Ramachari: ಗಂಡ ಚಾರಿ ಸಂಬಳದಲ್ಲಿ ಹೆಂಡತಿ ಚಾರು ಖರೀದಿ ಮಾಡಿದ್ದು ಏನ್ ಗೊತ್ತಾ?
ಚಾರು ಚಾರಿಯ ಸಖತ್ ಎಂಟ್ರಿಯೊಂದಿಗೆ ಆರಂಭದಲ್ಲೇ ಜನಮನ ಗೆದ್ದ ಧಾರವಾಹಿ ರಾಮಾಚಾರಿ. ಇಂದಿಗೂ ಕೂಡ ಅದೇ ಕುತೂಹಲಕಾರಿ ಸಂಗತಿಗಳೊಂದಿಗೆ ಧಾರವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ ಬೆಳೆದ ಚಾರು ಸದ್ಯ ಸಾಮಾನ್ಯ ಕುಟುಂಬದ ನಾರಾಯಣಾಚಾರ್ಯ ಮನೆಗೆ ಸೊಸೆಯಾಗಿ ತೆರಳಿದ್ದಾಳೆ. ನಿಧಾನವಾಗಿ ಗಂಡನಿಗೆ ಹತ್ತಿರವಾಗುತ್ತಿರುವ ಚಾರು ಸದ್ಯ ಮತ್ತೊಂದು ವಿಷಯಕ್ಕೆ ರಾಮಾಚಾರಿಯ ಮನಗೆದ್ದಿದ್ದಾಳೆ.
ತನ್ನ ಗಂಡನ ಮನೆಯ ಮನಸ್ಸುಗಳನ್ನು ಗೆಲ್ಲುವ ಪ್ರಯತ್ನದಲ್ಲಿರುವ ಚಾರುಗೆ ನೂರೆಂಟು ಸವಾಲುಗಳು ಎದುರಾಗುತ್ತಲೇ ಇವೆ. ಈ ಎಲ್ಲಾ ಸಮಸ್ಯೆಗಳ ನಡುವೆ ಪತಿ ರಾಮಾಚಾರಿಯ ಮನಸ್ಸು ಗೆಲ್ಲಲು ಕೊಂಚ ಮಟ್ಟಿಗೆ ಯಶಸ್ಸು ಕಾಣುತ್ತಿದ್ದಾಳೆ. ಶ್ರೀಮಂತರ ಮನೆಯಿಂದ ಬಂದ ಚಾರುಗೆ ಈವರೆಗೂ ಏನನ್ನೂ ತಂದು ಕೊಡದ ರಾಮಾಚಾರಿ ತನಗೆ ಬಂದ ಸಂಬಳದಲ್ಲಿ ಏನನ್ನಾದರೂ ಕೊಡಿಸಲು ಬಯಸುತ್ತಾನೆ.

ಇದಕ್ಕಾಗಿ ಜ್ಯೂವೆಲರಿ ಶಾಪ್‌ಗೆ ಚಾರುಲತಾಳನ್ನು ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಚಾರು ತುಂಬಾ ಸರಳ ಹಾಗೂ ಸುಂದರವಾದ ವಸ್ತು ತೆಗೆದುಕೊಳ್ಳುವ ಮೂಲಕ ರಾಮಾಚಾರಿಗೆ ಮತ್ತಷ್ಟು ಹತ್ತಿರವಾಗಿದ್ದಾಳೆ. ಅಷ್ಟಕ್ಕೂ ಚಾರು ಖರೀದಿಸಿದ ಆ ವಸ್ತು ಯಾವುದು ಗೊತ್ತಾ? ಅದನ್ನು ಹೇಳ್ತೀವಿ ನೋಡಿ.
