Puneeth Rajkumar: ಕಾಣೆಯಾಗಿದ್ದಾರೆ ಪ್ರೀತಿಯ ಪುನೀತ್ ರಾಜ್‌ಕುಮಾರ್.. ಹುಡುಕಿ ಕೊಟ್ಟವರಿಗೆ ಜಗತ್ತಿನಲ್ಲೇ ಸಿಗದಷ್ಟು...
ಪುನೀತ್ ರಾಜ್‌ಕುಮಾರ್... ಈ ಹೆಸರಿಗೆ ಇರುವ ತಾಕತ್ತು ಯಾವ ಮುಖ್ಯಮಂತ್ರಿಗೂ ಇಲ್ಲ... ಯಾವುದೇ ದೇಶದ ಅಧ್ಯಕ್ಷನಿಗೂ ಇಲ್ಲ... ಯಾಕಂದ್ರೆ ಅಪ್ಪನಂತೆ ಮಗ ಅಂತಾ ಜನ ಮಾತಾಡುವ ಸಮಯದಲ್ಲೇ ಅಪ್ಪನನ್ನೇ ಮೀರಿಸಿದ ಮಗನಾಗಿ ನಿಂತವರು ನಮ್ಮ ಅಪ್ಪು. ಆದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ದಿಢೀರ್ ಮೃತಪಟ್ಟರು. ಸರಿಯಾಗಿ ನಾಳೆಗೆ 3 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಹೃದಯಾಘಾತ ತಂದಿತ್ತು. ಹೀಗಿದ್ದಾಗ, ಕಾಣೆಯಾಗಿದ್ದಾರೆ ಪ್ರೀತಿಯ ಪುನೀತ್ ರಾಜ್‌ಕುಮಾರ್.. ಹುಡುಕಿ ಕೊಟ್ಟವರಿಗೆ ಜಗತ್ತಿನಲ್ಲೇ ಸಿಗದಷ್ಟು...
ಅದು ಅಕ್ಟೋಬರ್ 29, 2021... ಆ ದಿನ ಕನ್ನಡಿಗರ ಎದೆಯಲ್ಲಿ ಸದಾ ನೋವಿನ ದಿನವಾಗಿಯೇ ಉಳಿಯಲಿದೆ. ಯಾಕಂದ್ರೆ ಆ ದಿನ ಕನ್ನಡಿಗರ ಪಾಲಿನ ಪ್ರೀತಿಯ ನಟ ಪುನೀತ್ ರಾಜ್‌ಕುಮಾರ್ ಕೊನೆಯುಸಿರು ಎಳೆದಿದ್ದರು. ಹೀಗೆ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಪವರ್ ಸ್ಟಾರ್ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಎದೆ ಬಿರಿಯುವಂತೆ ಮಾಡಿತ್ತು. ಹೀಗಿದ್ದಾಗ ನಾಳೆಗೆ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ ಸರಿಯಾಗಿ 3 ವರ್ಷ ತುಂಬಲಿದೆ. ಹೀಗಾಗಿ, ಇದೀಗ ಅಪ್ಪು ಅಭಿಮಾನಿಗಳು.. ಕಾಣೆಯಾಗಿದ್ದಾರೆ ಪ್ರೀತಿಯ ಪುನೀತ್ ರಾಜ್‌ಕುಮಾರ್.. ಹುಡುಕಿ ಕೊಟ್ಟವರಿಗೆ ಜಗತ್ತಿನಲ್ಲೇ ಸಿಗದಷ್ಟು...

ಕಾಣೆಯಾಗಿದ್ದಾರೆ ಪ್ರೀತಿಯ ಪುನೀತ್...
ಪವರ್ ಸ್ಟಾರ್ ಪುನೀತ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಅಪ್ಪು ಇಷ್ಟ. ಯಾಕೆ ಅಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡಿದು ಗಂಧದ ಗುಡಿ ತನಕ ಈ ನಟನ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಹೀಗಿದ್ದಾಗಲೇ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನ ಅಂದರೆ, ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿ 3 ವರ್ಷ ಕಳೆಯುತ್ತಿದೆ ಇಂತಹ ಸಮಯದಲ್ಲೇ ಅಪ್ಪು ಅಭಿಮಾನಿಗಳು ಒಂದು ಬೇಡಿಕೆ ಇಟ್ಟಿದ್ದಾರೆ.
ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕಾಣೆಯಾಗಿದ್ದಾರೆ, ಅಪ್ಪು ಅವರನ್ನ ಹುಡುಕಿಕೊಟ್ಟ ಯಾರೇ ಆಗಿದ್ದರೂ ಅವರಿಗೆ ಇಡೀ ಜಗತ್ತಿನಲ್ಲಿ ಸಿಗದಷ್ಟು ಪ್ರೀತಿ ಕೊಡಲಾಗುವುದು ಎಂಬ ಪೋಸ್ಟ್‌ಗಳನ್ನ ಶೇರ್ ಮಾಡಲಾಗುತ್ತಿದೆ. ಹಾಗೇ ಅಭಿಮಾನಿಗಳು ಮತ್ತೊಮ್ಮೆ ಈ ಪೋಸ್ಟ್ & ವಿಡಿಯೋಗಳನ್ನ ನೋಡುತ್ತಾ ಅಪ್ಪು ಅವರ ನೆನಪು ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಕಣ್ಣೀರು ಹಾಕಿ ಮತ್ತೆ ಹುಟ್ಟಿಬನ್ನಿ ಎಂಬ ಬೇಡಿಕೆ ಇಡುತ್ತಿದ್ದಾರೆ.
ನೋವು ಮರೆಯಲು ಶತಮಾನ ಬೇಕು
ಒಟ್ನಲ್ಲಿ ಅಪ್ಪು ಅವರು ಇಂದು ನಮ್ಮ ಜೊತೆಗೆ ಇಲ್ಲ ನಿಜ, ಆದರೆ ಅವರ ನೆನಪುಗಳು ಉಳಿದಿವೆ. ಅಪ್ಪು... ಅಪ್ಪು... ಅಪ್ಪು... ಇದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಬಾಯಲ್ಲಿ ಬರುವ ಏಕೈಕ ಪದ ಎನ್ನಬಹುದು. ಯಾಕಂದ್ರೆ ದಿವಂಗತ ಪುನೀತ್ ಅವರನ್ನು ಫ್ಯಾನ್ಸ್ ಅಷ್ಟು ಪ್ರೀತಿ ಮಾಡ್ತಾರೆ. ಅಪ್ಪು ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಾವನ್ನ ಇಡೀ ಭಾರತ ಆಘಾತದಿಂದ ಸ್ವೀಕಾರ ಮಾಡಿತ್ತು. ಆ ನೋವು ಮರೆಯಾಗಲು ಮತ್ತಷ್ಟು ಶತಮಾನವೇ ಬೇಕು ಅಂತಾ ಕಾಣುತ್ತಿದೆ.












Click it and Unblock the Notifications