Pushpa-2: ಒಂದೊಂದಲ್ಲ ಅಣ್ಣ... ಒಂದೊಂದಲ್ಲ... ‘ಪುಷ್ಪ-2’ ನೋಡಿದ ಅಭಿಮಾನಿಗಳ ರಿಯಾಕ್ಷನ್!
ತೆಲುಗು ಸಿನಿಮಾ ರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾಗೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಇಂದು ಕುತೂಹಲದ ಸಮುದ್ರಕ್ಕೆ ಬೆಂಕಿ ಬಿದ್ದಂತೆ ಆಗಿದೆ. ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಇಂದು 'ಪುಷ್ಪ-2' ಸಿನಿಮಾ ಅದ್ಧೂರಿಯಾಗೇ ರಿಲೀಸ್ ಆಗಿದ್ದು, ಒಂದು ಕಡೆ ಕಾಲರ್ ಮೇಲೆ ಎತ್ತಲು ಕಾಯುತ್ತಿದ್ದ ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗೆ ಆಘಾತ ಸಿಕ್ಕಂತಾಗಿದೆ! ಇಂತಹ ಸಮಯದಲ್ಲೇ, ಒಂದೊಂದಲ್ಲ ಅಣ್ಣ... ಒಂದೊಂದಲ್ಲ... 'ಪುಷ್ಪ-2' ನೋಡಿದ ಅಭಿಮಾನಿಗಳ ರಿಯಾಕ್ಷನ್...
ಅಂದಹಾಗೆ ನಿಮಗೆಲ್ಲಾ ಗೊತ್ತಿರುವ ರೀತಿ 'ಪುಷ್ಪ-2' ಸಿನಿಮಾಗೆ ರಿಲೀಸ್‌ಗೂ ಮೊದಲೇ ಭಾರಿ ದೊಡ್ಡ ಮಟ್ಟದಲ್ಲಿ ಹೈಪ್ ಕೊಡಲಾಗಿತ್ತು. ಹೀಗೆ ಹೈಪ್ ಕೊಡುವ ಜೊತೆಗೆ 'ಪುಷ್ಪ-2'ಗೆ ದೊಡ್ಡ ಗೆಲುವು ಗ್ಯಾರಂಟಿ ಅಂತಾ ಕೂಡ ಅಲ್ಲು ಅರ್ಜುನ್ ಅಭಿಮಾನಿಗಳು ಹೇಳುತ್ತಿದ್ದರು. ಆದರೆ 'ಪುಷ್ಪ-2' ಸಿನಿಮಾ ರಿಲೀಸ್ ಆದ ನಂತರ ಬಂಡವಾಳ ಬಯಲಾಗುತ್ತಿದೆ ಅಂತಿದ್ದಾರೆ ಕನ್ನಡ ಸಿನಿಮಾ ಪ್ರೇಕ್ಷಕರು. ಈ ಸಮಯದಲ್ಲೇ, ಒಂದೊಂದಲ್ಲ ಅಣ್ಣ... ಒಂದೊಂದಲ್ಲ... ಡೈಲಾಗ್ ಮತ್ತೆ ವೈರಲ್ ಆಗುತ್ತಿದೆ! ಯಾಕೆ ಗೊತ್ತಾ? ಮುಂದೆ ಓದಿ.

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಆಘಾತ?
'ಪುಷ್ಪ-2' ಸಿನಿಮಾ ಮಕಾಡೆ ಮಲಗಿದೆ & ನೋಡೋದಕ್ಕೆ ಧಾರಾವಾಹಿ ಅಂದ್ರೆ ಸೀರಿಯಲ್ ಥರನೇ ಇದೆ ಅಂತಾ ಪ್ರೇಕ್ಷಕರು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ 'ಪುಷ್ಪ-2' ಸಿನಿಮಾ ಬಗ್ಗೆ ಸರಿ ಇಲ್ಲ ಅನ್ನೋ ವಿಮರ್ಶೆ ವಿಡಿಯೋಗಳ ನಡುವೆ, ಒಂದೊಂದಲ್ಲ ಅಣ್ಣ... ಒಂದೊಂದಲ್ಲ... ಡೈಲಾಗ್‌ನ ಮಿಕ್ಸ್ ಮಾಡಿ ಸಿನಿಮಾ ನೋಡಿದ ಫ್ಯಾನ್ಸ್ ಹೇಳಿಕೆಗಳ ಜೊತೆಗೆ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಈಗ ಟ್ರೋಲ್ ಮಾಡಲಾಗುತ್ತಿದೆ.
100 ಕೋಟಿ ರೂಪಾಯಿ ಕಲೆಕ್ಷನ್?
ಕೂಸು ಹುಟ್ಟೋದಕ್ಕೂ ಮೊದಲೇ ಕುಲಾವಿ ಹೊಲಿಸಿದರು ಅನ್ನೋ ರೀತಿಯಲ್ಲೇ 'ಪುಷ್ಪ-2'ಗೆ ಕೂಡ ಹೆಚ್ಚಾಗಿ ಬಿಲ್ಡಪ್ ನೀಡಿ, ಈಗ ಪುಷ್ಪ-2 ಸಿನಿಮಾ ಮಕಾಡೆ ಮಲಗಿದೆ ಎಂಬ ಆರೋಪ ಕೇಳಿ ಬಂದಿದೆ. 'ಪುಷ್ಪ-2' ಸಿನ್ಮಾ ಬಗ್ಗೆ ಚರ್ಚೆ ಕೆಲ ದಿನಗಳಿಂದ ಬಲು ಜೋರಾಗಿ ನಡೆದಿತ್ತು.
'ಪುಷ್ಪ-2' ಸಿನಿಮಾ ಅಷ್ಟು ಕಾಸು ಮಾಡುತ್ತೆ... ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತೆಲ್ಲಾ ಜೋರು ಚರ್ಚೆ ನಡೆದವು. ಹೀಗಿದ್ದಾಗಲೇ, ಪುಷ್ಪ-2 ಮೊದಲ ದಿನವೇ 100 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್ ಮಾಡಿದೆ ಅಂತಾ, ಅಲ್ಲು ಅರ್ಜುನ್ ಅಭಿಮಾನಿಗಳು ವಾದ ಮಾಡುತ್ತಿದ್ದರೆ. ಆದರೆ ಈ ಸಿನಿಮಾ ಅಷ್ಟೊಂದು ದುಡ್ಡು ಮಾಡಿಲ್ಲ ಅಂತಾ ಕೂಡ ಇದೀಗ ವಾದ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?
'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.












Click it and Unblock the Notifications