Get Updates
Get notified of breaking news, exclusive insights, and must-see stories!

ನಟ ರಾಮ್‌ ಚರಣ್‌ನ ನೋಡಿ 'ಯಶ್‌.. ಯಶ್‌ ಭಾಯ್‌' ಎಂದು ಮುತ್ತಿಕೊಂಡ ಜನ, ವಿಡಿಯೋ ವೈರಲ್

ರಾಕಿಂಗ್‌ ಸ್ಟಾರ್‌ ಯಶ್‌ ಈಗ ಸ್ಯಾಂಡಲ್‌ವುಡ್‌ ನಟ ಮಾತ್ರವಲ್ಲ, ಕೆಜಿಎಫ್‌ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರ ಅಭಿನಯ, ಡೈಲಾಗ್‌, ಸ್ಟೈಲ್‌, ಲುಕ್‌ ಕೂಡ ಅಷ್ಟೇ ಜನಪ್ರಿಯತೆ ಪಡೆದುಕೊಂಡಿದೆ. ಅಭಿಮಾನಿಗಳು ಕೂಡ ಯಶ್‌ ಅವರ ಸ್ಟೈಲ್‌ ಅನ್ನು ಅನುಕರಣೆ ಮಾಡುತ್ತಲೇ ಬಂದಿದ್ದಾರೆ. ಸದ್ಯ ಇಡೀ ಭಾರತದ ಯಾವ ರಾಜ್ಯಕ್ಕೆ ಹೋದ್ರೂ ಯಶ್‌ ಅವರನ್ನು "ರಾಕಿ ಭಾಯ್‌" ಎಂದೇ ಗುರುತಿಸುತ್ತಾರೆ. ಆದರೆ ಅಚ್ಚರಿ ಎಂದರೆ ಟಾಲಿವುಡ್‌ನ ಸ್ಟಾರ್‌ ನಟ ರಾಮ್‌ ಚರಣ್‌ ಅವರನ್ನು ನೋಡಿದ ಅಭಿಮಾನಿಗಳು ಯಶ್‌ ಯಶ್‌ ಎಂದು ಕರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಟಾಲಿವುಡ್‌ನ ಟಾಪ್‌ ನಟರಲ್ಲಿ ಒಬ್ಬರಾದ ರಾಮ್‌ ಚರಣ್‌ ಕೂಡ RRR ಸಿನಿಮಾ ಬಳಿಕ ಪ್ಯಾನ್‌ ಇಂಡಿಯಾ ನಟರಾಗಿದ್ದಾರೆ. ಹೀಗಾಗಿ ಅವರಿಗೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಸದ್ಯ ಚರಣ್‌ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ರಾಮ್‌ ಚರಣ್‌ ಗೆಟಪ್‌ ಕೂಡ ಬದಲಾಗಿದೆ. ಇದರಿಂದಾಗಿ ಕೆಲವರು ರಾಮ್‌ ಚರಣ್‌ ಅವರನ್ನು ಯಶ್‌ ಎಂದು ತಪ್ಪಾಗಿ ಭಾವಿಸಿರುವ ಪ್ರಸಂಗವೊಂದು ನಡೆದಿದೆ.

