ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ಸೈಕಲ್ ಅನುಶ್ರೀ ಮನೆಯಲ್ಲಿ- ಕೊಟ್ಟಿದ್ದು ಯಾರು? ಯಾಕೆ?
ಪುನೀತ್ ರಾಜ್‌ಕುಮಾರ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ದೊಡ್ಮನೆಯ ಕುಡಿ ಡಾ.ರಾಜ್‌ಕುಮಾರ್ ಅವರ ಮುದ್ದಿನ ಕಿರಿಯ ಮಗ ಅಪ್ಪುಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅಪ್ಪು ಅಪ್ಪುಗೆ, ನಗೆ, ಅಭಿನಯ, ಮಾತು, ನೃತ್ಯ ಎಲ್ಲವೂ ಕೂಡ ಮೆಚ್ಚಿಕೊಳ್ಳುವ ಜನರು ಇಂದಿಗೂ ಇದ್ದಾರೆ. ಅಪ್ಪು ಚಿತ್ರವನ್ನು ಕೈ ಹಾಗೂ ಎದೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡು ನನ್ನ ಅಪ್ಪು ಎನ್ನುವ ಅಭಿಮಾನಿ ದೇವರುಗಳು ಸಾಕಷ್ಟು ಇದ್ದಾರೆ. ಆ್ಯಂಕರ್ ಅನುಶ್ರೀ ಕೂಡ ಅಪ್ಪು ಅವರ ಅಪ್ಪಟ ಅಭಿಮಾನಿ. ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ಸೈಕಲ್ ಅನುಶ್ರೀ ಮನೆಯಲ್ಲಿದೆ. ಇದನ್ನು ಅನುಶ್ರೀಗೆ ಕೊಟ್ಟಿದ್ದು ಯಾರು? ಯಾಕಾಗಿ ಕೊಟ್ಟರು ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷ ಕಳೆದಿವೆ. ಆದರೂ ಅಭಿಮಾನಿಗಳ ಮನದಲ್ಲಿ ಅಪ್ಪು ಮಾಸಿಲ್ಲ. ಅವರು ಸಿನಿಮಾ, ಹಾಡು, ನೃತ್ಯ, ಡೈಲಾಗ್ ಎಲ್ಲದರ ಮೂಲಕ ಅಭಿಮಾನಿಗಳ ಮನದಲ್ಲಿ ಅಪ್ಪು ನೆನಪು ಹಸಿರಾಗಿದೆ. ಅಪ್ಪು ಅವರು ದೈಹಿಕವಾಗಿ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದ ದೇವಸ್ಥಾನದಲ್ಲಿ ದೇವರಾಗಿದ್ದಾರೆ. ಅಪ್ಪು ಮೇಲಿನ ಪ್ರೀತಿ ಮಾತ್ರ ಅಭಿಮಾನಿಗಳಿಗೆ ಕಿಂಚಿತ್ತು ಕೂಡ ಕಡಿಮೆ ಆಗಿಲ್ಲ.

