ರಾಜಾ-ರಾಣಿ ಶೋನಲ್ಲೇ ಬ್ರೇಕಪ್‌..?: ಸ್ಟೀವನ್‌ನಿಂದ ದೂರಾಗಲು ಅಸಲಿ ಕಾರಣ ತಿಳಿಸಿದ ಜಯಶ್ರೀ

ಕನ್ನಡ ಕಿರುತೆರೆಯ ರಾಜಾ-ರಾಣಿ ಶೋಗೆ ಬಂದಿದ್ದ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌ ದೂರಾಗಿದ್ದಾರೆ. ಸಂಗೀತ ನಿರ್ದೇಶಕ, ನಟ ಚಂದನ್‌ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ನಂತರ ರಾಜಾ-ರಾಣಿ ಶೋಗೆ ಬಂದು ದೂರಾದ ಎರಡನೇ ಜೋಡಿ ಇದಾಗಿದೆ. ಉದ್ಯಮಿಯಾಗಿದ್ದ ಜಯಶ್ರೀ ಆರಾಧ್ಯ ಬಿಗ್‌ ಬಾಸ್‌ ಮೂಲಕ ಮುಖ್ಯ ಭೂಮಿಕೆಗೆ ಬಂದಿದ್ದರು. ರಾಜಾ ರಾಣಿ ಶೋನಲ್ಲಿ ಎಲ್ಲರ ಸಮ್ಮುಖದಲ್ಲಿ ನಿಶ್ಚಿತಾರ್ಥದ ಮಾಡಿಕೊಂಡಿದ್ದ ಈ ಜೋಡಿ ಸದ್ಯ ದೂರಾಗಿದೆ.

ಸ್ಟೀವನ್‌ನಿಂದ ದೂರಾದ ಬಗ್ಗೆ ಸ್ವತಃ ಜಯಶ್ರೀ ಆರಾಧ್ಯ ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಸ್ಪಷ್ಟಪಡಿಸಿದ್ದರು. ಇದೀಗ ಸಂಬಂಧದಿಂದ ದೂರಾಗಿದ್ದು, ಯಾಕೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. 'ಯಾವುದೇ ಸಂಬಂಧ ಆಗಿರಬಹುದು ನಾವು ಸರಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅದು ಸರೀನೇ ಆಗಲ್ಲ ಅಂತಾ ಗೊತ್ತಾದ ಮೇಲೆ ದೂರ ಆಗಬೇಕು. ಜೀವನದಲ್ಲಿ ನಮಗಾಗಿ ಇನ್ನೊಂದು ಅವಕಾಶ, ಆಯ್ಕೆ ಇರುತ್ತದೆ ಹೀಗಾಗಿ ಮೂವ್ ಆನ್‌ ಆಗಿ. ನಾವು ತುಂಬಾ ಆತುರದಲ್ಲಿ ನಿರ್ಧಾರ ತೆಗೆದುಕೊಂಡು ಏನೋ ಮಾಡಿಕೊಳ್ಳುವ ಬದಲು ತಾಳ್ಮೆ ಇರಲಿ ಬದುಕು ಬ್ಯೂಟಿಫುಲ್‌ ಅನಿಸುತ್ತದೆ. ನನಗೂ ನೋವಾದಾಗ ನಾನು ಸುಮ್ಮನಿದ್ದಕ್ಕೆ ಇವತ್ತು ನನ್ನ ಜೀವನ ಚಂದ ಕಾಣಿಸುತ್ತಿದೆ' ಎಂದು ಜಯಶ್ರೀ ಹೇಳಿದ್ದಾರೆ.

