Pushpa 2: ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2
ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಮುಂಬರುವ ಚಿತ್ರ 'ಪುಷ್ಪ 2' ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ. ಅವರ ಈ ಚಿತ್ರ 15 ಆಗಸ್ಟ್ 2024 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಟೀಸರ್ ಮೂಲಕ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಹೌದು... ಅಲ್ಲು ಅರ್ಜುನ್ ಸಿನಿಮಾ ಅಂದ್ರನೇ ಹಾಗೆ. ಕಥೆಯಿಂದ ಹಿಡಿದು ಸಿನಿಮಾ ರಿಲೀಸ್ ಆಗೋವರೆಗೂ ಅಭಿಮಾನಿಗಳ ಕುತೂಹಲವನ್ನು ಹಿಡಿದಿಟ್ಟುಕೊಂಡಿರುತ್ತೆ. ಸದ್ಯ ಪುಷ್ಪ 2 ಆಡಿಯೋ ಹಕ್ಕನ್ನು ಪ್ರತಿಷ್ಠಿತ ಟಿ-ಸೀರೀಸ್ 60 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಇದಲ್ಲದೆ ಚಿತ್ರದ ಒಟಿಟಿ ಹಕ್ಕು ನೆಟ್‌ಫ್ಲಿಕ್ಸ್‌ಗೆ 100 ಕೋಟಿ ರೂಪಾಯಿಗೆ ಮಾರಟವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಪ್ರಕಟಿಸಬೇಕಿದೆ.

ಇನ್ನೂ ಚಿತ್ರದಲ್ಲಿ ಅಲ್ಲು ಅರ್ಜುನ್ ಗಂಗಮ್ಮ ತಲ್ಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಒಂದು ಸೀನ್‌ಗಾಗಿ ನಿರ್ಮಾಪಕರು 60 ಕೋಟಿ ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ. ಆರು ನಿಮಿಷಗಳ ಈ ಸೀನ್ ಅನ್ನು ಸುಮಾರು ಒಂದು ತಿಂಗಳು ಚಿತ್ರೀಕರಿಸಲಾಗಿದೆ. ಇದಕ್ಕಾಗಿ ವಿಶೇಷ ಸೆಟ್ ನಿರ್ಮಿಸಲಾಗಿತ್ತು ಎಂದು ವರದಿಯಾಗಿದೆ. ಹೀಗಾಗಿ ಈ ಸಿನಿಮಾ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಅಲ್ಲು ಅರ್ಜುನ್ ಹುಟ್ಟುಹಬ್ಬ
ತೆಲುಗು ಅಲ್ಲದೆ, 'ಪುಷ್ಪ ದಿ ರೈಸ್' ಚಿತ್ರದ ಹಾಡುಗಳು ಹಿಂದಿ ಮತ್ತು ತಮಿಳಿನಲ್ಲೂ ಹಿಟ್ ಆಗಿದ್ದವು. ಈಗ 'ಪುಷ್ಪ-ದಿ ರೂಲ್' ಸಂಗೀತದ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಕಂಡು ಬರುತ್ತಿದೆ. 'ಪುಷ್ಪ 2' ನ ಟೀಸರ್ ಅನ್ನು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಅಂದರೆ 8 ಏಪ್ರಿಲ್ 2024 ರಂದು ಬಿಡುಗಡೆ ಮಾಡಲಾಗಿದೆ.

ಅಲ್ಲು ಅರ್ಜುನ್ ಸೀರೆ ಮತ್ತು ಘುಂಗ್ರು
ಚಿತ್ರದ ಟೀಸರ್‌ನಲ್ಲಿ, ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಅಲಿಯಾಸ್ ಡಿಎಸ್‌ಪಿ ಅವರ ಬೀಟ್‌ಗಳಿಗೆ ನೃತ್ಯ ಮಾಡುವಾಗ ಅಲ್ಲು ಅರ್ಜುನ್ ಸೀರೆ ಮತ್ತು ಘುಂಗ್ರು ಧರಿಸಿರುವ ವಿಭಿನ್ನ ನೋಟವನ್ನು ಜನರು ನೋಡಿದ್ದಾರೆ. ಟೀಸರ್‌ನಲ್ಲಿರುವ ಸಂಗೀತ ಸಂಯೋಜಕ ಡಿಎಸ್‌ಪಿ ಅವರ ಟ್ಯೂನ್ ಅನ್ನು ಜನರು ಇಷ್ಟಪಡುತ್ತಿದ್ದಾರೆ.
'ಪುಷ್ಪ 2' ಚಿತ್ರದ ಪವರ್‌ಫುಲ್ ಟೀಸರ್
'ಪುಷ್ಪ 2' ಚಿತ್ರದ ಈ ಪವರ್ ಫುಲ್ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ತಕ್ಷಣ ಕೆಲವೇ ಗಂಟೆಗಳಲ್ಲಿ ಅತಿ ವೇಗದ ಲೈಕ್ ಪಡೆದ ಚಿತ್ರದ ಟೀಸರ್ ಎಂಬ ದಾಖಲೆ ಸೃಷ್ಟಿಸಿದೆ. ಹಿಂದಿನ ಚಿತ್ರದಂತೆ ಈ ಬಾರಿಯೂ ಅಲ್ಲು ಅರ್ಜುನ್ ಜೊತೆ ದಕ್ಷಿಣದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಮಲಯಾಳಂ ಚಿತ್ರರಂಗದ ಅದ್ಭುತ ನಟ ಫಹದ್ ಫಾಸಿಲ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.











Click it and Unblock the Notifications