Ramya - Darshan: ದರ್ಶನ್ ಜೈಲಲ್ಲಿದ್ದಾಗ ಟ್ವೀಟ್ ಮಾಡಿದ್ದ ರಮ್ಯಾ ಈಗ ಹೇಳಿದ್ದೇನು ?
Ramya and Darshan: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು. ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಂಡುಬಂದಿಲ್ಲ. ದರ್ಶನ್ ಹೊರಗೆ ಬಂದ ಮೇಲೆ ಹಲವು ನಟ ಹಾಗೂ ನಟಿಯರು ಅವರೊಂದಿಗೆ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿದ್ದರೆ ಕೆಲವರು ಅವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಈ ರೀತಿ ಅಂತರ ಕಾಪಾಡಿಕೊಳ್ಳುತ್ತಿರುವವರ ಬಗ್ಗೆ ಡಿ.ಬಾಸ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಲ್ಲೇ ಇದ್ದಾರೆ. ಇದೀಗ ನಟಿ ರಮ್ಯಾ ಅವರಿಗೂ ದರ್ಶನ್ ಅವರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು. ಈ ವಿಡಿಯೋ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರ ಹೆಸರು ಕೇಳಿ ಬಂದು, ಮೊದಲ ಬಾರಿ ಬಂಧನವಾದ ಮೇಲೆ ರಮ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಮ್ಯಾ ಅವರ ಹೇಳಿಕೆಗೆ ದರ್ಶನ್ ಅಭಿಮಾನಿಗಳು ಕೆಂಡವಾಗಿದ್ದರು. ಪ್ರಕರಣದಲ್ಲಿ ದರ್ಶನ್ ಅವರನ್ನು ಕರ್ನಾಟಕ ಪೊಲೀಸ್ ಬಂಧಿಸಿದ್ದ ಸಂದರ್ಭದಲ್ಲಿ ರೀಟ್ವೀಟ್ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಕೆಲವು ತಿಂಗಳುಗಳ ಮುಂಚೆ ಕರ್ನಾಟಕ ಬಾಕ್ಸ್ ಆಫೀಸ್ ಎನ್ನುವ ಹೆಸರಿನ ಖಾತೆಯಿಂದ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ವೊಂದನ್ನು ಮಾಡಲಾಗಿತ್ತು. ಆ ಟ್ವೀಟ್ ಅನ್ನು ರಮ್ಯಾ ಅವರು ರೀ ಟ್ವೀಟ್ ಮಾಡಿದ್ದರು. ಐಪಿಸಿ ಸೆಕ್ಷನ್ 302 ಉಲ್ಲೇಖಿಸಿ, ಈ ಸೆಕ್ಷನ್‌ನ ಪ್ರಕಾರ ದರ್ಶನ್ಗೆ ಕಠಿಣ ಶಿಕ್ಷೆಯಾಗಬಹುದು ಎಂದಿದ್ದರು.
ದರ್ಶನ್ ಅವರಿಗೆ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಇಲ್ಲವೇ ಮರಣ ದಂಡನೆ ಶಿಕ್ಷೆ ವಿಧಿಸಬಹುದು. ಒಂದೊಮ್ಮೆ ಈ ಕೇಸ್‌ನಲ್ಲಿ ದರ್ಶನ್ಗೆ ಶಿಕ್ಷೆ ಆಗದಿದ್ದರೆ ಹಣದ ಪ್ರಭಾವ ಕೆಲಸ ಮಾಡಿದೆ ಎಂದೇ ಅರ್ಥ ಮತ್ತು ಭಾರತೀಯ ಕಾನೂನು ವ್ಯವಸ್ಥೆ ಎಷ್ಟು ದುರ್ಬಲ ಆಗಿದೆ ಎನ್ನುವುದನ್ನು ತೋರಿಸಿದಂತಾಗುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎನ್ನುವ ಟ್ವೀಟ್ ಮಾಡಲಾಗಿತ್ತು. ಆ ಖಾತೆಯಿಂದ ಮಾಡಲಾಗಿದ್ದ ಟ್ವೀಟ್ ಅನ್ನು ನಟಿ ರಮ್ಯಾ ಅವರು ರೀಟ್ವೀಟ್ ಮಾಡಿದ್ದಾರು. ಇದಕ್ಕೆ ಆಗ ವಿರೋಧ ಸಹ ವ್ಯಕ್ತವಾಗಿತ್ತು.

ಈಗ ನೋ ಕಮೆಂಟ್ಸ್ ಎಂದ ರಮ್ಯಾ
ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಪತ್ರಕರ್ತರು ರಮ್ಯಾ ಅವರನ್ನು ಪ್ರಶ್ನೆ ಮಾಡಿದ್ದು. ಇದಕ್ಕೆ ರಮ್ಯಾ ಅವರು ನೋ ಕಮೆಂಟ್ಸ್ ಅಂತಷ್ಟೇ ಹೇಳಿದ್ದಾರೆ. ನಾನು ಮಾತನಾಡಲ್ಲ ಎಂದು ನಯವಾಗಿ ಪ್ರತಿಕ್ರಿಯಿಸುವುದಕ್ಕೆ ತಿರಸ್ಕರಿಸಿದ್ದಾರೆ.
ಸಿನಿ ಜರ್ನಿಯ ಬಗ್ಗೆ ರಮ್ಯಾ ಹೇಳಿದ್ದೇನು ?
ಇನ್ನು ಸಿನಿ ಜರ್ನಿಯ ಬಗ್ಗೆಯೂ ನಟಿ ರಮ್ಯಾ ಅವರು ಮಾತನಾಡಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ನಿರ್ಮಾಪಕಿಯಾಗಿದ್ದೆ. ಈ ಸಿನಿಮಾಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾದ ಬಗ್ಗೆ ತುಂಬಾ ಹೆಮ್ಮೆ ಇದೆ. ಕರ್ಮಷಿಯಲ್ ಆಗಿ ಅಷ್ಟೊಂದು ಲಾಭವನ್ನು ಈ ಸಿನಿಮಾ ತಂದುಕೊಡಲಿಲ್ಲ. ಆದರೆ ಸಿನಿಮಾಗೆ ಒಳ್ಳೆಯ ಪ್ರಶಸ್ತಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಯೋಚನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕಂಬ್ಯಾಕ್ ಮಾಡುವ ಬಗ್ಗೆ ನಟಿ ರಮ್ಯಾ ಅವರು ಹೇಳಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಂತೋಷನ್ನುಂಟು ಮಾಡಿದೆ.












Click it and Unblock the Notifications