ಬೆಳ್ಳಿಕಾಲುಂಗುರ ಖರೀದಿಸಿ ಚಾರುಲತ
ರಾಮಾಚಾರಿ ತನ್ನ ನಾಲ್ಕುವರೆ ಲಕ್ಷ ಸಂಬಳದಲ್ಲಿ ಚಾರುಲತಾಗೆ ಏನನ್ನಾದರೂ ಕೊಡಿಸಲು ಬಯಸುತ್ತಾನೆ. ಗೆಳೆಯ ಮುರಾರಿ ಕೊಟ್ಟ ಸಲಹೆಯಿಂದ ಚಾರುಲತಳನ್ನು ಆಭರಣ ಅಂಗಡಿಗೆ ಕರೆದುಕೊಂಡು ಹೋದ ಚಾರಿಗೆ ಚಾರು ಬಿಗ್ ಶಾಕ್ ಕೊಟ್ಟಿದ್ದಾಳೆ. ನಿಮಗೆ ಬೇಕಾದ ಒಡವೆ ಖರೀದಿಸಿ ಮೇಡಂ ಎಂದು ರಾಮಚಾರಿ ತನ್ನದೇ ಆದ ಸ್ಟೈಲ್‌ನಲ್ಲಿ ಹೇಳಿ ಸುಮ್ಮನೆ ನಿಲ್ಲುತ್ತಾನೆ. ಆಗ ಚಾರು ಅಂಗಡಿಯಲ್ಲಾ ಸುತ್ತು ಹಾಕಿ ಬೆಳ್ಳಿ ಕಾಲುಂಗುರವನ್ನು ತರುತ್ತಾಳೆ. ಇದನ್ನು ಕಂಡು ರಾಮಾಚಾರಿಗೆ ಆಶ್ಚರ್ಯ ಆಗುತ್ತೆ. ಇದನ್ನು ನೀರಿಕ್ಷೆ ಮಾಡದ ರಾಮಾಚಾರಿ ಶಾಕ್ ಆಗಿ ಪತ್ನಿ ಚಾರು ಕೆಲಸಕ್ಕೆ ಫಿದಾ ಆಗಿಬಿಡುತ್ತಾನೆ.
ನಾಲ್ಕುವರೆ ಲಕ್ಷದಲ್ಲಿ ಬಂಗಾರ ತೆಗೆದುಕೊಳ್ಳಿ ಅಂದರೆ ಸಾವಿರ ರೂಪಾಯಿ ಬೆಳ್ಳಿ ತೆಗೆದುಕೊಂಡಿದ್ದೀರಲ್ಲಾ ಮೇಡಂ ಅಂತ ಹೇಳಿದ ರಾಮಾಚಾರಿಗೆ ಕಾಲುಂಗುರದ ಮಹತ್ವವನ್ನು ಚಾರು ವಿವರಿಸುತ್ತಾಳೆ. ಮಾತ್ರವಲ್ಲದೆ ತನ್ನ ಕಾಲಿಗೆ ಉಂಗುರ ಹಾಕಲು ರಾಮಾಚಾರಿಗೆ ಹೇಳುತ್ತಾಳೆ. ಚಾರು ಪ್ರೀತಿಯಿಂದ ಕೇಳಿದರೆ ಚಾರಿ ಕೇಳದೇ ಇರಲು ಸಾಧ್ಯನೇ ಇಲ್ಲ. ಚಾರು ಕಾಲಿಗೆ ತಕ್ಷಣ ಉಂಗುರವನ್ನು ಹಾಕಿಯೇ ಬಿಡುತ್ತಾನೆ. ಇದನ್ನು ಕಂಡ ಇನ್ನಿತರ ಗ್ರಾಹಕರು ಚಪ್ಪಾಳೆ ತಟ್ಟುತ್ತಾರೆ.

ರಾಮಾಚಾರಿ ಸಂಬಳ ಮುಟ್ಟದ ನಾರಾಯಾಣಾಚಾರ್ಯರು
ಬೇಡವಾದ ಹುಡುಗಿ ಚಾರುಲತಳನ್ನು ಮದುವೆಯಾದ ಎಂಬ ಕಾರಣಕ್ಕೆ ಮಗ ರಾಮಾಚಾರಿ ಮೇಲಿನ ಕೋಪ ತಂದೆ ನಾರಾಯಾಣಾಚಾರ್ಯರಿಗೆ ಇನ್ನೂ ಕಡಿಮೆಯಾಗಿಲ್ಲ. ಇದರಿಂದಾಗಿ ರಾಮಾಚಾರಿ ತಂದ ಸಂಬಳವನ್ನೂ ನಾರಾಯಾಣಾಚಾರ್ಯರು ತೆಗೆದುಕೊಳ್ಳುವುದಿಲ್ಲ. ಸ್ವಾಭಿಮಾನ, ಗೌರವಕ್ಕೆ ತಲೆ ಬಾಗುವ ಅವರಿಗೆ ರಾಮಾಚಾರಿ ಮೇಲಿನ ಕೋಪ ಕೊಂಚವೂ ಕಡಿಮೆಯಾಗಿಲ್ಲ.
