Pushpa-2: ಕನ್ನಡಿಗರ ‘ಕೆಜಿಎಫ್’ ತಂಟೆಗೆ ಬಂದಿದ್ದ ‘ಪುಷ್ಪ-2’ ಹೀನಾಯವಾಗಿ ಸೋಲು ಕಾಣಲು...
ಕನ್ನಡ ಸಿನಿಮಾಗಳ ಗತ್ತು ಜಗತ್ತಿಗೇ ಗೊತ್ತು, ಅದರಲ್ಲೂ ಕನ್ನಡಿಗರ 'ಕೆಜಿಎಫ್' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಕಂಡಿತ್ತು. ಕನ್ನಡಿಗರ 'ಕೆಜಿಎಫ್' ಸಿನಿಮಾ ಯುರೋಪ್ ಸೇರಿ, ಅಮೆರಿಕ, ಆಸ್ಟ್ರೇಲಿಯಾ... ಹೀಗೆ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು. ಈಗಲೂ ಕನ್ನಡ ಸಿನಿಮಾಗಳ ಬಗ್ಗೆ ಪ್ರಪಂಚದ ಮೂಲೆ ಮೂಲೆಯಲ್ಲೂ ಜನರು ಹೆಮ್ಮೆಯಿಂದ ಮಾತನಾಡಲು 'ಕೆಜಿಎಫ್' ಕಾರಣ ಎಂಬ ಮಾತು ಇದೆ. ಹೀಗಿದ್ದಾಗಲೇ, ಕನ್ನಡಿಗರ 'ಕೆಜಿಎಫ್' ತಂಟೆಗೆ ಬಂದಿದ್ದ 'ಪುಷ್ಪ-2' ಹೀನಾಯವಾಗಿ ಸೋಲು ಕಾಣಲು...
ಕನ್ನಡ ಸಿನಿಮಾಗಳಿಗೆ ದೊಡ್ಡ ವೇದಿಕೆ ಒದಗಿಸಿಕೊಟ್ಟು ಜಗತ್ತಿನಾದ್ಯಂತ ಮಿಂಚುವಂತೆ ಮಾಡಿ, ಸಂಚಲನ ಸೃಷ್ಟಿಸಿದ್ದ ಕೀರ್ತಿ 'ಕೆಜಿಎಫ್' ಸರಣಿಗೆ ಸಲ್ಲುತ್ತೆ. ಯಾಕಂದ್ರೆ 'ಕೆಜಿಎಫ್ ಚಾಪ್ಟರ್ 1' ಮತ್ತು 'ಕೆಜಿಎಫ್ ಚಾಪ್ಟರ್ 2' ಅಂತಹ ಸಾಧನೆ ಮಾಡಿತ್ತು. ಆದರೆ 'ಪುಷ್ಪ-1' ಬಿಡುಗಡೆ ಸಮಯದಲ್ಲಿ ಯಾರೋ ಒಬ್ಬರು ತೆಲುಗು ಸಿನಿಮಾ ಇಂಡಸ್ಟ್ರಿಯ ಮಹಾಶಯ 10 ಕೆಜಿಎಫ್ ಸಿನಿಮಾ ಎದುರು ಒಂದೇ 1 'ಪುಷ್ಪ' ಸಿನಿಮಾ ಸಮ ಅಂತಾ ಬಿಲ್ಡಪ್ ಕೊಟ್ಟಿದ್ದರು. ಆಗಲೇ ನೋಡಿ 'ಪುಷ್ಪ' ಸಿನಿಮಾದ ಪುಷ್ಪನಿಗೂ, ಕೆಜಿಎಫ್ ಸಿನಿಮಾದ ರಾಕಿಭಾಯ್‌ಗೂ ಬೆಂಕಿಯೇ ಹೊತ್ತಿಕೊಂಡಿದ್ದು!

ಕನ್ನಡಿಗರು & ತೆಲುಗು ಭಾಷಿಕರ ನಡುವೆ...