Raja Rani Show Fame Jayashree Aradhya And Stivan Separated

'ಜೀವನದಲ್ಲಿ ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವುದು ತುಂಬಾ ಸತ್ಯ. ನಾನು ಅದನ್ನು ತುಂಬಾ ನಂಬುತ್ತೇನೆ. ನಾನು ಸೆಕೆಂಡ್‌ ಪಿಯುಸಿ ಪಾಸಾಗಿದ್ದರೆ ನಮ್ಮ ಅಪ್ಪ ನನಗೆ ಡಿಗ್ರಿ ಓದಿಸಿ ಯಾರಿಗಾದರೂ ಮದುವೆ ಮಾಡಿಕೊಡುತ್ತಿದ್ದರು. ನಾನು ಫೇಲ್‌ ಆಗಿದ್ದಕ್ಕೆ ನಮ್ಮ ತಂದೆ ನಾನು ನಿನ್ನನ್ನು ಸುಮ್ಮನೆ ಕೂರಿಸಲ್ಲ ಕೆಲಸಕ್ಕೆ ಹೋಗು ಅಂದಿರುವುದಕ್ಕೆ ನನಗೆ ಆ ಹಠ ಬಂದಿದ್ದು, ನಾನು ಅವತ್ತು ಫೇಲ್‌ ಆಗಿಲ್ಲ ಅಂದರೆ ಇವತ್ತು ನಾನು ಬ್ಯುಸಿನೆಸ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ' ಎಂದರು.

'ಜೀವನದಲ್ಲಿ ಆಗೋದೆಲ್ಲಾ ನಿಜವಾಗಿಯೂ ಒಳ್ಳೆಯದಕ್ಕೆ. ಜೀವನದಲ್ಲಿ ಎಲ್ಲಾ ಸಂದರ್ಭಗಳು ನಮಗೆ ಏನೋ ಒಂದು ಕಲಿಸಿ ಹೋಗುತ್ತದೆ. ನನಗೆ ಯಾವುದರ ಬಗ್ಗೆ ಪಶ್ಚಾತ್ತಾಪ ಕೂಡ ಇಲ್ಲ. ನನ್ನ ಜೀವನದಲ್ಲಿ ನಾನು ಮಾಡಿರುವ ತಪ್ಪು ಅಥವಾ ಸರಿಗಳಾಗಿರಬಹುದು, ಅದರ ಯಾವುದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಜೀವನದಲ್ಲಿ ಎಲ್ಲವೂ ಒಂದು ಪಾಠ ಎಂದುಕೊಂಡು ನಾವು ಮುಂದೆ ಹೋಗಬೇಕು' ಎಂದು ಜಯಶ್ರೀ ಹೇಳಿದರು.

Raja Rani Show Fame Jayashree Aradhya And Stivan Separated

'ಜೀವನದಲ್ಲಿ ಏನೇ ಆದರೂ ಕುಳಿತುಕೊಂಡು ಅಳುವುದು, ಬೇಜಾರು ಮಾಡಿಕೊಳ್ಳುವುದು, ಡಿಪ್ರೆಶನ್‌ಗೆ ಹೋಗುವುದು ಯಾವುದೂ ಕೂಡ ಉಪಯೋಗಕ್ಕೆ ಬರಲ್ಲ. ದೇವರು ನಮಗೆ ಅಂತಾ ಜೀವನ ಮಾಡಿ ಇಟ್ಟಿರುತ್ತಾನಂತೆ. ನಮ್ಮ ಜೀವನವನ್ನು ನಾವೇ ಮಾಡಿಕೊಳ್ಳಬೇಕು ಹಾಗಂತ ಆಗುವುದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹೀಗಿರುವಾಗ ಒಳ್ಳೆಯದು ಮಾಡಲು ನಮ್ಮ ಪ್ರಯತ್ನ ಇರಬೇಕು. ನನ್ನ ಬಗ್ಗೆ ಜನ ತಪ್ಪಾಗಿ ತಿಳಿದುಕೊಂಡರೂ ಪರವಾಗಿಲ್ಲ ನಾನು ಬೇಗ ಮೂವ್‌ ಆನ್ ಆಗುತ್ತೇನೆ' ಎಂದು ಜಯಶ್ರೀ ಆರಾಧ್ಯ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+