ಕರಾವಳಿ ಪ್ರತಿಭೆ ರಕ್ಷಿತ್ ಶೆಟ್ಟಿ + ಹೊಂಬಾಳೆ ಸಿನಿಮಾ ಗ್ಯಾರಂಟಿ!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಕ್ಷಿತ್ ಶೆಟ್ಟಿ ಒಂಥರಾ ಸ್ಪೆಷಲ್. ಹೀಗಾಗಿಯೇ ಈ ನಟನ ಸಿನಿಮಾಗಳು ಕೂಡ ಸ್ಪೆಷಲ್ ಆಗಿಯೇ ಇರುತ್ತವೆ. ರಕ್ಷಿತ್ ಯಾವುದೇ ಕಥೆಗೆ ಕೈಹಾಕಿದರೂ ಅಲ್ಲಿ ಒಂದು ಭರ್ಜರಿ ರಿಸಲ್ಟ್ ಸಿಕ್ಕೇ ಸಿಗುತ್ತದೆ. ಇಂತಿಪ್ಪ ರಕ್ಷಿತ್ ಶೆಟ್ಟಿ ಅವರಿಗೆ 'ರಿಚರ್ಡ್ ಆಂಟನಿ' ಸಿನಿಮಾ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಗೆ ದುಡ್ಡು ಹಾಕೋದು ಪಕ್ಕಾ ಆಗಿತ್ತು, ಆದರೆ ಮಧ್ಯದಲ್ಲಿ ಇಲ್ಲ ಎನ್ನಲಾಗಿತ್ತು. ಹೀಗಿದ್ದಾಗಲೇ ಅಸಲಿ ಕಥೆ ಈಗ ರಿವೀಲ್ ಆಗಿದೆ.
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇಂದು ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಗೌರವ ಬರಲು ಹಲವು ಹಿರಿಯ ನಟ & ನಟಿಯರ ಶ್ರಮ ಸಾಕಷ್ಟು ಇದೆ. ಅದೇ ರೀತಿ ಆಧುನಿಕ ಕಾಲದಲ್ಲಿ ನಮ್ಮ ಸಿನಿಮಾ ಇಂಡಸ್ಟ್ರಿ ಇಷ್ಟು ದೊಡ್ಡ ಮಟ್ಟಕ್ಕೆ ಗೆದ್ದು ನಿಲ್ಲಲು ಹೊಸಬರ ಸಾಹಸವೂ ಕಾರಣವಾಗಿದೆ. ಅದರಲ್ಲೂ ನಟ ಯಶ್ ಹೀರೋ ಆಗಿದ್ದ ಕೆಜಿಎಫ್ ಸಿನಿಮಾ ಕನ್ನಡಿಗರಿಗೆ & ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ಗತ್ತು ನೀಡಿದೆ.

ಕೆಜಿಎಫ್ ಸಿನಿಮಾಗೆ ಬಂಡವಾಳ ಹಾಕಿದ್ದ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ರಕ್ಷಿತ್ ಶೆಟ್ಟಿ ಅವರ ಸಿನಿಮಾಗೂ ಹಣ ಹಾಕಲಿದೆ ಎನ್ನಲಾಗಿತ್ತು. ಈ ಸುದ್ದಿ ನಡುವೆ ಇಲ್ಲ, ಹೊಂಬಾಳೆ ಸಂಸ್ಥೆ ರಕ್ಷಿತ್ ಪ್ರಾಜೆಕ್ಟ್ ಕೈಬಿಟ್ಟಿದೆ ಎಂಬ ಗಾಳಿ ಸುದ್ದಿ ಕೂಡ ಓಡಾಡಿತ್ತು. ಆದರೆ ಅಸಲಿ ಸುದ್ದಿ ಇಲ್ಲಿದೆ! ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಫುಲ್ ಜೋಶ್‌ನಲ್ಲಿ ರಕ್ಷಿತ್ ಶೆಟ್ಟಿ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಯಶಸ್ಸಿನ ಅಲೆಯಲ್ಲಿದ್ದಾರೆ. ಹಾಗೇ, ಸಿನಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದ ʼಬ್ಯಾಚುಲರ್ ಪಾರ್ಟಿʼಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಿದ್ದಾಗ ರಕ್ಷಿತ್ ಶೆಟ್ಟಿ ವೃತ್ತಿ ಬದುಕಿನ ಡ್ರೀಮ್ ಪ್ರಾಜೆಕ್ಟ್ ʼರಿಚರ್ಡ್ ಆಂಟನಿʼ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ಈ ಸಿನಿಮಾಗೆ ಹೊಂಬಾಳೆ ಸಂಸ್ಥೆ ಹಣ ಹೂಡಿಕೆ ಮಾಡುವುದಿಲ್ಲ ಎನ್ನಲಾಗಿತ್ತು, ಆದರೆ ಈಗ ಹೊಂಬಾಳೆ ಸಂಸ್ಥೆಯೇ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಹಾಗಾದರೆ 'ರಿಚರ್ಡ್ ಆಂಟನಿ' ಶೂಟಿಂಗ್ ಶುರುವಾಗುವುದು ಯಾವಾಗಿಂದ?