Ram Charan Fans Chant Yash Mumbai Video Viral

ಯಶ್‌ ಲುಕ್‌ನಲ್ಲಿ ರಾಮ್‌ ಚರಣ್‌

ರಾಮ್‌ ಚರಣ್‌ ಇತ್ತೀಚೆಗೆ ಮುಂಬೈಗೆ ತೆರಳಿದ್ದಾಗ ಈ ಸಂಗತಿ ನಡೆದಿದೆ. ತಮ್ಮ ಕಾರಿನಲ್ಲಿ ಚರಣ್‌ ಕುಳಿತಿದ್ದನ್ನು ಕಂಡು ಅಲ್ಲಿದ್ದ ಕ್ಯಾಮರಾಮನ್‌ಗಳು ಹಾಗೂ ಕೆಲವರು ಯಶ್‌ ಎಂದು ಭಾವಿಸಿ ಆ ಕಾರನ್ನು ಆವರಿಸಿಕೊಂಡಿದ್ದಾರೆ. ಈ ವೇಳೆ ಯಶ್‌ ನೋಡು..ಯಶ್‌ ಭಾಯ್‌ ಎಂದು ಖುಷಿಯಿಂದ ಕಿರುಚಾಡಿದ್ದಾರೆ. ಕೆಲವರು ಯಶ್‌ ಎಂದು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಕೊನೆಗೆ ಅದು ರಾಮ್‌ ಚರಣ್‌ ಎಂದು ಸುಮ್ಮನಾಗಿದ್ದಾರೆ. ಇದರಿಂದ ರಾಮ್‌ಚರಣ್‌ ತುಸು ಮುಜುಗರಕ್ಕೀಡಾದರೂ ನಗುತ್ತಲೇ ಎಲ್ಲರತ್ತ ಕೈಬೀಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪೆದ್ದಿ ಸಿನಿಮಾದಲ್ಲಿ ರಾಮ್‌ಚರಣ್‌ ಅವರ ಹೇರ್‌ಸ್ಟೈಲ್‌ ಬಹುತೇಕ ಕೆಜಿಎಫ್‌ ಸಿನಿಮಾ ಯಶ್‌ ರೀತಿಯೇ ಇದೆ. ಚರಣ್‌ ಗಡ್ಡ ಕೂಡ ಯಶ್‌ ಅವರಂತೆಯೇ ಬೆಳೆಸಿರುವುದರಿಂದ ಈ ರೀತಿ ತಪ್ಪಾಗಿ ಭಾವಿಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಯಶ್‌ ಅವರ ಲುಕ್‌ ದೇಶದ ಜನರ ಮೇಲೆ ಪ್ರಭಾವ ಬೀರಿದೆ.

ಟಾಕ್ಸಿಕ್‌-ಪೆದ್ದಿ ಒಂದೇ ತಿಂಗಳಲ್ಲಿ ರಿಲೀಸ್‌

ಈ ವಿಡಿಯೋ ಹಂಚಿಕೊಂಡಿರುವ ಹಲವರು ಹಾಸ್ಯ ಕೂಡ ಮಾಡಿದ್ದಾರೆ. ಮಾರ್ಚ್‌ ತಿಂಗಳಲ್ಲೇ ರಾಮ್‌ಚರಣ್‌ ಅವರ ಪೆದ್ದಿ ಹಾಗು ನಟ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾಗಳು ರಿಲೀಸ್‌ ಆಗಲಿದ್ದು, ಪೆದ್ದಿ ಸಿನಿಮಾಗೆ ಹೋಗಿ ಅಲ್ಲೂ ಯಶ್‌ ಯಶ್‌ ಎಂದು ತಪ್ಪಾಗಿ ಭಾವಿಸಬೇಡಿ ಎಂದು ಜೋಕ್‌ ಮಾಡಿದ್ದಾರೆ. ಸಾಧ್ಯವಾದರೆ ಸಿನಿಮಾ ರಿಲೀಸ್‌ ದಿನಾಂಕವನ್ನು ಬದಲಾಯಿಸಿ ಎಂದು ಕಾಲೆಳೆದಿದ್ದಾರೆ. "ಟಾಕ್ಸಿಕ್‌" ಸಿನಿಮಾ ಮಾರ್ಚ್‌ 19ಕ್ಕೆ ತೆರೆ ಕಾಣಲಿದೆ. "ಪೆದ್ದಿ" ಸಿನಿಮಾ ಮಾರ್ಚ್‌ 27ಕ್ಕೆ ರಿಲೀಸ್‌ ಆಗಲಿದೆ.

ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ "ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್" ಗ್ಯಾಂಗ್‌ಸ್ಟರ್ ಚಿತ್ರವಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಯುಗಾದಿ ಹಬ್ಬದಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ಕನ್ನಡತಿ ರುಕ್ಮಿಣಿ ವಸಂತ್‌ ಸೇರಿದಂತೆ ಬಹುಭಾಷಾ ತಾರಾಗಣದೊಂದಿಗೆ, ಹಾಲಿವುಡ್ ತಂತ್ರಜ್ಞರು ಸಹ ಇದ್ದಾರೆ. ಹಲವು ವರ್ಷಗಳ ನಂತರ ಯಶ್‌ ಅವರ ಸಿನಿಮಾ ರಿಲೀಸ್‌ ಆಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯೂ ಹೆಚ್ಚಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+