Rashmika Mandanna: ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಬರ್ತ್ಡೇ ಸೆಲೆಬ್ರೇಷನ್: ಅಪರೂಪದ ಫೋಟೋಸ್ ಇಲ್ಲಿವೆ
ಸ್ಯಾಂಡಲ್‌ವುಡ್‌ನ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟಿದ ದಿನವನ್ನ ಆಚರಣೆ ಜೋರಾಗಿಯೇ ಆಗಿದೆ. ರಶ್ಮಿಕಾ ಮಂದಣ್ಣ ತಮ್ಮ 29ನೇ ಜನ್ಮ ದಿನವನ್ನ ಭಾರತದಲ್ಲಿ ಸೆಲೆಬ್ರೇಟ್ ಮಾಡಿಕೊಂಡಿಲ್ಲ ಬಿಡಿ. ದೂರದ ಓಮನ್ ದೇಶದಲ್ಲಿಯೇ ರಶ್ಮಿಕಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಇದೆ. ಅದರ ಮಧ್ಯೆ ಸ್ವತಃ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಬರ್ತ್‌ಡೇ ವಿಡಿಯೋ ಹಂಚಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಸಖತ್ ಸೆಟಪ್ ಹಾಕಿದ್ದಾರೆ. ಅದರ ಮುಂದೆ ನಿಂತುಕೊಂಡು ಹ್ಯಾಪಿ ಬರ್ತ್ ಡೇ ಟು ರಶ್ಶಿ ಅಂತಲೇ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ 29ನೇ ಜನ್ಮ ದಿನವನ್ನ ದೂರದ ಓಮನ್ ಅಲ್ಲಿಯೇ ಆಚರಣೆ ಮಾಡಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಬರ್ತ್ಡೇ ವೆಕೇಷನ್ ಮೂಡ್ನಲ್ಲಿದ್ದಾರೆ. ಆದರೆ ಹಲವು ವರ್ಷದ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗೆ ಅವರ ಬರ್ತ್ಡೇ ಸೆಲೆಬ್ರೇಷನ್ ಹೇಗಿತ್ತು? ರಕ್ಷಿತ್ ಶೆಟ್ಟಿ ಜೊತೆಗೆ ಬರ್ತಡೆ ಮಾಡಿಕೊಂಡ ರಶ್ಮಿಕಾ ಅವರ ಪೋಟೋ ನೋಡಿದ್ರೆ ಅವರೇ ಇವರಾ ಎಂಬ ಎಚ್ಚರಿ ಮೂಡುತ್ತದೆ. ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಬರ್ತಡೆ ಸೆಲೆಬ್ರೇಷನ್ ಮಾಡಿಕೊಂಡ ಮುಂದಾದ ಪೋಟೋಸ್ ಗಳು ಇದೀಗ ಸಕತ್ ವೈರಲ್ ಆಗುತ್ತಿದೆ.

ರಶ್ಮಿಕಾ ಅವರು ರಕ್ಷಿತ್ ಶೆಟ್ಟಿ ಜೊತೆಗೆ ಬರ್ತ್ಡೇ ಸೆಲೆಬ್ರೇಟ್ ಮಾಡಿರುವಂತಹ 10-15 ಹಳೆಯ ಫೋಟೋಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಳೆ ಫೋಟೋದಲ್ಲಿ ನಟಿ ರಶ್ಮಿಕಾ ಅವರನ್ನು ನೋಡಿದರೆ ಅವರೇ ಇವರಾ ಅಂತ ಅಂದುಕೊಳ್ಳುವಂತೂ ಖಂಡಿತಾ. ಇದರಲ್ಲಿ ಇಬ್ಬರೂ ಕೂಡಾ ಡಿಫರೆಂಟ್ ಆಗಿ ಕಾಣಿಸ್ತಾರೆ. ರಶ್ಮಿಕಾ ಇದರಲ್ಲಿ ತುಂಬಾ ಡಿಫರೆಂಟ್ ಆಗಿ ಕಾಣಿಸುತ್ತಾರೆ. ಈ ಹಳೆಯ ಫೋಟೋವನ್ನ ನೋಡಿದ್ರೆ, ಸಲಕ್ಕೆ ಕಿರಿಕ್ ಪಾರ್ಟಿ ದಿನಗಳನ್ನು ನೆನಪುಗಳು ಕಣ್ಣ ಮುಂದೆ ಬರುತ್ತವೆ. ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆಗೆ ಬರ್ತಡೆ ಮಾಡಿಕೊಂಡ ರಶ್ಮಿಕಾ ಇದರಲ್ಲಿ ತುಂಬಾ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ.
ಒಮನ್ನಲ್ಲಿ ರಶ್ಮಿಕಾ ಮಂದಣ್ಣ ಸುತ್ತಾಟ
ನಟಿ ರಶ್ಮಿಕಾ ಮಂದಣ್ಣ ಅವರು ಪ್ರತಿವರ್ಷ ಬರ್ತ್ಡೇ ಸಂದರ್ಭದಲ್ಲಿ ವಿದೇಶಕ್ಕೆ ಹೋಗ್ತಾರೆ. ಪ್ರವಾಸಿ ತಾಣಕ್ಕೆ ಹೋಗಿ ಅಲ್ಲಿ ರಜಾದಿನಗಳನ್ನು ಎಂಜಾಯ್ ಮಾಡ್ಕೊಂಡು ವಾಪಸ್ ಬರ್ತಾರೆ.ಈ ವರ್ಷವೂ ನಟಿ ಬರ್ತ್ಡೇ ಸೆಲೆಬ್ರೇಷನ್ಗೆ ಅಬ್ರಾಡ್ಗೆ ಹೋಗಿದ್ದಾರೆ. ಈ ವರ್ಷ ರಶ್ಮಿಕಾ ಮಂದಣ್ಣ ಅವರು ಒಮನ್ನಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಆದರೆ, ಯಾರ ಜೊತೆಗೆ ಬರ್ತಡೆ ಸೆಲೆಬ್ರೆಟ್ ಮಾಡಿಕೊಂಡು ಅನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೆಇದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಾಗಿ ಸುತ್ತಾಟ ಮಾಡುತ್ತಾ ಇದ್ದಾರೆ. ವಿಜಯ್ ಜೊತೆ ಒಮನ್ಗೆ ತೆರಳಿದ್ದಾರೆ. ಅಲ್ಲಿ ಇಬ್ಬರೂ ಬರ್ತ್ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರೋ ಒಂದು ಫೋಟೋದಲ್ಲಿ ಹಿಂಭಾಗದಲ್ಲಿ ಕೆಂಪು ಬಣ್ಣದ ಬಾವುಟವನ್ನು ಹಾಕಲಾಗಿದೆ. ವಿಜಯ್ ದೇವರಕೊಂಡ ಹಾಕಿರೋ ಫೋಟೋದಲ್ಲೂ ಇದೇ ಬಾವುಟ ಕಾಣಿಸಿದೆ. ಹೀಗಾಗಿ, ಇಬ್ಬರೂ ಒಮನ್ನಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇವರ ಮಧ್ಯೆ ಪ್ರೀತಿ ಇರೋ ವಿಚಾರ ಖಚಿತವಾಗಿದ್ದು, ರಜೆ ದಿನಗಳಲ್ಲಿ ಇಬ್ಬರು ಒಟ್ಟಾಗಿ ಸಮಯ ಕಳೆಯುತ್ತಿರುವ ಫೋಟೋಗಳು ಸಕತ್ ವೈರಲ್ ಆಗುತ್ತಿರುತ್ತವೆ. ಇದು ಅಭಿಮಾನಿಗಳಿಗೂ ಸಕರ್ ಖುಷಿಯನ್ನ ನೀಡಿದೆ.












Click it and Unblock the Notifications