ಮಾರ್ಚ್ 28ಕ್ಕೆ ಅದ್ಧೂರಿ ಸಮಾರಂಭ?
ಇನ್ನು ಈಗಿರುವ ಮಾಹಿತಿ ಪ್ರಕಾರ 'ರಿಚರ್ಡ್ ಆಂಟನಿ' ಸಿನಿಮಾಗೆ ಮಾರ್ಚ್ 28ಕ್ಕೆ ಅದ್ಧೂರಿ ಮುಹೂರ್ತ ಮಾಡಿ, ಶೂಟಿಂಗ್ ಶುರು ಮಾಡುವ ಪ್ಲ್ಯಾನ್ ಇದೆ ಎನ್ನಲಾಗಿದೆ. ಹಾಗೇ ಈ ಡೇಟ್‌ಗೆ ಸರಿಯಾಗಿ 10 ವರ್ಷದ ಹಿಂದೆ 'ಉಳಿದವರು ಕಂಡಂತೆ' ಸಿನಿಮಾ ರಿಲೀಸ್ ಆಗಿತ್ತು. ಇದೀಗ 10 ವರ್ಷಗಳ ನಂತರ 'ಉಳಿದವರು ಕಂಡಂತೆ' ಸಿನಿಮಾದ ಮುಂದುವರಿದ ಭಾಗ, 'ರಿಚರ್ಡ್ ಆಂಟನಿ' ಶೂಟಿಂಗ್ ಶುರು ಮಾಡಲು ಪ್ಲ್ಯಾನ್ ಮಾಡಲಾಗಿದೆಯಂತೆ. ಆದರೂ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಒಟ್ನಲ್ಲಿ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾಗೆ ಎಲ್ಲರೂ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಇದಕ್ಕೆಲ್ಲಾ ಉತ್ತರ ಸಿಗಲಿದೆ. ಹೀಗಾಗಿ ಇದಕ್ಕೆಲ್ಲಾ ಉತ್ತರ ಪಡೆಯೋದಕ್ಕೆ ನಾವು ಇನ್ನಷ್ಟು ದಿನಗಳ ಕಾಲ ಕಾಯಬೇಕಿದೆ. ಬಾಕ್ಸ್ ಆಫಿಸ್‌ನಲ್ಲಿ ಹಿನ್ನಡೆ ಕಂಡಿದೆ ಎಂಬ, ಮಾತುಗಳ ನಡುವೆಯೂ 'ಉಳಿದವರು ಕಂಡಂತೆ' ಸಿನಿಮಾ ಕನ್ನಡಿಗರ ಮನಸ್ಸು ಗೆದ್ದಿತ್ತು. ಆ ಸಿನಿಮಾದ ಹಾಡು, ಕಥೆ ಸೇರಿ ಪ್ರತಿ ವಿಭಾಗದಲ್ಲೂ ಗಮನ ಸೆಳೆದಿತ್ತು 'ಉಳಿದವರು ಕಂಡಂತೆ' ಸಿನಿಮಾ. ಹೀಗಾಗಿ ಉಳಿದವರು ಕಂಡಂತೆ ಮುಂದುವರಿದ ಭಾಗ 'ರಿಚರ್ಡ್ ಆಂಟನಿ' ಕುರಿತು ಇದೀಗ ಕುತೂಹಲ ಡಬಲ್ ಆಗಿದೆ. ಈ ಕುತೂಹಲಗಳಿಗೆ ಉತ್ತರ ರಕ್ಷಿತ್ ಅವರ ಸಿನಿಮಾ ನೀಡಲಿದೆ.












Click it and Unblock the Notifications