ಪವನ್ ಕಲ್ಯಾಣ್ VS ರಾಮ್ ಗೋಪಾಲ್ ವರ್ಮಾ ರಾಜಕೀಯ ಯುದ್ಧ ಶುರು!
ಇನ್ನೇನು ಲೋಕಸಭೆ ಚುನಾವಣೆ ಬಂದೇ ಬಿಡುತ್ತೆ, ಇದೇ ವೇಳೆ ದೇಶದ ಹಲವು ರಾಜ್ಯದ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ. ಅದರಲ್ಲೂ ಕರ್ನಾಟಕದ ನೆರೆ ರಾಜ್ಯವಾದ, ಆಂಧ್ರಪ್ರದೇಶ ಕೂಡ ಲೋಕಸಭೆ ಚುನಾವಣೆ ಸಮಯದಲ್ಲೇ, ವಿಧಾನಸಭೆ ಚುನಾವಣೆಯ ಎದುರಿಸಲಿದೆ. ಹೀಗಿದ್ದಾಗ ಆಂಧ್ರದ ತೆಲುಗು ಸ್ಟಾರ್ ಪವನ್ ಕಲ್ಯಾಣ್‌ಗೆ ರಾಮ್ ಗೋಪಾಲ್ ವರ್ಮಾ ಆಘಾತ ನೀಡಲು ಸಜ್ಜಾಗಿದ್ದಾರೆ.
ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ಪೀಠಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಅಂತಾ ಇದೀಗ ರಾಮ್ ಗೋಪಾಲ್ ವರ್ಮಾ ಘೋಷಣೆ ಮಾಡಿದ್ದಾರೆ. ಈ ಮೂಲಕವಾಗಿ ಜನಸೇನಾ ಪಕ್ಷದ ಮುಖ್ಯಸ್ಥ & ತೆಲುಗು ನಟ ಪವನ್ ಕಲ್ಯಾಣ್ ವಿರುದ್ಧವಾಗಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸ್ಪರ್ಧೆ ಮಾಡುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಇವರಿಬ್ಬರ ನಡುವೆ ಯಾಕಿಷ್ಟು ಫೈಟ್? ಪವನ್ ಕಲ್ಯಾಣ್ ವಿರುದ್ಧ ಸ್ಪರ್ಧೆ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಪವನ್ ಕಲ್ಯಾಣ್ VS ವರ್ಮಾ!
ಆಂಧ್ರ ಪ್ರದೇಶದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡುರ, ತೆಲುಗು ದೇಶಂ ಪಕ್ಷ (ಟಿಡಿಪಿ) & ಬಿಜೆಪಿ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿನ ಒಟ್ಟು 175 ಸೀಟು ಪೈಕಿ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ ಇದೀಗ 21 ಸೀಟುಗಳಲ್ಲಿ ಸ್ಪರ್ಧೆನ ನಡೆಸಲಿದೆ. ಟಿಡಿಪಿ 144 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದ 10 ಸ್ಥಾನ, ಬಿಜೆಪಿಗೆ ನೀಡಲಾಗಿದೆ. ಹೀಗಿದ್ದಾಗ ಇದೀಗ ಪವನ್ ಕಲ್ಯಾಣ್ ಸ್ಪರ್ಧೆ ಮಾಡಲಿರುವ ಕ್ಷೇತ್ರ, ಪೀಠಪುರಂ ವಿಧಾನಸಭಾ ಕ್ಷೇತ್ರದಿಂದ ರಾಮ್ ಗೋಪಾಲ್ ವರ್ಮಾ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗಿದೆ.
2014 ಕಲ್ಯಾಣ್ ಪಕ್ಷ ಸ್ಥಾಪನೆ!
ಲೋಕಸಭೆ ಚುನಾವಣೆ ವೇಳೆ ಆಂಧ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಪವನ್ ಕಲ್ಯಾಣ್ 2014ರಲ್ಲಿ ಜನ ಸೇನಾ ಪಕ್ಷ ಸ್ಥಾಪನೆ ಮಾಡಿದ್ದರು. ಆ ವರ್ಷದ ಸಾರ್ವತ್ರಿಕ ಚುನಾವಣೆ ವೇಳೆ, ಪವನ್ ಪಕ್ಷವು ಚುನಾವಣೆ ಎದುರಿಸದೆ ಟಿಡಿಪಿ & ಬಿಜೆಪಿ ಮೈತ್ರಿಕೂಟಕ್ಕೆ, ಬೆಂಬಲ ನೀಡಿತ್ತು. ಮತ್ತೊಂದು ಕಡೆ 2019 ಚುನಾವಣೆಯಲ್ಲಿ ಜನಸೇನಾ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆದರೆ ಹೀನಾಯ ಸೋಲು ಕಂಡಿತ್ತು. ಪವನ್ ಕಲ್ಯಾಣ್ 2 ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಹೀಗೆ ಆ ಸೋಲಿಗೆ ಉತ್ತರವಾಗಿ ಈಗ ಪವನ್ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಡಲು ಸಿದ್ಧತೆಯ ನಡೆಸಿದ್ದಾರೆ. ಈ ಸಮಯದಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶಾಕ್ ಕೊಟ್ಟಿದ್ದು, ಎಲ್ಲೆಲ್ಲೂ ಈ ಸುದ್ದಿ ವೈರಲ್ ಆಗುತ್ತಿದೆ. ಹಾಗಾದರೆ ವರ್ಮಾ ಹೇಳಿದ್ದೇನು? ಮುಂದೆ ಓದಿ.

ಇದೀಗ ತಮ್ಮ ಸ್ಪರ್ಧೆ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ದಿಢೀರ್ ನಿರ್ಧಾರ, ನಾನು ಪೀಠಂಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಗ್ಗೆ ತಿಳಿಸಲು ಖುಷಿ ಪಡುತ್ತೇನೆ' ಎಂದಿದ್ದಾರೆ. ಈ ಮೂಲಕ ಇಬ್ಬರ ನಡುವಿನ ತಿಕ್ಕಾಟ ಈಗ, ಮತ್ತಷ್ಟು ಜೋರಾಗಿರುವ ರೀತಿ ಕಾಣುತ್ತಿದೆ. ಈ ಮೊದಲಿನಿಂದ ರಾಮ್ ಗೋಪಾಲ್ ವರ್ಮಾ ಹಾಗೇ ಪವನ್ ಕಲ್ಯಾಣ್ ನಡುವೆ ಮುಸುಕಿನ ಗುದ್ದಾಟ ಇದ್ದೇ ಇದೆ.












Click it and Unblock the Notifications