ರಾಕೇಶ್ ಪೂಜಾರಿ ರಿಟರ್ನ್ಸ್.. 1,25,00,00,000 ರೂಪಾಯಿ ಬಜೆಟ್ ಸಿನಿಮಾದಲ್ಲಿ ಮಿಂಚಿಂಗ್... Kantara Chapter-1
ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ನಟ & ನಟಿ ಸಾವಿನ ಸುದ್ದಿ ಸಂಚಲನ ಸೃಷ್ಟಿ ಮಾಡುತ್ತಿದೆ. ಅದ್ರಲ್ಲೂ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಜೀವ ಕಳೆದುಕೊಳ್ಳುವ ಕನ್ನಡದ ನಟ & ನಟಿಯರು ಅಭಿಮಾನಿಗಳ ಎದೆಯಲ್ಲಿ ನೋವಿನ ಜೊತೆಗೆ ಭಯವನ್ನೂ ಉಳಿಸಿ ಹೋಗುತ್ತಿದ್ದಾರೆ. ಹೀಗೆ ಕಳೆದ 4 ವರ್ಷಗಳಲ್ಲಿ ಭಯ ಮತ್ತಷ್ಟು ಹೆಚ್ಚಾಗುತ್ತಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಸಾವಿನ ಸೂತಕ ಕೂಡ ಹೆಚ್ಚಾಗ್ತಿದೆ ಅಂತಾ ಅಭಿಮಾನಿಗಳು ಕಂಬನಿ ಮಿಡಿಯುತ್ತಾ ನೋವು ತೋಡಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟಿ & ನಟರನ್ನು ಕಳೆದುಕೊಂಡು ಬೇಸರದಲ್ಲೇ ಇದ್ದಾರೆ. ಹೀಗಿದ್ದಾಗಲೇ, ರಾಕೇಶ್ ಪೂಜಾರಿ ರಿಟರ್ನ್ಸ್.. 1,25,00,00,000 ರೂಪಾಯಿ ಬಜೆಟ್ ಸಿನಿಮಾದಲ್ಲಿ ಮಿಂಚಿಂಗ್...
ಕನ್ನಡ ಸಿನಿಮಾ ರಂಗದ ಯುವ ತಾರೆಯಾಗಿ ಗಮನ ಸೆಳೆಯುತ್ತಿದ್ದ ರಾಕೇಶ್ ಪೂಜಾರಿ ದಿಢೀರ್ ಜೀವ ಬಿಟ್ಟಿದ್ದರು. ರಾಕೇಶ್ ಪೂಜಾರಿ ಘಟನೆ ಕನ್ನಡ ಸಿನಿಮಾ ರಂಗದಲ್ಲಿ ಭಯ & ಆಘಾತ ಉಂಟುಮಾಡಿತ್ತು, ಅಲ್ಲದೆ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ರಾಕೇಶ್ ಪೂಜಾರಿ ಅವರಿಗೆ ಈ ರೀತಿ ಆಗಿದ್ದು ಸಾಕಷ್ಟು ಜನರಿಗೆ ನೋವು ಕೂಡ ತರಿಸಿತ್ತು, ಅಲ್ಲದೆ ಇದೆಲ್ಲಾ ನಮ್ಮ ಇಂಡಸ್ಟ್ರಿಯಲ್ಲೇ ಆಗುತ್ತಿದೆಯಾ? ಅನ್ನೋ ಪ್ರಶ್ನೆ ಕೂಡ ಮೂಡಿತ್ತು. ಆದರೆ ಈ ಸಮಯದಲ್ಲೇ, ರಾಕೇಶ್ ಪೂಜಾರಿ ರಿಟರ್ನ್ಸ್...

ಕಾಂತಾರ ಸಿನಿಮಾದಲ್ಲಿ ರಾಕೇಶ್ ಮಿಂಚಿಂಗ್...
ಹೌದು, ನಟ ರಾಕೇಶ್ ಪೂಜಾರಿ ಅವರು ಇತ್ತೀಚೆಗೆ ಅಕಾಲಿಕ ಸಾವಿಗೆ ತುತ್ತಾಗಿದ್ದರು. ಇದೀಗ ಅವರು ನಟಿಸಿದ್ದ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದರಲ್ಲೂ ಕನ್ನಡಿಗರ ಕಾಂತಾರ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಮಿಂಚಿದ್ದಾರೆ. ಟ್ರೆಲರ್ ರಿಲೀಸ್ ಆಗಿದ್ದು, ಈ ಟ್ರೇಲರ್‌ನಲ್ಲಿ ರಾಕೇಶ್ ಪೂಜಾರಿ ಅವರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅಲ್ಲದೆ ಸಿನಿಮಾ ದೊಡ್ಡ ಹಿಟ್ ಆಗಿ ಇತಿಹಾಸ ನಿರ್ಮಿಸುವುದು ಗ್ಯಾರಂಟಿ ಅಂತಿದ್ದಾರೆ ಕನ್ನಡ ಅಭಿಮಾನಿಗಳು.
ಕನ್ನಡಿಗರ ಕಾಂತಾರ ಸಿನಿಮಾ ಅಬ್ಬರ
ಕನ್ನಡಿಗರ ಕಾಂತಾರ 3 ವರ್ಷಗಳ ನಂತರ ಮತ್ತೆ ಬಂದಿದೆ, ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿಯನ್ನೇ ಶತಕೋಟಿ ಭಾರತೀಯರ ಎದುರು ಇಡಲು ರಿಷಬ್ ಶೆಟ್ಟರು ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಕಾಂತಾರ ಸಿನಿಮಾ ನೋಡಲು ಕಾಯುತ್ತಿದ್ದ ಕೋಟಿ ಕೋಟಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಮಾಡಿ ಸಂಚಲನ ಸೃಷ್ಟಿಸಿದ್ದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ, ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಮುಂದೆ ನುಗ್ಗಿದೆ.












Click it and Unblock the Notifications