ಇದರಿಂದ ಬೇಸತ್ತ ರಾಮಾಚಾರಿ ಕಣ್ಣೀರು ಹಾಕುತ್ತಾನೆ. ಈ ವೇಳೆ ಮಗನನ್ನು ಸಮಾಧಾನ ಮಾಡಿದ ತಾಯಿ ಜಾನಕಿ ಸಂಬಳದಲ್ಲಿ ಹೆಂಡತಿ ಚಾರುಲತಾಗೆ ಏನನ್ನಾದರೂ ಕೊಡಿಸಲು ತಿಳಿಸುತ್ತಾರೆ. ಇದರಿಂದ ರಾಮಾಚಾರಿ ತನ್ನಲ್ಲಾ ಸಂಬಳದಲ್ಲಿ ಚಾರುಲತಾಗೆ ಏನಾದರು ಕೊಡಿಸಲು ಯೋಚಿಸುತ್ತಾನಾದರೂ ಕಡಿಮೆ ಹಣದಲ್ಲಿ ಚಾರುಲತಾ ಬೆಳ್ಳಿಕಾಲುಂಗುರ ಮಾತ್ರ ತೆಗೆದುಕೊಂಡು ಗಂಡನಿಗೇ ಆಶ್ಚರ್ಯಪಡಿಸುತ್ತಾಳೆ.
ಒಂದೆಡೆ ಅಕ್ಕ ಮತ್ತೊಂದೆಡೆ ತಾಯಿ ಚಾರುಗೆ ಶತ್ರು
ಚಾರುಲತಾ ಸಂಸಾರ ಒಡೆಯಲು ಒಂದೆಡೆ ಗಂಡನ ಅಣ್ಣನ ಹೆಂಡತಿ ವೈಶಾಖ ಮತ್ತೊಂದೆಡೆ ತಾಯಿ ಮಾನ್ಯತ ಒಂದಿಲ್ಲಾ ಒಂದು ಪ್ರಯತ್ನದಲ್ಲಿರುತ್ತಾರೆ. ಇಬ್ಬರ ಪ್ರಯತ್ನಗಳು ವಿಫಲವಾದರೂ ಚಾರುಲತಾ ಗಂಡನ ಮನೆಯಲ್ಲಿ ಸೈ ಎನಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಚಾರುಲತಾಳನ್ನು ಸಾಮಾನ್ಯ ಕುಟುಂಬವಾದ ರಾಮಾಚಾರಿ ಮನೆಯಲ್ಲಿ ಬಿಡುವುದು ತಾಯಿ ಮಾನ್ಯತಾಗೆ ಇಷ್ಟವಿಲ್ಲ. ಅದಕ್ಕಾಗಿ ವೈಶಾಖಾಗೆ ಸುಫಾರಿ ಕೊಟ್ಟು ಚಾರುಲತಾಳನ್ನು ಓಡಿಸಲು ಹೊಂಚು ಹಾಕಿದ್ದಾರೆ ಮಾನ್ಯತ. ಇತ್ತ ವೈಶಾಖ ಚಾರುಲತಾಳನ್ನು ಓಡಿಸಲು ಅದೆಷ್ಟೇ ಪ್ರಯತ್ನ ಪಟ್ಟರೂ ತಿರುಗುಬಾಣದಂತೆ ಸಮಸ್ಯೆಗಳು ಅವರ ಸುತ್ತ ಸುತ್ತಿಕೊಳ್ಳುತ್ತಿವೆ. ಒಟ್ಟಿನಲ್ಲಿ ಸಂಸಾರ ಒಡೆಯುವ ಪ್ರಯತ್ನದಲ್ಲಿರುವ ವೈಶಾಖ ಹಾಗೂ ಮಾನ್ಯತಾ ಅವರನ್ನು ಮೆಟ್ಟಿ ನಿಂತು ಚಾರು ತನ್ನ ಸಂಸಾರವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications