ಮನೆಯಲ್ಲಿ ಗಲಾಟೆ, ರಾತ್ರಿಯಿಡೀ ಮೆಟ್ಟಿಲು ಮೇಲೆ ಮಲಗಿದೆ: ನಟ ರಣಬೀರ್ ಬದುಕಲ್ಲಿ ಏನಾಯ್ತು?
ಸೆಲೆಬ್ರಿಟಿಗಳು ತೆರೆಯ ಮೇಲೆ ಅಭಿಮಾನಿಗಳಿಗೆ ಮನರಂಜನೆ ನೀಡಲು ಹೆಚ್ಚು ಶ್ರಮ ಪಡುತ್ತಾರೆ. ಅದೆಷ್ಟೋ ಜನರ ಬದುಕಿನಲ್ಲಾದ ಘಟನೆಗಳಲ್ಲಿ ಹತ್ತಿರವಾಗುವಂತಹ ಪಾತ್ರಗಳನ್ನ ಆಯ್ಕೆ ಮಾಡುತ್ತಾರೆ. ಆದರೆ ತಮ್ಮ ವೈಯಕ್ತಿಕ ಬದುಕಿನಲ್ಲಾಗುವ ಕಹಿ ಘಟನೆಗಳನ್ನ ಅಷ್ಟಾಗಿ ಬಹಿರಂಗಪಡಿಸುವುದಿಲ್ಲ. ಇನ್ನು ಸಿನಿ ಕುಟುಂಬದಲ್ಲೇ ಹುಟ್ಟಿ ಬೆಳೆದ ಖ್ಯಾತ ನಟರೊಬ್ಬರ ಬದುಕಿನಲ್ಲೂ ಕಹಿ ಘಟನೆಗಳು ಎದುರಾಗಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮನೆಯಲ್ಲಿ ಕಲಹ ಉಂಟಾಗಿ ರಾತ್ರಿಯಿಡೀ ಮೆಟ್ಟಿಲಗಳ ಮೇಲೆ ಮಲಗಿದ್ದೆ ಎಂದು ಭಾವುಕವಾಗಿ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಮೌನವಾಗಿರುತ್ತಾರೆ. ತಮ್ಮ ಕೆಲಸವನ್ನು ಹೊರತುಪಡಿಸಿ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು ವಿರಳ. ಆದರೆ ಇತ್ತೀಚೆಗೆ, ಅವರು ತಮ್ಮ ಜೀವನದ ಕೆಟ್ಟ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದು, ರಣಬೀರ್ ತಮ್ಮ ಮನೆಯಲ್ಲೇ ನಡೆಸಿದ ಹೋರಾಟಗಳು ಹಾಗೂ ಅದಕ್ಕೆ ಎಷ್ಟು ಹತ್ತಿರವಾಗಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ರಣಬೀರ್ ಕಪೂರ್ ತಮ್ಮ ಬಾಲ್ಯದಲ್ಲಿ ತಮ್ಮ ಹೆತ್ತವರ ಕಷ್ಟದ ಹಂತದಲ್ಲಿದ್ದ ಹೋರಾಟಗಳು ಹಾಗೂ ಕಾಲಾನಂತರದಲ್ಲಿ ಅವರ ಸಂಬಂಧ ಹೇಗೆ ಸುಧಾರಿಸಿತು ಎಂಬುದನ್ನು ನೆನೆದಿದ್ದಾರೆ. ನನ್ನ ಪೋಷಕರು ಜಗಳವಾಡುತ್ತಿದ್ದರು. ರಾತ್ರಿ 1ರಿಂದ ಬೆಳಿಗ್ಗೆ 5 ರವರೆಗೆ ನಾಲ್ಕು ಗಂಟೆಯವರೆಗೆ ಮೆಟ್ಟಿಲುಗಳ ಮೇಲೆ ಕುಳಿತು, ನಿದ್ದೆ ಮಾಡುತ್ತಿದ್ದೆ. ಅವರು ಜಗಳವಾಡುವುದು, ವಸ್ತುಗಳನ್ನು ಮುರಿಯುವುದು ಕೇಳಿದ್ದು ನನಗೆ ಚೆನ್ನಾಗಿ ನೆನಪಿದೆ ಎಂದಿದ್ದಾರೆ.
ಶಾಲೆಯಲ್ಲಿ ಮುಜುಗರ ಆಯ್ತು
ತನ್ನ ಪೋಷಕರ ಈ ಕೌಟುಂಬಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಾಗಿದ್ದರಿಂದ ಶಾಲೆಯಲ್ಲಿ ಅನುಭವಿಸಿದ ಮುಜುಗರದ ಬಗ್ಗೆಯೂ ರಣಬೀರ್ ಭಾವುಕರಾಗಿದ್ದರು. ಎಲ್ಲರೂ ಈ ವಿಚಾರಗಳನ್ನು ಸಾಮಾನ್ಯ ಎನ್ನಬಹುದು. ಆದರೆ ನನ್ನ ಹೆತ್ತವರು ಸೆಲೆಬ್ರಿಟಿಗಳಾಗಿದ್ದರಿಂದ ಆ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಶಾಲೆಯಲ್ಲಿ ನನಗೆ ಸ್ವಲ್ಪ ಮುಜುಗರವಾಯಿತು. ಆದರೆ ಒಳ್ಳೆಯ ಸ್ನೇಹಿತರಾಗಿರುವುದರಿಂದ ಅದರ ಬಗ್ಗೆ ಮಾತನಾಡಲ್ಲ. ಆದರೆ ಎಲ್ಲೋ ಒಂದು ಕಡೆ ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದಿದೆ. ಅದನ್ನು ನಾವು ನಿಭಾಯಿಸಬೇಕು ಎಂದು ಹೇಳಿದ್ದಾರೆ.

ಬಾಲ್ಯದಲ್ಲಿ ಈ ಘಟನೆಗಳು ನನಗೆ ಚೆನ್ನಾಗಿ ನೆನಪಿದೆ. ಇದಾದ ನಂತರವೂ ನನ್ನ ಹೆತ್ತವರು ಮತ್ತೆ ಶಾಂತಿ ಮತ್ತು ಸ್ನೇಹವನ್ನು ಕಂಡುಕೊಂಡರು. ಇದಕ್ಕೆ ನಾನು ಕೃತಜ್ಞನಾಗಿದ್ದಾನೆ. ನಮ್ಮ ಪೋಷಕರು ಚೆನ್ನಾಗಿದ್ದಾರೆ. ಅವರು ಈ ಹಂತದಿಂದ ಹೊರಬಂದು ಮತ್ತೆ ಒಡನಾಟ ಮತ್ತು ಸ್ನೇಹವನ್ನು ಕಂಡುಕೊಂಡರು ಎಂದಿದ್ದಾರೆ.












Click it and Unblock the Notifications