Rashmika Mandanna: 'ಮೈಸಾ' ಶೂಟಿಂಗ್ ಶುರು ಬೆನ್ನಲ್ಲೆ ಸೀರೆಯಲ್ಲಿ ರಶ್ಮಿಕಾ ಮಸ್ತ್ ಡಾನ್ಸ್.. Video Viral
Rashmika Mandanna-MYSAA: ಬಾಲಿವುಡ್‌ನಲ್ಲಿ ಹೆಚ್ಚಾಗಿ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣ ಅವರು, ಈ ಹಿಂದೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮೊನ್ನೆಯಷ್ಟೇ ರಶ್ಮಿಕಾ ನಟನೆಯ 'ಕುಬೇರ' ಸಿನಿಮಾ ರಿಲೀಸ್ ಆಗಿತ್ತು. ಇದೀಗ 'ಮೈಸಾ' ಸಿನಿಮಾ ಶೂಟಿಂಗ್ ಅಧಿಕೃತವಾಗಿ ಆರಂಭವಾಗಿದೆ. ಅದ್ಧೂರಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಸೀರೆಯಲ್ಲಿ ನಟಿ ರಶ್ಮಿಕಾ ಕಂಗೊಳಿಸಿದ್ದಾರೆ. ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಬುಡಕಟ್ಟು ಜನರೊಂದಿಗಿನ ರಶ್ಮಿಕಾ ಡಾನ್ಸ್ ವೈರಲ್ ಆಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 'ಮೈಸಾ' ಚಿತ್ರದಲ್ಲಿ ಮತ್ತೊಂದು ಪ್ರಮುಖ (ವಾರಿಯರ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ MYSAA ಸಿನಿಮಾ ಅನ್ನು ರವೀಂದ್ರ ಪುಲ್ಲೆ ನಿರ್ದೇಶನ ಮಾಡುತ್ತಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ಈ ಚಿತ್ರಕ್ಕೆ ಭಾರೀ ಬಂಡವಾಳ ಹೂಡಿ ನಿರ್ಮಿಸುತ್ತಿದೆ. ಸಿನಿಮಾದ ಆಕರ್ಷಕ ಶೀರ್ಷಿಕೆಯ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ಅವರ ಫಸ್ಟ್ ಲುಕ್ ಇದ್ದು, ಆ ಪೋಸ್ಟರ್ ಸಖತ್ ಸದ್ದು ಮಾಡಿತ್ತು. ಇದು ಸಹ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಸಿನಿಮಾಗಿದೆ. ಹೀಗಾಗಿ ಬಜೆಟ್ ದೊಡ್ಡಮಟ್ಟದಲ್ಲಿರಲಿದೆ.

ಪೋಸ್ಟರ್ ಬಿಡುಗಡೆ ಬಳಿಕ ನೆನ್ನೆ ಭಾನುವಾರ ಅದ್ಧೂರಿ ಪೂಜೆ ನೆರವೇರಿಸುವ ಮೂಲಕ ಚಿತ್ರ ಶೂಟಿಂಗ್ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಎಲ್ಲ ಸದಸ್ಯರು ಹಾಜರಿದ್ದರು. ಸುರೇಶ್ ಬಾಬು ಕ್ಲಾಪ್ ಮಾಡಿದರು. ರವಿಕಿರಣ್ ಕೋಲಾ ಕ್ಯಾಮೆರಾ ಸ್ವಿಚ್ ಆನ್ ಮೂಲಕ ಪೂಜೆ ನೆರವೇರಿತು.
ವಿಭಿನ್ನ ಸಿನಿಮಾಗಳಿಗೆ ನಟಿ ರಶ್ಮಿಕಾ ಆದ್ಯತೆ
ಚಿತ್ರತಂಡ ಹೇಳುವಂತೆ ಈ ಸಿನಿಮಾ 'ಗೊಂಡ್ ಬುಡಕಟ್ಟು' ಜನಾಂಗದವರ ಹಿನ್ನೆಲೆಯಲ್ಲಿ ನಡೆಯಲಿದೆ ಎನ್ನಲಾಗಿದೆ. ಇದೊಂದು ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಸಿನಿಮಾ ಗಿದ್ದು, ನಟಿ ರಶ್ಮಿಕಾ ಇಲ್ಲಿ ಇದುವರೆಗೂ ಕಾಣದ ಪತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರಿಗೆ ಭಿನ್ನ ಪಾತ್ರವಾಗಿದೆ. ರಶ್ಮಿಕಾ ಕ್ಯೂಟ್ ಮುಖದಲ್ಲಿ ರಕ್ತಸಿಕ್ತದ ಪಾತ್ರ, ಅಭಿನಯ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮೂಲಕ ರಶ್ಮಿಕಾ ಒಳ್ಳೆಯ ಸದಭಿರುಚಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಷ್ಟವಾಗಿ ಕಾಣುತ್ತಿದೆ. ಹೊಸ ರೀತಿಯ ಪಾತ್ರಗಳಿಗೆ ಅವರು ಆದ್ಯತೆ ನೀಡುತ್ತಿದ್ದಾರೆ. 'ಮೈಸಾ' ಸಹ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳಲಿದೆ ಎಂದು ಫ್ಯಾನ್ಸ್ ಈಗಲೇ ಮಾತನಾಡಿಕೊಳ್ಳುತ್ತಿದ್ದಾರೆ.
What an incredible welcome. Tribal warriors giving a grand dance welcome to @iamRashmika, she is portraying a warrior in #MYSAA.
— Rashmika Delhi Fans (@Rashmikadelhifc) July 27, 2025
This is going to be epic. 🔥
And look at the Sanskaar of #RashmikaMandanna ❤️
Usne jhuk ke aashirwad liya ❤️
Sweetheart for a reason.❤️ pic.twitter.com/aGYgsNSJPo
ರಶ್ಮಿಕಾ ಡಾನ್ಸ್ ವಿಡಿಯೋ ವೈರಲ್
ಸಿನಿಮಾ ಪೂಜಾ ಕಾರ್ಯಕ್ರಮಕ್ಕೆ ರಶ್ಮಿಕಾ ಚೆಂದದ ಸೀರೆಯೂಟ್ಟು ಆಗಮಿಸಿದ್ದಾರೆ. ಪೂಜೆ ಮುಗಿಯುತ್ತಿದ್ದಂತೆ ಬುಡಕಟ್ಟು ಸಮುದಾಯದ ಜನರೊಂದಿಗೆ ನೃತ್ಯ ಮಾಡಿದ್ದಾರೆ. ಕೈ ಕೈ ಹಿಡಿದು ಕ್ಯೂಟೆ ಸ್ಟೆಪ್ ಹಾಕಿದ್ದಾರೆ. ವೃದ್ಧೆಯೊಂದಿಗೆ ಕೈ ಹಿಡಿದು ನೃತ್ಯ ಮಾಡಿದ ರಶ್ಮಿಕಾ ವಿಡಿಯೋ ವೈರಲ್ ಆಗಿದೆ. ನಗುಮೊಗದ ಸುಂದರಿ ಕಂಡು ಬುಡಕಟ್ಟು ಮಹಿಳೆಯರು ಖುಷಿಪಟ್ಟಿದ್ದನ್ನು ನೀವು ಕಾಣಬಹುದು..












Click it and Unblock the Notifications