ಇಂತಹ ಸಹಸ್ರ ಅಪ್ಪು ಅಭಿಮಾನಿಗಳ ಸಾಲಿನಲ್ಲಿ ಆ್ಯಂಕರ್ ಅನುಶ್ರೀ ಕೂಡ ಒಬ್ಬರು. ಅನುಶ್ರೀ ಅವರಿಗೆ ಪುನೀತ್ ರಾಜ್‌ಕುಮಾರ್ ಅಂದರೆ ಪಂಚಪ್ರಾಣ. ಅವರ ಪ್ರತಿಯೊಂದು ಸಿನಿಮಾವನ್ನು ಅನುಶ್ರೀ ನೋಡಿದ್ದಾರೆ. ಅವರ ಹಾಡುಗಳು, ನೃತ್ಯ ಅಂದರೆ ಅನುಶ್ರೀ ಅವರಿಗೆ ತುಂಬಾ ಪ್ರೀತಿ. ಸಹಾಯದ ಗುಣ ಇರುವ ಅಪ್ಪು ಅನುಶ್ರೀಗೆ ಅಚ್ಚುಮೆಚ್ಚಿನ ನಟ. ಅಲ್ಲದೆ ಅಪ್ಪು ಹುಟ್ಟುಹಬ್ಬ ಬಂದರೆ ಅನುಶ್ರೀ ತಮ್ಮ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ನಲ್ಲಿ ಅಪ್ಪು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅಲ್ಲದೆ ಅನುಶ್ರೀ ನಿರೂಪಣೆಯನ್ನು ಪುನೀತ್ ರಾಜ್‌ಕುಮಾರ್ ಅವರು ನೋಡಿದ್ದಾರೆ. ಹಲವಾರು ಬಾರಿ ಕಾರ್ಯಕ್ರಮಗಳಲ್ಲಿ ಅನುಶ್ರೀ ಅಪ್ಪು ಅವರನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಹಲವಾರು ಕಾರ್ಯಕ್ರಮ ಪ್ರಚಾರಗಳಲ್ಲಿ ಭೇಟಿ ಆಗಿದ್ದಾರೆ. ಹೀಗಿರುವಾಗ ಅಪ್ಪು ಅಗಲಿಕೆ ಅನುಶ್ರೀ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಅನುಶ್ರೀ ಅವರು ಅಪ್ಪು ಹುಟ್ಟುಹಬ್ಬದಂದು ಪುನೀತ್ ರಾಜ್‌ಕುಮಾರ್ ಸಮಾಧಿಗೆ ಹೋಗಿ ಪೂಜೆ ಮಾಡಿ ಬರುತ್ತಾರೆ.
ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಸಮಾಧಿಗೆ ಬಂದಿರುತ್ತಾರೆ. ಈ ವೇಳೆ ಅಶ್ವಿನಿ ಅವರೇ ಅನುಶ್ರೀ ಅವರಿಗೆ ಅಪ್ಪು ಬಳಸುತ್ತಿದ್ದ ಸೈಕಲ್ ಕೊಟ್ಟಿದ್ದಾರೆ. ಸೈಕಲ್ ಕೊಟ್ಟು ಅದನ್ನು ಓಡಿಸಲು ಹೇಳಿದ್ದರಂತೆ. ಆದರೆ ಅನುಶ್ರೀ ಅವರು ಅದರ ಮೇಲೆ ಅಪ್ಪು ಸರ್ ಸವಾರಿ ಮಾಡಿದ್ದು ಅದು ರಾಜನಸ್ಥಾನ ಎಂದು ಜೋಪಾನವಾಗಿ ಮನೆಯಲ್ಲಿ ನೋಡಿಕೊಂಡಿದ್ದಾರಂತೆ. ಈ ಮಾತನ್ನು ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.

ಅಪ್ಪು ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಬಾಡಿ ಫಿಟ್ ಆಗಿಸಲು ಸಾಧನವಾಗಿ ಬಳಸಿದ್ದು ಸೈಕಲ್ ಅನ್ನು. ಕೊರೊನಾ ಸಂದರ್ಭದಲ್ಲಿ ಅಪ್ಪು ಸೈಕಲ್ ಸವಾರಿ ಹೆಚ್ಚಾಗಿ ಮಾಡುತ್ತಿದ್ದರು. ನಂದಿ ಬೆಟ್ಟ ಹಾಗೂ ಇನ್ನಿತರ ಸ್ಥಳಗಳಿಗೂ ಅಪ್ಪು ಸೈಕಲ್ ಸವಾರಿ ಮಾಡಿರುವುದು ಇದೆ.
ತಮ್ಮ ಆಪ್ತರೊಂದಿಗೆ ಬೆಳಗಿನ ಜಾವ ಅಪ್ಪು ಸೈಕಲ್ ಓಡಿಸಿಕೊಂಡು ವಾತಾವರಣವನ್ನು ಅನುಭವಿಸುತ್ತಿದ್ದರು. ಕಾರಿನಲ್ಲಿ ಸೈಕಲ್ ತೆಗೆದುಕೊಂಡು ಹೋಗಿ ಪ್ರಶಾಂತವಾದ ಸ್ಥಲದಲ್ಲಿ ಅಪ್ಪು ಸೈಕಲ್ ಸವಾರಿ ಮಾಡಲು ಇಚ್ಚಿಸುತ್ತಿದ್ದರು. ಇದು ಅವರ ನೆಚ್ಚಿನ ಸೈಕಲ್ ಅಂತಲೇ ಹೇಳಬಹುದು. ಇದನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅನುಶ್ರೀಗೆ ನೀಡಿದ್ದಾರೆ. ಇದನ್ನು ಸಂತೋಷದಿಂದ ತೆಗೆದುಕೊಂಡ ಅನುಶ್ರೀ ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ.












Click it and Unblock the Notifications