ಸೇರಿದಂತೆ ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಬ್ಯೂಸಿ ಇದ್ದಾರೆ.
ಮದುವೆ ಬಗ್ಗೆ ಶೀಘ್ರವೇ ಗುಡ್ ನ್ಯೂಸ್?
ಮಾಲ್ಡಿವ್ಸ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ವಿಜಯ್ ರಶ್ಮಿಕಾ ಇಬ್ಬರು ಇರುವ ಫೋಟೋಗಳು, ಡ್ರೆಸ್‌ಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ನಟಿ ರಶ್ಮಿಕಾ ಹಬ್ಬದ ಸಂದರ್ಭಗಳಲ್ಲಿ ಆಗಾಗ ಅವರ ಮನೆಗೆ ಹೋಗಿ ಬರುತ್ತಿರುತ್ತಾರೆ. ಇದೀಗ ಒಂದೇ ಮನೆಯಲ್ಲಿ ವಿಜಯ್ ರಶ್ಮಿಕಾ ಹಬ್ಬ ಆಚರಿಸಿದ್ದಾರೆ. ಆದಷ್ಟು ಶೀಘ್ರವೇ ಇಬ್ಬರ ಮದುವೆಯ ಸಿಹಿ ಸುದ್ದಿ ಕೊಡಲಿದ್ದಾರೆ ಎಂದು ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.












Click it and Unblock the Notifications