ತೆಲುಗು & ಕನ್ನಡ ಎರಡೂ ಸಹೋದರ ಭಾಷೆಗಳು. ಹಾಗೇ ತೆಲುಗು & ಕನ್ನಡದ ನಡುವೆ ಸಾಕಷ್ಟು ಸಾಮ್ಯತೆ ಇದೆ. ತೆಲುಗು ಸಿನಿಮಾ ಇಂಡಸ್ಟ್ರಿಗೆ ಕರ್ನಾಟಕದ ನೆಲದಲ್ಲಿ ಭಾರಿ ದೊಡ್ಡ ನೆಲೆ ನೀಡಿ ಗೌರವಿಸುತ್ತಾರೆ ಕನ್ನಡಿಗರು. ಅಲ್ಲದೆ ತೆಲುಗು & ಕನ್ನಡ ಭಾಷಿಕರು ಒಟ್ಟಾಗಿ & ಒಗ್ಗಟ್ಟಿನಿಂದ ಜೀವನ ಕೂಡ ನಡೆಸುತ್ತಿದ್ದಾರೆ.
ಹೀಗಿದ್ದಾಗಲೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ತಾನೆ ಬೆಳೆಯುತ್ತಿರುವ ಒಬ್ಬ ನಿರ್ದೇಶಕ 10 ಕೆಜಿಎಫ್ ಸಿನಿಮಾ ಎದುರು ಒಂದೇ 1 'ಪುಷ್ಪ' ಸಿನಿಮಾ ಸಮ ಅಂತ ಬಿಲ್ಡಪ್ ಕೊಟ್ಟಿದ್ದರು. ಈ ಮೂಲಕ ತೆಲುಗು & ಕನ್ನಡ ಸಿನಿಮಾಗಳ ನಡುವೆ ವಿವಾದ ಎಬ್ಬಿಸಲು ಪ್ರಯತ್ನ ಮಾಡಿದ್ದ ಆರೋಪ ಕೇಳಿ ಬಂದಿತ್ತು.
ಇದೆಲ್ಲದಕ್ಕಿಂತ ಹೆಚ್ಚಾಗಿ 'ಕೆಜಿಎಫ್' ರಾಕಿಭಾಯ್ ಯಶ್ ಅವರ ಅಭಿಮಾನಿಗಳು & ಕನ್ನಡಿಗರು ಈ ಹೇಳಿಕೆ ವಿರುದ್ಧ ರೊಚ್ಚಿಗೆದ್ದಿದ್ದರು. ಈಗ ಅಲ್ಲು ಅರ್ಜುನ್ ಅವರ 'ಪುಷ್ಪ-2' ಸಿನಿಮಾ ಹೀನಾಯವಾಗಿ ಸೋಲು ಕಾಣಲು, ಕೆಜಿಎಫ್ ಬಗ್ಗೆ ಮಾತನಾಡಿದ್ದು ಕೂಡ ಒಂದು ಕಾರಣ ಎಂಬ ಆರೋಪ ಕೇಳಿ ಬಂದಿದೆ!
ಸಹೋದರ ಭಾಷೆಗಳ ನಡುವೆ ಏನಿದು ಜಗಳ?
ಒಟ್ನಲ್ಲಿ ಕನ್ನಡ & ತೆಲುಗು ಎರಡೂ ಸಹೋದರ ಭಾಷೆಗಳು. ಸಾವಿರಾರು ವರ್ಷಗಳ ಹಿಂದೆ ಕನ್ನಡ & ತೆಲುಗು ಭಾಷಿಕರು ಒಂದೇ ತಾಯಿಯ ಮಕ್ಕಳಾಗಿದ್ದರು. ಆದರೆ ಈಗ ಬೇರೆ ಬೇರೆ ಭಾಷೆಗಳೇ ಆಗಿದ್ದರೂ ಇಬ್ಬರ ನಡುವೆ ಸಹ ಜೀವನ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕೂಡ ಯಾರೋ ಸಿನಿಮಾ ಹೆಸರು ಹೇಳಿ ಈ ರೀತಿಯಾಗಿ ಕನ್ನಡ ಸಿನಿಮಾ ಕೆಜಿಎಫ್ ಕುರಿತು ಮಾತನಾಡಿದ್ದು ಸರಿ ಇಲ್ಲ, ಅಂತಾ ಆರೋಪ ಮಾಡುತ್ತಿದ್ದಾರೆ ಕನ್ನಡ ಸಿನಿಮಾ ಪ್ರೇಕ್ಷಕರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?
'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.












Click it and Unblock the Notifications